ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಬೆಂಗಳೂರು ನಗರದ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಪುತ್ರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಜಗಳ ಮಾಡಿದ್ದಾರೆ. .

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ರಾಜಭವನದ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಅತಿವೇಗದಲ್ಲಿ ಕಾರನ್ನು ಓಡಿಸಿಕೊಂಡು ಬಂದ ಲಿಂಬಾವಳಿಯವರ ಪುತ್ರಿ, ಪೊಲೀಸರು ತಡೆಯಲು ಹೋದಾಗ ಅವರನ್ನು ಲೆಕ್ಕಿಸದೆ ಹಾಗೆಯೇ ಮುನ್ನುಗ್ಗಿದ್ದಾರೆ.

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಈ ವೇಳೆ ಪೊಲೀಸರು ಬೆನ್ನಟ್ಟಿದ್ದು ಪೊಲೀಸರು ಹಿಂಬಾಲಿಸುತ್ತಿರುವುದನ್ನು ಕಂಡ ಲಿಂಬಾವಳಿ ಪುತ್ರಿ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೊಟೇಲ್ ಒಳಗೆ ಹೋಗಿದ್ದಾರೆ. ರ‍್ಯಾಶ್ ಡ್ರೈವ್ ಮಾಡಿಕೊಂಡು ಹೋದ ಯುವತಿಯನ್ನು ಬೆನ್ನಟ್ಟಿದ್ದ ಪೊಲೀಸರು ಹೊಟೇಲ್ ಗೇಟಿನಲ್ಲೇ ಕಾದು ಹೊರಬರುತ್ತಿದ್ದಂತೆಯೇ ತಡೆದಿದ್ದಾರೆ.

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಈ ವೇಳೆ ಪೊಲೀಸರೊಂದಿಗೆ ಯುವತಿ ನಾನು ಯಾರು ಗೊತ್ತಾ ಶಾಸಕ ಅರವಿಂದ ಲಿಂಬಾವಳಿ ಮಗಳು ಎಂದು ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ನಿಂದಿಸಿದ್ದಾರೆ. ರ‍್ಯಾಶ್ ಡ್ರೈವ್ ಫೈನ್ ಸೇರಿ ಹಳೆಯ ಕೇಸುಗಳ ಫೈನ್ ವಸೂಲಿ ಮಾಡಿರುವ ಪೊಲೀಸರು ಯುವತಿಯಿಂದ ಒಟ್ಟು 10 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಘಟನೆ ಬಗ್ಗೆ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಪರಿಶೀಲನೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಪ್ಪು ಯಾರೇ ಮಾಡಿದರೂ ತಪ್ಪೇ ಕಾನೂನು ಅಡಿಯಲ್ಲಿ ಎಲ್ಲರೂ ಸಮಾನರೇ, ತನಿಖೆಯ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಅತಿವೇಗದ ಚಾಲನೆ ಮಾಡಿಕೊಂಡು ಬಂದಿರುವುದು ಮತ್ತು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಅರವಿಂದ ಲಿಂಬಾವಳಿ ಪುತ್ರಿಗೆ ಪೊಲೀಸರು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಕಟ್ಟಿದ ಬಳಿಕ ಪೊಲೀಸರು ಕಾರನ್ನು ಬಿಟ್ಟು ಕಳುಹಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಮಾಧ್ಯಗಳ ವಿರುದ್ಧ ಕಿಡಿ

ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಮಾಧ್ಯಮಗಳ ವಿರುದ್ಧ ಆಕ್ರೋಶಗೊಂಡ ಲಿಂಬಾವಳಿ ಪುತ್ರಿ, ಕ್ಯಾಮಾರಾಗಳನ್ನು ಆಫ್‌ ಮಾಡುವಂತೆ ಅವಾಜ್ ಹಾಕಿದರು. ಅಲ್ಲದೇ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ರೇಗಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಟ್ರಾಫಿಕ್‌ ಪೊಲೀಸರೊಂದಿಗೆ ಶಾಸಕ ಲಿಂಬಾವಳಿ ಪುತ್ರಿ ಕಿರಿಕ್: ನಿಯಮ ಉಲ್ಲಂಘಿಸಿದ್ದಲ್ಲದೇ ದಬ್ಬಾಳಿಕೆ

ಈ ಬಗ್ಗೆ ಕ್ಷಮೆಯಾಚಿಸಿದ ಲಿಂಬಾವಳಿ " ಅತಿ ವೇಗದಲ್ಲಿ ಚಾಲೆನ ಮಾಡಿ ಪೊಲೀಸರನ್ನು ಲೆಕ್ಕಿಸದೆ ಹಾಗೇ ಹೋಗಿದ್ದಾಳೆ. ನನ್ನ ಮಗಳು ತನ್ನ ಸ್ನೇಹಿತನ ಜೊತೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಆರೋಪ ಮಾಡಲಾಗುತ್ತಿದೆ. ಆದರೆ, ಅವಳು ಸರ್ ಎಂದು ಹೇಳುತ್ತಿದ್ದಳು. ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ"ಎಂದು ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

Most Read Articles

Kannada
English summary
MLA Aravind Limbavalis daughter rash driving and abuses cops who stoped her
Story first published: Friday, June 10, 2022, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X