ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಕಳೆದ ಕೆಲವು ವರ್ಷಗಳಿಂದ ಸೂಪರ್‌ಬೈಕ್ ಖರೀದಿಸುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಪ್ರತಿ ವೀಕೆಂಡ್‌ನಲ್ಲಿಯು ಹೆದ್ದಾರಿಗಳಲ್ಲಿ ಸೂಪರ್‌ಬೈಕ್‌ಗಳ ತಂಡ ರೈಡ್ ಹೋಗುವ ದೃಶ್ಯಗಳು ಈಗ ಸಾಮಾನ್ಯವಾಗಿದೆ. ಸೂಪರ್ ಬೈಕ್‌ಗಳ ವೇಗ, ಕಾರ್ಯಕ್ಷಮತೆ ಮತ್ತು ಎಕ್ಸಾಸ್ಟ್ ನೋಟ್ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹೆಚ್ಚಿನ ಜನರ ಗಮನಸೆಳೆಯುತ್ತದೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಹೀಗೆ ವೀಕೆಂಡ್‌ನಲ್ಲಿ ಸೂಪರ್‌ಬೈಕ್‌ಗಳ ಒಂದು ತಂಡ ರೈಡಿಂಗ್‌ಗೆ ತೆರಳಿದ್ದಾರೆ. ಇವರು ತಮ್ಮ ರೈಡಿಂಗ್ ಅನ್ನು ಎಂಜಾಯ್ ಮಾಡುತ್ತಾ ಸಾಗುತ್ತಿರುವಾಗ ಟೋಲ್ ಬೂತ್ ನಂತರ ಪೊಲೀಸರು ಅವರನ್ನು ತಡೆದಿದ್ದರೆ. ನಂತರ ಬೈಕ್‌ಗಳ ಕೀಗಳನ್ನು ಕಿತ್ತುಕೊಂಡರು. ನಂತರ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹಿರಿಯ ಅಧಿಕಾರಿಗೆ ಮಾಹಿತಿಯನ್ನು ನೀಡಿದ್ದಾರೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ನಂತರ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿ ಮಾತನಾಡಿ, ಸೂಪರ್‌ಬೈಕ್‌ಗಳನ್ನು ಈಗ ಪುಣೆ-ಬೆಂಗಳೂರು ಹೆದ್ದಾರಿಯಿಂದ ನಿಷೇಧಿಸಲಾಗಿದೆ ಎಂದು ಹೇಳಿದರು. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲ. ನಂತರ ಸೂಪರ್‌ಬೈಕ್ ರೈಡರ್‌ಗಳಿಗೆ ದಂಡವನ್ನು ಕೂಡ ವಿಧಿಸಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಈ ಪ್ರದೇಶದಲ್ಲಿ ಅತಿವೇಗದ ಸೂಪರ್‌ಬೈಕ್‌ಗಳಿಂದಾಗಿ ಕೆಲವು ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗ್ರಾಮಸ್ಥರೊಂದಿಗೆ ಅಪಘಾತದಲ್ಲಿ ಸಿಲುಕಿದ್ದ ಸೂಪರ್‌ಬೈಕ್ ಸವಾರರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ,

