ದಂಡ ಹಾಕ್ತೀರಾ...ಸಸ್ಪೆಂಡ್ ಮಾಡಿಸ್ತೇನೆ ಹುಷಾರ್!...ಕರ್ತವ್ಯ ನಿರತ ಪೊಲೀಸರೊಂದಿಗೆ ಶಾಸಕನ ದರ್ಪ

ಪೊಲೀಸರು ನಿಯಮಗಳನ್ನು ಪಾಲಿಸದಿದ್ದರೆ ಅಥವಾ ಕಾನೂನುಬಾಹಿರವಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕಾಗಿ ಶಿಕ್ಷೆಗೆ ಗುರಿಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಇತ್ತೀಚೆಗೆ ಭಾರತದಲ್ಲಿ ವಿಚಿತ್ರವಾದ ಘಟನೆ ನಡೆದಿದೆ, ನಿಯಮಗಳನ್ನು ಅನುಸರಿಸದವರಿಗೆ ದಂಡ ಹಾಕುತ್ತಿದ್ದ ಪೊಲೀಸರಿಗೆ ಶಾಸಕರೊಬ್ಬರು ಗದರಿಸಿದ್ದಾರೆ. ದಂಡ ಹಾಕ್ತೀರಾ..ಸಸ್ಪೆಂಡ್ ಮಾಡಿಸ್ತೇನೆ ಹುಷಾರ್ ಎಂದು ಆವಾಜ್ ಹಾಕಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸಿಧೌಲಿಯಲ್ಲಿ ನಡೆದ ವಿಲಕ್ಷಣ ಘಟನೆ ಇದಾಗಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದ ಸಾಮಾನ್ಯ ಜನರಿಗೆ ದಂಡ ವಿಧಿಸಿದ್ದಕ್ಕಾಗಿ ಕ್ಷೇತ್ರದ ಶಾಸಕ ಮನೀಶ್ ರಾವತ್ ಪೊಲೀಸರನ್ನು ನಿಂದಿಸಿದ್ದಾರೆ. ಡಿಕೋಡ್ ಟ್ರೆಂಡ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ನಿಯಮಗಳನ್ನು ಅನುಸರಿಸಲು ಒತ್ತಾಯಿಸುವ ಮೂಲಕ ಸಾಮಾನ್ಯ ಜನರಿಗೆ ಕಿರುಕುಳ ನೀಡಿದ್ದಕ್ಕಾಗಿ ರಾವತ್ ಪೊಲೀಸರನ್ನು ಗದರಿಸುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ವೀಡಿಯೋದಲ್ಲಿ, ಪೊಲೀಸರು ನಿಯಮಗಳನ್ನು ಪಾಲಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ನಿಯಮಗಳನ್ನು ಅನುಸರಿಸಲು ನಾಗರಿಕರಿಗೂ ಹೇಳುತ್ತಿದ್ದರು. ಅವರು ಹಾಗೆ ಮಾಡದಿದ್ದರೆ, ಪೊಲೀಸರು ಚಲನ್‌ಗಳ ಮೂಲಕ ದಂಡ ವಿಧಿಸುತ್ತಿದ್ದರು. ಆದರೆ, ಪೊಲೀಸರಿಗೆ ಗದರಿಸಿ ಬೇರೆಡೆಗೆ ವರ್ಗಾವಣೆ ಮಾಡುವಂತೆ ಶಾಸಕ ತಾಕೀತು ಮಾಡಿದ್ದಾರೆ. ಸಾಮಾನ್ಯ ನಾಗರಿಕರ ಬೆಂಬಲ ಪಡೆಯಲು ಶಾಸಕರು ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ, ಆದರೆ ಜನರು ಮಾತ್ರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ತಿಳಿದುಬಂದಿದೆ.

ಸಾರ್ವಜನಿಕರ ಬೆಂಬಲ ಪಡೆಯುವ ಸಲುವಾಗಿ ಶಾಸಕ ಮಾಡಿದ ಕೃತ್ಯಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಪೋಲೀಸರು ಕೇವಲ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆಂದು ತೋರುತ್ತದೆ, ಆದರೆ ಶಾಸಕರು ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು ಪೊಲೀಸರ ಮೇಲೆ ಅವರ ದರ್ಪವನ್ನು ತೋರಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಶಾಸಕರು ವಾಕ್ಪ್ರಹಾರ ಮಾಡುತ್ತಿದ್ದರೆ ಕೆಲವರು ವಿಡಿಯೋ ಮಾಡಿದರೆ ಇನ್ನೂ ಕೆಲವರು ಸ್ಥಳವನ್ನು ಸುತ್ತುವರೆದು ಇಡೀ ಕೃತ್ಯವನ್ನು ಸಿನಿಮಾದಂತೆ ನೋಡಿ ಆನಂದಿಸಿದ್ದಾರೆ.

