1,640 ಅಡಿ ಎತ್ತರದಿಂದ ಕೆಳಗೆ ಬಿದ್ದರೂ ಕಾರಿನಲ್ಲಿದ್ದ ಪ್ರಯಾಣಿಕರು ಸೇಫ್: ಕಾರಿನ ಸುರಕ್ಷತೆಗೆ ಸೋತ ಯಮ
ಕಾರೊಂದು ಯಾವುದೇ ಎತ್ತರದಿಂದ ಕೆಳಗೆ ಬಿದ್ದರೂ, ಆ ಕಾರಿನಲ್ಲಿರುವ ಪ್ರಯಾಣಿಕರ ಪ್ರಾಣಕ್ಕೆ ಅದು ಅಪಾಯಕಾರಿಯೇ ಸರಿ. ಬಹುತೇಕ ಕಾರು ಉರಳಿ ಬಿದ್ದ ಪ್ರಸಂಗಗಳಲ್ಲಿ ಬದುಕುಳಿಯುವ ಪ್ರಯಾಣಿಕರ ಸಂಖ್ಯೆ ವಿರಳವೇ ಸರಿ. ಆದರೆ ಇಲ್ಲೊಂದಿ ಕಡೆ ಅದಕ್ಕೆ ತೀರಾ ತದ್ವಿರುದ್ದ ಘಟನೆಯೊಂದು ನಡೆದಿದೆ.
ಇಲ್ಲೊಂದು ಕಡೆ ಸುಮಾರು 1,640 ಅಡಿಗಳು ಅಥವಾ ೫೦೦ ಮೀಟರ್ ಮೇಲಿನಿಂದ ಕಾರೊಂದು ಬಿದ್ದರೂ ಅದರಲ್ಲಿದ್ದ ಪ್ರಯಾಣಿಕರು ಪವಾ ಸದೃಶವಾಗಿ ಪಾರಾಗಿರುವ ಘಟನೆಯೊಂದು ನಡೆದಿದೆ. ಈ ಅಪರೂಪದ ಘಟನೆಯು ಕೇರಳದ ತಿರುವನಂತಪುರಂ ಎಂಬಲ್ಲಿ ನಡೆದಿದ್ದು, ಕಾರನ್ನು ಮಿತ್ಸಿಬಿಷಿ ಪಜೇರೋ ಎಸ್‌ಯುವಿ ಎಂದು ಗುರುತಿಸಲಾಗಿದೆ.

ಇನ್ನು ಈ ಎಸ್‌ಯುವಿಯು ಇಷ್ಟೊಂದು ಎತ್ತರದಿಂದ ಬೀಳಲು ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಅಲ್ಲಿದ್ದ ಸ್ಥಳೀಯರ ಪ್ರಕಾರ ಈ ಮಿತ್ಸಿಬಿಷಿ ಪಜೇರೋ ಕಾರಿನ ಬ್ರೇಕ್ ಫೈಲ್ ಆದ ಕಾರಣ ಈ ಕಾರು ಮೇಲಿಂದ ಕೆಳಕ್ಕೆ ಬಿದ್ದಿದೆ ಎಂದು ತಿಳಿಸಿದ್ದಾರೆ. ಆದರೆ ಘಟನೆಗೆ ನಿರ್ಧಿಷ್ಟ ಕಾರಣ ತಿಳಿದು ಬಂದಿಲ್ಲ.
ಇನ್ನು ಅಪಘಾತಕ್ಕೆ ಸಂಭಧಿಸಿದಂತೆ ಕಾರಿನ ಚಿತ್ರಗಳು ಹರಿದಾಡುತ್ತಿದ್ದು, ಇದರಲ್ಲಿ ಕೆಂಪು ಬಣ್ಣದ ಪಜೇರೋವನ್ನು ನಾವು ಕಾಣಬಹುದಾಗಿದೆ. ಚಿತ್ರದಲ್ಲಿ ಕಾಣುವಂತೆ ಈ ಪಜೇರೋ ಎಸ್‌ಯುವಿಯು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು ಅದರಲ್ಲಿದ್ದ ಪ್ರಯಾಣಿಕರು ಹೇಗೆ ಸುರಕ್ಷಿತರಾಗಿ ಹೊರ ಬಂದರು ಎಂಬ ವಿಷಯವೇ ನಿಗೂಢವಾಗಿಯೇ ಉಳಿದಿದೆ.

ಏನೇ ಆದರೂ ಅದರಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೇ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂತಹ ಸಂಧರ್ಭಗಳಲ್ಲಿ ಸೀಟ್ ಬೆಲ್ಟ್ ಧರಿಸಿದ್ದರೆ ಮಾತ್ರ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಲು ಸಾಧ್ಯ. ಇಲ್ಲದಿದ್ದರೆ ಕಾರಿಂದ ಹೊರಗೆಸೆಯಲ್ಪಟ್ಟು ಮಾರಣಾಂತಿಕ ಗಾಯಗಳಾಗುವ ಸಾಧ್ಯತೆಗಳೇ ಹೆಚ್ಚು.
ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಕಾರನ್ನು ಓಡಿಸಲು ಉತ್ತಮ ಡ್ರೈವಿಂಗ್ ಅನುಭವವುಳ್ಳ ಚಾಲಕರು ಅತ್ಯಗತ್ಯ. ಇದೇ ಸಂಧರ್ಭದಲ್ಲಿ ಕಾರು ಸಹ ಉತ್ತಮ ಕಂಡೀಷನ್‌ನಲ್ಲಿ ಇರಬೇಕಾಗುತ್ತದೆ. ಒಂದು ವೇಳೆ ಕಾರಿನ ಯಾವುದಾದರೂ ಒಂದು ಭಾಗ ಕೈಕೊಟ್ಟರೂ ಆ ಕಾರಿನ ಪ್ರಯಾಣಿಕರು ಪೇಚಾಟಕ್ಕೆ ಸಿಲುಕುವುದಂತೂ ಖಂಡಿತಾ.
ಇನ್ನು ಘಟನೆಯ ಕಾರು ಮಿತ್ಸಿಬಿಷಿ ಪಜೇರೋ ಭಾರತದಲ್ಲಿ ಮಾರಾಟವಾದ ಅತ್ಯುತ್ತಮ ಎಸ್‌ಯುವಿಗಳಲ್ಲಿ ಒಂದು. ಇದು ಇದರ ರಗಡ್ ಲುಕ್ ಮತ್ತು ಅದ್ಭುತ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿದೆ. 2477 cc ಸಿಸಿ ಇಂಜಿನ್ ಹೊಂದಿರುವ ಈ ಕಾರು ಫೋರ್ ವ್ಹೀಲ್ ಮತ್ತು ರೇರ್ ವ್ಹೀಲ್ ಡ್ರೈವ್ ಆಪ್ಷನ್‌ಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications