ಕಡಿಮೆ ಬೆಲೆಯ ಮಾರುತಿಯ ಪಾಕೆಟ್ ರಾಕೇಟ್: 200 ಕಿ.ಮೀ ಟಾಪ್ ಸ್ಪೀಡ್ ಹೋದ ಮಾಡಿಫೈ ಇವಿ

ಇಗ್ನಿಸ್ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ ವಿಶಿಷ್ಟ ವಿನ್ಯಾಸ. ಟಾಲ್‌ಬಾಯ್ ನಿಲುವು ಮತ್ತು ಆಕರ್ಷಕ ಲುಕ್ ಅನ್ನು ಹೊಂದಿರುವ ಕಾರ್ ಆಗಿದೆ. ಮಾರುತಿ ಸುಜುಕಿ ಇಗ್ನಿಸ್ ಕಾರನ್ನು ಭಾರತದಲ್ಲಿ ನೆಕ್ಸಾ ಪ್ರೀಮಿಯಂ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಮಾರುತಿ ಕಾರು ಭಾರತದ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಮಾರುತಿ ಸುಜುಕಿ ತನ್ನ ಸಣ್ಣ ಮತ್ತು ಕೈಗೆಟುಕುವ ಹ್ಯಾಚ್‌ಬ್ಯಾಕ್‌ಗಳಿಗೆ ಹೆಸರುವಾಸಿಯಾಗಿದೆ. ಪ್ರಸ್ತುತ ಭಾರತದಲ್ಲಿ 11ನೇ ಅತ್ಯುತ್ತಮ ಮಾರಾಟವಾದ ಹ್ಯಾಚ್‌ಬ್ಯಾಕ್ ಆಗಿದೆ. ಅಲ್ಲದೇ ಇದು 13ನೇ ಅತ್ಯುತ್ತಮ ಮಾರಾಟವಾದ ಮಾರುತಿ ಕಾರ್ ಆಗಿದೆ. ಪುಣೆ ಮೂಲದ ನಾರ್ತ್‌ವೇ ಮೋಟಾರ್ಸ್ ಸಂಸ್ಥೆಯು ಮಾರುತಿ ಇಗ್ನಿಸ್ ಕಾರನ್ನು ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಿದ್ದಾರೆ.

Modified Maruti Ignis Electric

ಈಗಾಗಲೇ ಈ ನಾರ್ತ್‌ವೇ ಮೋಟಾರ್ಸ್ ಕಂಪನಿಯು ಕಸ್ಟಮ್ ಟಾಟಾ ಎಸ್ ಇವಿ ಮಾದರಿಗಳ ಮಾರಾಟ, ಕಸ್ಟಮ್ OEM ಮಾದರಿಗಳು ಮತ್ತು ಇವಿ ಕಾರ್ ಆಗಿ ಪರಿವರ್ತಿಸುವ ಕಿಟ್‌ಗಳಲ್ಲಿ ಪರಿಣತಿ ಹೊಂದಿದೆ. ನಾರ್ತ್‌ವೇ ಮೋಟಾರ್ಸ್ ಟಾಟಾ ಏಸ್‌ಗಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಅದೇ ಕಿಟ್ ಅನ್ನು ಇಗ್ನಿಸ್ ಕಾರಿಗಾಗಿ ಬಳಸಿದೆಯೇ ಅಥವಾ ಕಸ್ಟಮ್ ಆಕ್ಸೇಸರೀಸ್ ಅನ್ನು ಬಳಸಿದೆಯೇ ಎಂದು ನಮಗೆ ಖಚಿತವಿಲ್ಲ.

ಅದೇನೇ ಇದ್ದರೂ, ಫಲಿತಾಂಶವು ಸಾಕಷ್ಟು ಆಕರ್ಷಕವಾಗಿದೆ. ವೀಡಿಯೊದಲ್ಲಿ ನೋಡಿದಂತೆ, ಮಾರುತಿ ಇಗ್ನಿಸ್ ( Maruti Ignis) ಹಸಿರು ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಮಾದರಿಯು ಎಲೆಕ್ತ್ರಿಕ್ ಕಾರ್ ಆಗಿಸಿದ್ದಾರೆ. ಈ ಮಾರುತಿ ಇಗ್ನಿಸ್ ಇವಿ (Maruti Ignis Electric) ಕನವರ್ಟ್ ಪರಿವರ್ತನೆಯು R&D ಗಾಗಿ ಮಾತ್ರ ಮತ್ತು ಡೈನಮೋಮೀಟರ್‌ನಲ್ಲಿ ನಿಯಂತ್ರಿತ ಪರಿಸರದಲ್ಲಿ ಪರೀಕ್ಷಿಸಲ್ಪಡುತ್ತದೆ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಅಲ್ಲ.

