ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಪ್ರಮುಖ ಟಯರ್ ತಯಾರಕ ಕಂಪನಿಯಾದ ಮಿಚೆಲಿನ್ ಭಾರತದಲ್ಲಿ ತನ್ನ ಎಲ್ಲ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಕಂಪನಿಯು ತನ್ನ ಟಯರ್‌ಗಳ ಬೆಲೆಯನ್ನು 8%ಗಳವರೆಗೆ ಹೆಚ್ಚಿಸಲು ನಿರ್ಧರಿಸಿದೆ.

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಕಂಪನಿಯು ತಯಾರಿಸುವ ಎಲ್ಲಾ ಆಟೋಮೋಟಿವ್ ಟಯರ್‌ಗಳ ಬೆಲೆಯನ್ನು ಜೂನ್ 18ರಿಂದ ಹೆಚ್ಚಿಸಲಾಗುವುದು. ಅಲ್ಲಿಯವರೆಗೆ ಟಯರ್‌ಗಳು ಹಳೆಯ ದರದಲ್ಲಿಯೇ ಮಾರಾಟವಾಗಲಿವೆ ಎಂದು ಮಿಚೆಲಿನ್ ಕಂಪನಿ ತಿಳಿಸಿದೆ.

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಮಿಚೆಲಿನ್ ಕಂಪನಿಯು ಈ ಬಗ್ಗೆ ನಿನ್ನೆ ಮಾಹಿತಿ ನೀಡಿದೆ. ಭಾರತ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದಲ್ಲಿ ಟಯರ್ ಬೆಲೆಯನ್ನು 6%ನಿಂದ 8%ವರೆಗೂ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಪ್ರಯಾಣಿಕ ಕಾರುಗಳ ಟಯರ್‌ ಬೆಲೆಯನ್ನು 6%ನಷ್ಟು ಹಾಗೂ ಲಘು ಟ್ರಕ್ ಮತ್ತು ಬೈಕುಗಳ ಟಯರ್‌ ಬೆಲೆಯನ್ನು 8%ನಷ್ಟು ಹೆಚ್ಚಿಸುವುದಾಗಿ ಮಿಚೆಲಿನ್ ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಕಮರ್ಷಿಯಲ್ ವಾಹನಗಳ ಟಯರ್‌ಗಳಿಗೂ ಈ ಬೆಲೆ ಏರಿಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ವಿಶ್ವಾದ್ಯಂತ ಹೆಚ್ಚುತ್ತಿರುವ ಉತ್ಪಾದನೆ ಹಾಗೂ ಸಾರಿಗೆ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಟಯರ್‌ಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಮಿಚೆಲಿನ್ ಟಯರ್‌ಗಳ ಬೆಲೆ ಏರಿಕೆಯು ಭಾರತದಲ್ಲಿ ಜೂನ್ 18ರಿಂದ ಹಾಗೂ ಮಧ್ಯಪ್ರಾಚ್ಯದಲ್ಲಿ ಜುಲೈ 1ರಿಂದ ಜಾರಿಗೆ ಬರಲಿದೆ. ವಿತರಕರು ಹಾಗೂ ರಿಟೇಲ್ ಮಾರಾಟಗಾರರ ಮೂಲಕ ಬೆಲೆಗಳ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಮಿಚೆಲಿನ್‌ ಕಂಪನಿಯು ತಮಿಳುನಾಡಿನಲ್ಲಿ ಟಯರ್ ಉತ್ಪಾದನಾ ಘಟಕವನ್ನು ಹೊಂದಿದೆ. ಸುಮಾರು 290 ಎಕರೆ ವಿಸ್ತೀರ್ಣದಲ್ಲಿರುವ ಈ ಘಟಕವು ಬಸ್ಸು, ಲಾರಿ, ಕಾರು ಹಾಗೂ ಬೈಕುಗಳಿಗಾಗಿ ಟಯರ್‌ಗಳನ್ನು ಉತ್ಪಾದಿಸುತ್ತದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಮಿಚೆಲಿನ್ ಕಂಪನಿಯ ಪ್ರಧಾನ ಕಚೇರಿಯು ಫ್ರಾನ್ಸ್'ನ ಕ್ಲರ್ಮಾಂಟ್ ಫೆರಾಂಡ್'ನಲ್ಲಿದೆ. ಕಂಪನಿಯು ಸದ್ಯಕ್ಕೆ 170ಕ್ಕೂ ಹೆಚ್ಚು ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ. ಕಂಪನಿಯು ನೇರವಾಗಿ ಸುಮಾರು 1,23,600 ಜನರಿಗೆ ಉದ್ಯೋಗ ನೀಡಿದೆ.

ಟಯರ್‌ಗಳ ಬೆಲೆಯನ್ನು 8%ನಷ್ಟು ಏರಿಕೆ ಮಾಡಿದ ಖ್ಯಾತ ಟಯರ್ ತಯಾರಕ ಕಂಪನಿ

ಮಿಚೆಲಿನ್ ಕಂಪನಿಯು ವಿಶ್ವಾದ್ಯಂತ 71 ಟಯರ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಘಟಕಗಳ ಮೂಲಕ ಕಂಪನಿಯು ವರ್ಷಕ್ಕೆ 170 ಮಿಲಿಯನ್ ಟಯರ್'ಗಳನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Michelin increases tyres price in India. Read in Kannada.
Story first published: Wednesday, June 9, 2021, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X