MG ZS ಎಲೆಕ್ಟ್ರಿಕ್ ಕಾರಿನ ಮಾರಾಟದಲ್ಲಿ ಐತಿಹಾಸಿಕ ದಾಖಲೆ: ಟಾಟಾಗೆ ಶುರುವಾಗಿದೆ ಆತಂಕ
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆಯುತ್ತಿದೆ, ಇದರಿಂದ ಪ್ರಮುಖ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಸದ್ಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಪಾರುಪತ್ಯ ಸಾಧಿಸುತ್ತಿದೆ. ಈ ನಡುವೆ ಸದ್ದಿಲ್ಲದೇ ಎಂಜಿ ಎಲೆಕ್ಟ್ರಿಕ್ ಕಾರುಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ,
ಭಾರತದಲ್ಲಿ ಎಂಜಿ ಜೆಡ್ಎಸ್ (MG ZS)ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯ 10,000 ಸಾವಿರ ಯುನಿಟ್ ಗಳು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. 2020 ರಲ್ಲಿ ಬಿಡುಗಡೆಯಾದ ಈ ಎಸ್‍ಯುವಿಯು ಎಂಜಿ ಮೋಟಾರ್ ಇಂಡಿಯಾದ ಮೊದಲ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಟಾಟಾ ಮೋಟಾರ್ಸ್‌ನ ನಂತರ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ವಾಹನ ತಯಾತಕರಾಗಿದ್ದಾರೆ. ಎಂಜಿ ಮೋಟಾರ್ ಇಂಡಿಯಾ ಕಂಪನಿಗೆ ಮಾರಾಟದಲ್ಲಿ ಈ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯು ಉತ್ತಮ ಕೊಡುಗೆಯನ್ನು ನೀಡುತ್ತಿದೆ.

ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಸೆಗ್ಮೆಂಟ್-ಅತಿದೊಡ್ಡ 50.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಈ ಎಸ್‍ಯುವಿಯಲ್ಲಿ 143 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯುನ್ನು ಒಂದ್ ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 461 ಕಿಮೀ ಚಲಿಸುತ್ತದೆ. ಈ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಕೇವಲ 8.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
ಈ ಎಸ್‍ಯುವಿಯಲ್ಲಿ FWD ಸಿಸ್ಟಮ್, ಸಿಂಗಲ್-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಬಹು ಡ್ರೈವ್ ಮೋಡ್‌ಗಳೊಂದಿಗೆ ಬರುವುದನ್ನು ಮುಂದುವರೆಸಿದೆ. ನವೀಕರಿಸಿದ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಮತ್ತು ಸುಧಾರಿತ ಕಾರ್ ಕನೆಕ್ಟ್ ಫೀಚರ್ಸ್‌ಗಳೊಂದಿಗೆ 2021 ಮಾದರಿಗಿಂತ ಹೆಚ್ಚುವರಿ ಬೆಲೆಯನ್ನು ಪಡೆದುಕೊಂಡಿತು. ಬೆಲೆ ಏರಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ ಸಾಕಷ್ಟು ಹೊಸ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ಎಲೆಕ್ಟ್ರಿಕ್ ಎಸ್‍ಯುವಿಯು ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆ 8 ಲೆಯರ್ ಹೆರ್ ಪಿನ್ ಎಲೆಕ್ಟ್ರಿಕ್ ಮೋಟಾರ್ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಸಹ ಖಚಿತಪಡಿಸುತ್ತದೆ. ನವೀಕರಿಸಿದ ಮಾದರಿಯು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಈ ಎಸ್‍ಯುವಿಯಲ್ಲಿ ಈ ಹಿಂದಿನ ರೆಡ್, ವೈಟ್ ಮತ್ತು ಪೊಲಾರ್ ವೈಟ್ ಬಣ್ಣಗಳ ಜೊತೆಗೆ ಹೊಸ ಮಾದರಿಯಲ್ಲಿ ಸಿಲ್ವರ್, ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಎಂಜಿ ಮೋಟಾರ್ ಕಂಪನಿಯು ಫುಲ್ ಎಲ್‌ಇಡಿ ಯುನಿಟ್ ಹೊಂದಿರುವ ಹ್ವಾಕ್ ಐ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಫಾಗ್‌ಲ್ಯಾಂಪ್ ಹೊಂದಿದೆ. ಎಂಜಿ ಜೆಡ್ಎಸ್ ಇವಿಯು ಇದರ ಹಿಂದಿನ ಗ್ರಿಲ್ ಅನ್ನು ಬಾಡಿ ಕಲರ್ ಕವರ್ಡ್ ಪ್ಲೇಟ್ ನಿಂದ ಬದಲಾಯಿಸಲಾಗಿದೆ. ಜೊತೆಗೆ ಇನ್ ಟೆಕ್ ವಿನ್ಯಾಸವು ಸಹ ಹಳೆಯ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ.
ಮರುವಿನ್ಯಾಸಗೊಳಿಸಿದ 17 ಇಂಚಿನ ಟೊಮ್ಹಾಕ್ ಹಬ್ ಅಲಾಯ್ ವ್ಹೀಲ್ ಗಳು ಕಾರಿನ ಹೆಚ್ಚಿನ ಆಕರ್ಷಣೆ ನೀಡುತ್ತದೆ. ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೂ ಕೂಡಾ ನವೀಕರಿಸಿದ ಹಲವು ಬದಲಾವಣೆಗಳಾಗಿದೆ. ಇದರಲ್ಲಿ ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ದೊಡ್ಡದಾದ ಪನೊರಮಿಕ್ ಸನ್‌ರೂಫ್, ಪಿಎಂ 2.5 ಫಿಲ್ಟರ್ ಹೊಂದಿರುವ ಏರ್ ಪ್ಯೂರಿಫೈಯರ್ ಹೊಂದಿದೆ.
ಈ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಹೆಚ್‌ಡಿ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ. ನವೀಕರಿಸಿದ ವೈಶಿಷ್ಟ್ಯತೆಗಳಲ್ಲಿ ರಿಮೋಟ್ ಕಂಟ್ರೋಲ್‌ನೊಂದಿಗೆ ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್‌ಗಳ ಆಯ್ಕೆಗಳನ್ನು ಪಡೆಯಬಹುದಾಗಿದ್ದು, ಇನ್ನು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರುವ ರಿಯರ್ ಎಡಿಎಎಸ್ ಅನ್ನು ಹೊಂದಿದೆ.


Click it and Unblock the Notifications