Modified Maruti Ignis Electric

ಟಾಪ್-ಸ್ಪೆಕ್ ಇಗ್ನಿಸ್ ಆಲ್ಫಾದಲ್ಲಿ ಪರಿವರ್ತನೆ ಮಾಡಲಾಗುತ್ತದೆ ಮತ್ತು ಕಾರ್ ಎಲೆಕ್ಟ್ರಿಕ್ ಎಂದು ತೋರಿಸಲು ಹಸಿರು ಬಣ್ಣದ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಈ ವೀಡಿಯೊದಲ್ಲಿ ನೋಡಿದಂತೆ, ನಾರ್ತ್‌ವೇ ಮೋಟಾರ್ಸ್‌ನ ಮಾರುತಿ ಇಗ್ನಿಸ್ ಎಲೆಕ್ಟ್ರಿಕ್ ಮಾರ್ಪಡಿಸಿದ ಆವೃತ್ತಿಯು ಬ್ಯಾಟರಿ ಮತ್ತು ಮೋಟಾರ್‌ನಿಂದ ಚಾಲಿತವಾಗಿದೆ. ಪ್ರತಿಯೊಂದು OEM ನಿಂದ ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳು ಸಿಂಗಲ್-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಜ್ಜುಗೊಂಡಿವೆ.

ಇನ್ನು ನಾರ್ತ್‌ವೇ ಮೋಟಾರ್ಸ್, ಟಾರ್ಕ್ ಆಪ್ಟಿಮೈಸೇಶನ್‌ಗಾಗಿ ಇಗ್ನಿಸ್‌ನ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಇಟ್ಟುಕೊಂಡಿದೆ. ಈ ಇಗ್ನೀಸ್ ಇವಿ ಕಾರು ಡೈನೋ ರನ್ ಎಲ್ಲಾ ಐದು ಪೂರ್ವ-ನಿರ್ಧರಿತ ಗೇರ್ ಅನುಪಾತಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಕಾರಿನ ಸ್ಪೀಡೋಮೀಟರ್‌ನಲ್ಲಿ 200 ಕಿ.ಮೀ ಟಾಪ್ ಸ್ಪೀಡ್ ಅನ್ನು ತೋರಿಸಲಾಗಿದೆ. ಇವಿಗಳೊಂದಿಗೆ ಸಾಂಪ್ರದಾಯಿಕ ಗೇರ್‌ಬಾಕ್ಸ್ ಅನ್ನು ಚಲಾಯಿಸುವ ಪ್ರಯೋಜನಗಳನ್ನು ಬಹಿರಂಗಪಡಿಸಿದೆ.

Modified Maruti Ignis Electric

ಟಾಪ್ ಗೇರ್‌ಗಳಲ್ಲಿ 1 ರ ಅನುಪಾತವನ್ನು ಹೊಂದಲು ಅಥವಾ ಓವರ್‌ಡ್ರೈವ್ ಅನುಪಾತವನ್ನು ಹೊಂದಿರುತ್ತವೆ. OEM ಗಳಿಗೆ, ಸಾಂಪ್ರದಾಯಿಕ ಗೇರ್‌ಬಾಕ್ಸ್ ಅನ್ನು ಸಂಯೋಜಿಸುವುದು ಹೆಚ್ಚು ದುಬಾರಿ, ಸಂಕೀರ್ಣ ಮತ್ತು ಭಾರವಾಗಿರುತ್ತದೆ. ಆದರೆ ಇವಿ ಪರಿವರ್ತನೆಗಳಿಗೆ, ಇದು ಉತ್ತಮ ನಿರ್ದೇಶನವೆಂದು ಸಾಬೀತುಪಡಿಸಬಹುದು. ಕಡಿಮೆ ಖರ್ಚಿನಲ್ಲಿ ಇವಿ ಮಾದರಿಯಾಗಿ ಪರಿವತಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 29, 2024, 16:56 [IST]
English summary
Modified maruti ignis electric 200 kmph top speed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+