ಒಬ್ಬ ಎಂಎಲ್ಎ ಪೊಲೀಸರನ್ನು ಗದರಿಸುತ್ತಿರುವುದು ಇದೇ ಮೊದಲಲ್ಲ, ಪೋಲೀಸರು ತಮ್ಮ ಮೂಲಭೂತ ಕರ್ತವ್ಯವನ್ನು ಅನುಸರಿಸಿದ್ದಕ್ಕಾಗಿ ಹಲವರಿಂದ ಹಲವು ಬಾರಿ ನಿಂದನೆಗೊಳಗಾಗಿದ್ದಾರೆ. ದೇಶದಲ್ಲಿ ಕೆಲವರು ಶಾಸಕ, ಸಚಿವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಹಲವು ಉದಾಹರಣೆಗಳು ಇವೆ. ಟ್ರಾಫಿಕ್‌ನಲ್ಲಿಯೂ ಸಹ, ರಾಜಕಾರಣಿಗಳು ಮಿತಿಮೀರಿದ ವೇಗ, ಅಧಿಕೃತ ವಾಹನಗಳ ತಪ್ಪು ಬಳಕೆ ಮತ್ತು ಸಾಮಾನ್ಯ ನಿಯಮಗಳನ್ನು ಉಲ್ಲಂಘಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸುವ ನಿದರ್ಶನಗಳನ್ನು ನಾವು ನೋಡಿದ್ದೇವೆ.

ಅಷ್ಟೇ ಅಲ್ಲ, ಹೆಲ್ಮೆಟ್ ಧರಿಸದಿರುವುದು, ರೈಡಿಂಗ್ ಮಾಡುವಾಗ ಫೋನ್ ನಲ್ಲಿ ಮಾತನಾಡುವುದು ಅಥವಾ ರಾಂಗ್ ಲೇನ್ ನಲ್ಲಿ ಡ್ರೈವಿಂಗ್/ರೈಡ್ ಮಾಡುವಂತಹ ಕಾನೂನುಗಳನ್ನು ಉಲ್ಲಂಘಿಸಿ ಸಿಕ್ಕಿಬೀಳುವ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಬೆಂಬಲಿಸುತ್ತಾರೆ. 2019 ರಲ್ಲಿ, ರಾಜಕಾರಣಿಗಳು ಬಳಸುವ ಕಾರುಗಳ ಮೇಲೆ ನಡೆಸಿದ ಅಧ್ಯಯನವು ಅವುಗಳಲ್ಲಿ ಹೆಚ್ಚಿನವು ಕಾನೂನುಗಳನ್ನು ಉಲ್ಲಂಘಿಸಿರುವ ಕುರಿತು ತೋರಿದೆ. ಔಟ್‌ಲುಕ್ ಇಂಡಿಯಾ ಸಂಗ್ರಹಿಸಿದ ದತ್ತಾಂಶವು 18 ಪ್ರಮುಖ ರಾಜಕಾರಣಿಗಳು ದಂಡವನ್ನು ಸ್ವೀಕರಿಸಿರುವುದಾಗಿ ವರದಿ ಮಾಡಿದೆ.

ದೆಹಲಿ ಪೊಲೀಸರ ಡೇಟಾದಂತೆ ಪ್ರಮುಖ ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಅವರು ಹೆಚ್ಚಿನ ಸಂಖ್ಯೆಯ ದಂಡಗಳನ್ನು ಮಾಡಿದ್ದಾರೆ ಮತ್ತು ಹದಿನಾರು ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಉಲ್ಲಂಘನೆಗಳಲ್ಲಿ ಸಿಗ್ನಲ್ ಜಂಪಿಂಗ್, ಮಿತಿಗಿಂತ ಹೆಚ್ಚಿನ ವೇಗದ ಚಾಲನೆ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಗಳು ಸೇರಿವೆ. ನಮ್ಮ ರಾಜ್ಯದಲ್ಲೂ ಈ ಹಿಂದೆ ಹಲವರು ರಾಜಕಾರಣಿಗಳಿಂದ ಇಂತಹ ನಿಯಮ ಉಲ್ಲಂಘನೆಗಳು ವರದಿಯಾಗಿವೆ. ಇತ್ತೀಚೆಗಷ್ಟೇ ಅರವಿಂದ ಬಿಜೆಪಿ ಶಾಸಕ ಲಿಂಬಾವಳಿ ಅವರ ಪುತ್ರಿ ನಿಯಮ ಉಲ್ಲಂಘಿಸಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Mla threatens to policeman for issue challans
Story first published: Thursday, December 8, 2022, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X