8 ಕೋಟಿ ಬೆಲೆಬಾಳುವ ಫೆರಾರಿ ಕಾರು ಅಪಘಾತ
ನಿಮ್ಮ ಕಾರು ಅಪಘಾತಕ್ಕೀಡಾಗಿದೆ ಇದನ್ನೊಮ್ಮೆ ಊಹಿಸಿ ನೋಡಿ. ಇಂಥ ಘಟನೆಯನ್ನು ನಿಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವೇ? ಅದರಲ್ಲೂ ಈಗಷ್ಟೇ ಖರೀದಿಸಿದ ಇನ್ನು ಕೂಡಾ ಡ್ರೈವಿಂಗ್ ಆನಂದಿಸದ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರೊಂದು ಢಿಕ್ಕಿಯಾದ್ದಲ್ಲಿ ನಿಮ್ಮ ಮನೋಸ್ಥಿತಿ ಹೇಗಿರಬಹುದು?
ಹೌದು, ಎಂಟು ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುವ ಲಾ ಫೆರಾರಿ ಸೂಪರ್ ಕಾರು ಇಂತಹದೊಂದು ಅಪಘಾತಕ್ಕೊಳಗಾಗಿದೆ. ಇದರೊಂದಿಗೆ ಇದನ್ನು ಖರೀದಿಸಿದ ಮಾಲಿಕನ ಪರಿಸ್ಥಿತಿಯಂತೂ ದಯನೀಯವಾಗಿತ್ತು.

ಪಶ್ಚಿಮ ಯುರೋಪ್‌ನ ಮೊನಕೊದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮುಂಭಾಗದಿಂದ ಬರುತ್ತಿದ್ದ ಫೋಕ್ಸ್‌ವ್ಯಾಗನ್ ಗಾಲ್ಫ್ ಕಾರಿಗೆ ಫೆರಾರಿ ಸೂಪರ್ ಕಾರು ಢಿಕ್ಕಿ ಹೊಡೆದಿತ್ತು.

ನಿಜವಾಗಿಯೂ ಅಪಘಾತ ಹೇಗೆ ಸಂಭವಿಸಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎರಡು ಕಾರುಗಳಲ್ಲೂ ಏರ್‌ಬ್ಯಾಗ್ ಇದ್ದಿದ್ದರಿಂದ ಚಾಲಕರಿಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇವೆಲ್ಲಕ್ಕಿಂತಲೂ ಆಸಕ್ತಿದಾಯಕ ವಿಚಾರವೆಂದರೆ ಈ ಫೆರಾರಿ ಕಾರನ್ನು ದುರಸ್ತಿ ಮಾಡಿದರೆ ಲಕ್ಷಗಟ್ಟಲೆ ಖರ್ಚು ತಗುಲಲಿದ್ದು, ಮಾಲಿಕ ಇಂತಹ ಫೋಕ್ಸ್‌ವ್ಯಾಗನ್ ಗಾಲ್ಫ್ ಕಾರನ್ನೇ ಖರೀದಿಸಬಹುದಾಗಿದೆ.

ಕಳೆದ ವರ್ಷವು ಇಂತಹದೊಂದು ಪ್ರಕರಣ ದಾಖಲಾಗಿತ್ತು. ಅಂದು ಟ್ರಕ್‌ವೊಂದರ ಹಿಂದಕ್ಕೆ ಫೆರಾರಿ ಮುತ್ತಿಕ್ಕಿತ್ತು.

ಒಟ್ಟಿನಲ್ಲಿ ದುಬಾರಿ ಕಾರನ್ನು ಖರೀದಿಸುವಾಗ ಅಷ್ಟೇ ಎಚ್ಚರಿಕೆ ವಹಿಸುವುದು ಮುಖ್ಯ. ಆಮೇಲೆ ರಿಪೇರಿ ವೆಚ್ಚವನ್ನು ನಿಭಾಯಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.


Click it and Unblock the Notifications








