ದೀಪಾವಳಿಗೂ ಮೊದಲೇ 15 ಕಾರುಗಳು ಗಿಫ್ಟ್.. ಮಾಲೀಕನಿಂದ ಸಡನ್ ಸರ್ಪ್ರೈಸ್, ನೌಕರರಿಗೆ ಕಣ್ತುಂಬಿ ಬಂತು!

ಪ್ರಸ್ತುತ ತಿಂಗಳ ಸಂಬಳಕ್ಕೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ದುಡಿಸಿಕೊಳ್ಳುತ್ತವೆ. ಎಲ್ಲೋ ಒಂದಷ್ಟು ಕಂಪನಿಗಳು ಹಬ್ಬಗಳಿಗೆ ಬೋನಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೂಡ ಕಲ್ಪಿಸುತ್ತವೆ. ಆದರೆ ಇಲ್ಲೊಂದು ಕಂಪನಿ ಮಾಲೀಕ, ತನ್ನ ಸಹೋದ್ಯೋಗಿಗಳ ಕೆಲಸ ಮೆಚ್ಚಿ ಸದ್ದಿಲ್ಲದೇ ಅವರಿಗೆ ದುಬಾರಿ ಬೆಲೆಯ ಕಾರುಗಳನ್ನು ದೀಪಾವಳಿ ಹಬ್ಬಕ್ಕೂ ಮೊದಲೇ ಉಡುಗೊರೆ ನೀಡಿದ್ದಾರೆ. ಯಾವುದೇ ಸುಳಿವಿಲ್ಲದೇ ಗಿಫ್ಟ್ ಪಡೆದ ಕಂಪನಿ ನೌಕರರ ಕಣ್ಣುಗಳು ಮಾತ್ರ ಸಂತೋಷದಿಂದ ಒದ್ದೆಯಾದವು.

ಹರಿಯಾಣದ ಪಂಚಕುಲ ಮೂಲದ ಔಷಧಿ ತಯಾರಿಕಾ ಕಂಪನಿ ಮಿಟ್ಸ್‌ ಹೆಲ್ತ್‌ಕೇರ್ (Mits Healthcare), ಮುಖ್ಯಸ್ಥ ಎಂ.ಕೆ.ಭಾಟಿಯಾ ಅವರು, ನೂತನ ಕಾರುಗಳನ್ನು ಉಡೊಗೊರೆಯಾಗಿ ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಒಟ್ಟು 15 ಉದ್ಯೋಗಿಗಳಿಗೆ ಸ್ವತಃ ತಾವೇ ಹೊಸ ಕಾರಿನ ಕೀ ಹಸ್ತಾಂತರಿಸಿದ್ದಾರೆ. 13 ಟಾಟಾ ಪಂಚ್ ಹಾಗೂ 2 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳು ಕಂಪನಿ ಸಿಬ್ಬಂದಿಗೆ ಗಿಫ್ಟ್ ರೂಪದಲ್ಲಿ ದೊರೆತಿವೆ.

Mits Healthcare Owner Gifts 15 Tata Punch And Maruti Grand Vitara Cars To Employees Ahead Of Diwali

ನೂತನ ಕಾರನ್ನು ಉಡೊಗೊರೆಯಾಗಿ ಪಡೆದ ಉದ್ಯೋಗಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ತಮ್ಮ ಮಾಲೀಕರಿಗೆ ಮನಪೂರ್ವಕವಾಗಿ ಧನ್ಯವಾದ ಅರ್ಪಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಬ್ಬಂದಿಯೊಬ್ಬರು, 'ನಾನು 3 ವರ್ಷಗಳ ಹಿಂದೆ ಈ ಕಂಪನಿಗೆ ಕೆಲಸಕ್ಕೆ ಸೇರಿದಾಗ, ನಮ್ಮ ಮುಖ್ಯಸ್ಥರು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಕನಸಿದೆ ಎಂದು ಹೇಳಿದ್ದರು. ಅದೀಗ ಸಹಕಾರಗೊಂಡಿದೆ' ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಕೂಡ ಮಿಟ್ಸ್‌ ಹೆಲ್ತ್‌ಕೇರ್ ಮಾಲೀಕ ಎಂ.ಕೆ.ಭಾಟಿಯಾ ಅವರು, 12 ಉದ್ಯೋಗಿಗಳಿಗೆ ಕಾರುಗಳನ್ನು ಉಡೊಗೊರೆ ರೂಪದಲ್ಲಿ ನೀಡಿದ್ದರು. ಸದ್ಯ, ನೌಕರರು ಗಿಫ್ಟ್ ಪಡೆದಿರುವ ಟಾಟಾ ಪಂಚ್ ಕಾರಿನ ವಿಶೇಷತೆ ಬಗ್ಗೆ ಹೇಳುವುದಾದರೆ, ಇದೊಂದು ಎಸ್‌ಯುವಿಯಾಗಿದ್ದು ರೂ.6.13 ರಿಂದ ರೂ.10.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Mits Healthcare Owner Gifts 15 Tata Punch And Maruti Grand Vitara Cars To Employees Ahead Of Diwali

ಈ ಟಾಟಾ ಪಂಚ್ (Tata Punch) ಎಸ್‌ಯುವಿ, 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಪ್ರಯಾಣಿಸಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 19 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಕುರಿತಂತೆ ಮಾತನಾಡುವುದಾದರೆ, ಇದು ಜನಪ್ರಿಯ ಎಸ್‌ಯುವಿಯಾಗಿದೆ. ರೂ.10.99 ರಿಂದ ರೂ.20.09 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಹೈಬ್ರಿಡ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 19.38 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ಕೂಡ ಕೊಡುತ್ತದೆ. ಈ ಕಾರಿನಲ್ಲಿ 5 ಜನರು ಸಂಚರಿಸಬಹುದು.

ನೂತನ ಗ್ರ್ಯಾಂಡ್ ವಿಟಾರಾ ಕಾರು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ಒಳಗೊಂಡಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ಹಿಲ್ ಡಿಸೆಂಟ್ ಕಂಟ್ರೋಲ್‌ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 16, 2024, 15:08 [IST]
English summary
Mits healthcare owner gifts 15 tata punch and maruti grand vitara cars to employees ahead of diwali
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+