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಸದ್ಯ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ. ಹಿರಿಯ ಪೊಲೀಸ್ ಅಧಿಕಾರಿ ಕೂಡ ಸೂಪರ್‌ಬೈಕ್ ರೈಡರ್ ಗಳಿಗೆ ರೈಡಿಂಗ್ ತೆರಳಲು ಬೇರೆ ರಸ್ತೆ ಹುಡುಕುವಂತೆ ಕೇಳಿಕೊಂಡರು. ಸೂಪರ್‌ಬೈಕ್ ಮಾಲೀಕರೊಬ್ಬರು ತಾವು ಎಲ್ಲಿ ರೈಡಿಂಗ್ ತೆರಳಬೇಕೆಂದು ಪೊಲೀಸರನ್ನು ಕೇಳಿದಾಗ, ಬೈಕ್‌ ಸವಾರರು ತಮಗಾಗಿ ವಿಶೇಷ ರಸ್ತೆಗಳನ್ನು ನಿರ್ಮಿಸುವಂತೆ ಸರ್ಕಾರವನ್ನು ಕೇಳಬೇಕು ಎಂದು ಪೊಲೀಸರು ಉತ್ತರಿಸಿದರು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಭಾರತದಲ್ಲಿ ಹೆಚ್ಚುತ್ತಿರುವ ಸೂಪರ್‌ಬೈಕ್‌ಗಳ ಸಂಖ್ಯೆಯಲ್ಲಿ, ಕಾನೂನುಗಳನ್ನು ಉಲ್ಲಂಘಿಸುವ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಹೆಚ್ಚಿನ ವೇಗ ಮತ್ತು ಅಪಾಯಕಾರಿ ರೈಡಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಕೂಡ ಸೂಪರ್‌ಬೈಕ್ ರೈಡರ್‌ಗಳಿಗೆ ಹಿಡಿಶಾಪವನ್ನು ಹಾಕುತ್ತಾರೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಆದರೆ ಪ್ರತಿಯೊಬ್ಬ ಸೂಪರ್‌ಬೈಕ್ ರೈಡರ್‌ಗಳು ಆ ರೀತಿ ರೈಡ್ ಮಾಡುತ್ತಾರೆ ಎಂದರ್ಥವಲ್ಲ. ಇದು ಕೆಲವು ರೈಡರ್‌ಗಳಿಗೆ ಮಾತ್ರ ಅನ್ವಹಿಸುತ್ತದೆ. ಕೆಲವರಿಂದಾಗಿ ಎಲ್ಲಾ ಸೂಪರ್‌ಬೈಕ್ ರೈಡರ್‌ಗಳಿಗೆ ಕೆಟ್ಟ ಹೆಸರು ಬರುತ್ತಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಸೂಪರ್‌ಬೈಕ್ ರೈಡರ್‌ಗಳು ತಮ್ಮ ವೇಗದ ಮಿತಿಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸೂಪರ್‌ಬೈಕ್‌ಗಳು ಅಂದರೆ ಅದು ಶರವೇಗದಲ್ಲಿ ಸಾಗುತ್ತದೆ. ಕೇವಲ ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದರಿಂದ ಚಿಕ್ಕ ಅಡೆತಡೆಗಳು ಎದುರಾದರು ದೊಡ್ಡ ಮಟ್ಟದ ಅಪಘಾತಗಳಿಗೆ ಕಾರಣವಾಗುತ್ತದೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಉದಾಹರಣೆಗೆ ಕಾರನ್ನು ಅಥವಾ ಇತರ ವಾಹನಗಳನ್ನು ಓವರ್ ಟೇಕ್ ಮಾಡಿ ವೇಗವಾಗಿ ಸಾಗುವಾಗ ಅದರ ಸೈಡ್ ಮೀರರ್ ತಗುಲಿ ಬೀಳಬಹುದು. ಅಲ್ಲದೇ ವೇಗದಲ್ಲಿ ಸಾಗುವಾಗ ಪ್ರಾಣೆಗಳ ಅಡ್ಡಬಂದರೆ ಆಗ ಕಂಟ್ರೋಲ್ ಮಾಡುವುದು ತುಂಬ ಕಠಿಣವಾಗಿರುತ್ತದೆ.

ಸೂಪರ್‌ಬೈಕ್ ರೈಡರ್‌ಗಳನ್ನು ಹೆದ್ದಾರಿಗಳಲ್ಲಿ ಪೊಲೀಸರು ತಡೆದು ನಿಲ್ಲಿಸುವುದು ಇದೇ ಮೊದಲಲ್ಲ. ಕೆಲವೇ ವಾರಗಳ ಹಿಂದೆ, ಬೆಂಗಳೂರು ಬಳಿ ಇದೇ ರೀತಿಯ ಘಟನೆ ನಡೆದಿದ್ದು, ಪೊಲೀಸರು ಬೈಕ್‌ ಸವಾರರಿಗೆ ಹೆದ್ದಾರಿಯನ್ನು ಬಳಸದಂತೆ ಮತ್ತು ಬೇರೆ ದಾರಿ ಕಂಡುಕೊಳ್ಳದಂತೆ ಕೇಳಿಕೊಂಡರು.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸೂಪರ್‌ಬೈಕ್‌ಗಳು ನಿಷೇಧ, 20ಕ್ಕೂ ಹೆಚ್ಚು ರೈಡರ್‌ಗಳಿಗೆ ಬಿತ್ತು ದಂಡ

ಪೊಲೀಸರ ಟಪ್ ರೋಲ್ಸ್ ನಿಂದಾಗಿ ಸೂಪರ್‌ಬೈಕ್ ರೈಡರ್‌ಗಳು ಹೆಚ್ಚಿನ ಸಂಕಟವನ್ನು ಅನುಭವಿಸುತ್ತಿದ್ದಾರೆ. ಪೊಲೀಸರ್ ಈ ನಿಲುವಿನ ಬಗ್ಗ್ಗೆ ಹಲವು ಬೈಕ್ ರೈಡರ್‌ಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Image Courtesy: Amey Tilloo

Most Read Articles

Kannada
English summary
Superbikes Banned From Pune-Bangalore Highway. Read In Kannada.
Story first published: Thursday, April 1, 2021, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X