ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಕಳೆದ ಕೆಲವು ತಿಂಗಳುಗಳಿಂದ ದೇಶದ ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಅನ್ನು ಮನೆ ಬಾಗಿಲಲ್ಲಿ ವಿತರಿಸುವ ಸೇವೆಗೆ ಚಾಲನೆ ನೀಡಿವೆ. ಈಗ ಇದೇ ಮೊದಲ ಬಾರಿಗೆ ಸಿಎನ್‌ಜಿ ಅನಿಲವನ್ನು ಪೆಟ್ರೋಲ್, ಡೀಸೆಲ್‌ನಂತೆಯೇ ಮನೆ ಬಾಗಿಲಲ್ಲಿ ವಿತರಿಸುವ ಸೇವೆಗೆ ಚಾಲನೆ ನೀಡಲಾಗಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ನಗರಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಗ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಚಾಲನೆ ನೀಡಿದ್ದಾರೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಹಾಗೂ ಮಹಾನಗರ ಗ್ಯಾಸ್ ಎಂಬ ಕಂಪನಿಗಳು ಈ ಸೇವೆಯನ್ನು ಆರಂಭಿಸಿವೆ. ಈ ಎರಡೂ ಕಂಪನಿಗಳು ಭಾರತ್ ಪೆಟ್ರೋಲಿಯಂ ಅಡಿಯಲ್ಲಿ ಕಾರ್ಯನಿರ್ವಹಿಸುವ ರಿಟೇಲ್ ಕಂಪನಿಗಳು ಎಂಬುದು ಗಮನಾರ್ಹ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ದೇಶದಲ್ಲಿ ಸಿಎನ್‌ಜಿ ಅನಿಲ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು ಈ ಸೇವೆಯ ಹಿಂದಿರುವ ಉದ್ದೇಶ. ಇದರ ಜೊತೆಗೆ ಸಿಎನ್‌ಜಿ ರಿಫ್ಯೂಯಲ್ ಕೇಂದ್ರಗಳು ಇಲ್ಲದ ಪ್ರದೇಶಗಳಲ್ಲಿ ಗ್ರಾಹಕರಿಗೆ ನೆರವಾಗಲು ಈ ಸೇವೆಯನ್ನು ಆರಂಭಿಸಲಾಗಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್'ಗಳಿಗೆ ಹೋಲಿಸಿದರೆ ಸಿಎನ್‌ಜಿ ರಿಫ್ಯೂಯಲ್ ಕೇಂದ್ರಗಳು ಬಹಳ ಕಡಿಮೆ ಸಂಖ್ಯೆಯಲ್ಲಿವೆ. ಈ ರಿಫ್ಯೂಯಲ್ ಕೇಂದ್ರಗಳು ಹೆಚ್ಚಾಗಿ ನಗರಗಳಲ್ಲಿ ಮಾತ್ರ ಕಂಡು ಬರುತ್ತವೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ರಿಫ್ಯೂಯಲ್ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯಲ್ಲಿವೆ. ಹೀಗಾಗಿ ಈ ಮೊಬೈಲ್ ಸಿಎನ್‌ಜಿ ರಿಫ್ಯೂಯಲ್ ಕೇಂದ್ರಗಳನ್ನು ಸಿಎನ್‌ಜಿ ಕೇಂದ್ರಗಳು ಬಳಕೆಯಲ್ಲಿಲ್ಲದ ಪ್ರದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಇವುಗಳ ಮೂಲಕ ಸಿಎನ್‌ಜಿ ವಿತರಣೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿದೆ. ಅಂದರೆ ಡೋರ್ ಡೆಲಿವರಿ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಘೋಷಿಸಲಾಗಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಡೀಸೆಲ್, ಪೆಟ್ರೋಲ್ ಡೋರ್ ಡೆಲಿವರಿಗಾಗಿಯೂ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ. ಸಿಎನ್‌ಜಿ ಡೋರ್ ಡೆಲಿವರಿ ಸೇವೆಗಾಗಿ 1,500 ಕೆ.ಜಿ ಸಾಮರ್ಥ್ಯದವಾಹನವನ್ನು ಸಿದ್ಧಪಡಿಸಲಾಗಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಈ ವಾಹನದಿಂದ ಪ್ರತಿ ದಿನ 150ರಿಂದ 200 ವಾಹನಗಳನ್ನು ಸಿಎನ್‌ಜಿ ಅನಿಲದಿಂದ ರಿಫ್ಯೂಯಲ್ ಮಾಡಬಹುದು. ಸಿಎನ್‌ಜಿ ವಾಹನಗಳು ಕಡಿಮೆ ಮಾಲಿನ್ಯವನ್ನುಂಟು ಮಾಡುವುದರಿಂದ ದೇಶದಲ್ಲಿ ಸಿಎನ್‌ಜಿ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ಇದಕ್ಕಾಗಿ ಸಿಎನ್‌ಜಿ ರಿಫ್ಯೂಯಲ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ದೆಹಲಿ ಹಾಗೂ ಮುಂಬೈ ನಗರಗಳಲ್ಲಿ ಮೊಬೈಲ್ ಸಿಎನ್‌ಜಿ ರಿಫ್ಯೂಯಲ್ ಕೇಂದ್ರಗಳನ್ನು ತೆರೆಯಲಾಗಿದೆ.

ಡೋರ್ ಡೆಲಿವರಿ ಮೂಲಕ ಪೂರೈಕೆಯಾಗಲಿದೆ ಸಿ‌ಎನ್‌ಜಿ ಅನಿಲ

ದೇಶಾದ್ಯಂತ 201 ಹೊಸ ಸಿಎನ್‌ಜಿ ಕೇಂದ್ರಗಳನ್ನು ಬಳಕೆಗೆ ತರಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಮೊಬೈಲ್ ಸಿಎನ್‌ಜಿ ರಿಫ್ಯೂಯಲ್ ಕೇಂದ್ರಗಳನ್ನು ದೇಶದಲ್ಲಿ ತೆರೆಯಲಾಗಿದೆ ಎಂಬುದು ಗಮನಾರ್ಹ.

Most Read Articles

Kannada
English summary
Mobile CNG refueling units launched in Delhi and Mumbai. Read in Kannada.
Story first published: Thursday, June 10, 2021, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X