ಮಾಡಿಫೈ ಮಾರುತಿ ಡಿಜೈರ್ ಕನ್ವರ್ಟಿಬಲ್: ಈ ರೀತಿ ಮಾಡುವುದು ಸುರಕ್ಷಿತವಲ್ಲ... ಯಾಕೆ ಗೊತ್ತಾ?

ವಿದೇಶಿಗಳಿಗೆ ಹೋಲಿಸಿದರೆ ಭಾರತದಲ್ಲಿ ಕನ್ವರ್ಟಿಬಲ್ ಕಾರುಗಳು ಕಾಣಿಸಿವುದು ಅಪರೂಪ. ಭಾರತದಲ್ಲಿ ಹವಾಮಾನವು ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಸಲ ಸಡನ್ ಬದಲಾವಣೆಯಾಗುತ್ತದೆ. ಇದರಿಂದ ಭಾರತದಲ್ಲಿ ಕನ್ವರ್ಟಿಬಲ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಮಹೀಂದ್ರಾ ಥಾರ್ ಕನ್ವರ್ಟಿಬಲ್ ಮಾತ್ರ ಇದಕ್ಕೆ ಹೊರತಾಗಿದೆ, ಆದರೆ ಇದು ಬಹುಶಃ ಲೈಫ್ ಸ್ಟೈಲ್ ಎಸ್‍ಯುವಿಯಾಗಿರುವುದರಿಂದ ಉತ್ತಮ ಮಾರಾಟವಾಗುತ್ತಿದೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಮಾಲೀಕರೊಬ್ಬರು ತಮ್ಮ ರೂಫ್ ಅನ್ನು ಕನ್ವರ್ಟಿಬಲ್ ಮಾಡುವ ಸಲುವಾಗಿ ಕತ್ತರಿಸಿದ್ದಾರೆ. ಈ ಮಾರುತಿ ಸುಜುಕಿ ಡಿಜೈರ್ ಕನ್ವರ್ಟಿಬಲ್ ಕಾರಿನ ವೀಡಿಯೊ ಭಾರೂ ವೈರಲ್ ಆಗಿದೆ. ಇದು ಸಫಾರಿ ಸ್ಟ್ರೋಮ್‌ನ ಹೆಡ್‌ಲೈಟ್‌ಗಳು ಮತ್ತು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್‌ನೊಂದಿಗೆ ಮಾರ್ಪಡಿಸಿದಂತಹ 1ನೇ ತಲೆಮಾರಿನ ಸ್ವಿಫ್ಟ್ ಡಿಜೈರ್ ಅನ್ನು ಆಧರಿಸಿಲ್ಲ . ಬದಲಿಗೆ, ಇದು 2017ರ ಮಧ್ಯದಲ್ಲಿ ಬಿಡುಗಡೆಯಾದ ಹೊಸ 3ನೇ ಜನರೇಷನ್ ಡಿಜೈರ್ ಆಗಿದೆ.

Modified Maruti Suzuki Dzire

ಮುಂಭಾಗದ ಫೆಂಡರ್ DDIS ಬ್ಯಾಡ್ಜಿಂಗ್ ಅನ್ನು ಹೊಂದಿದೆ, ಇದು 2017 - 2020 ಮಾದರಿಯಾಗಿರಬೇಕು ಎಂದು ಸೂಚಿಸುತ್ತದೆ. ಕತ್ತರಿಸಿದ ರೂಫ್ ಅನ್ನು ಹೊರತುಪಡಿಸಿ, ಡಿಜೈರ್‌ಗೆ ಒಂದೇ ಒಂದು ಬದಲಾವಣೆ ಇಲ್ಲ. ಒಂದೇ ಒಂದು ಬದಲಾವಣೆ ಇಲ್ಲ. ಯಾವುದೇ ರೀತಿಯ ಮ್ಯಾನುವಲ್ ಆಗಿ ಪರಿವರ್ತಿಸಬಹುದಾದ ಸಾಫ್ಟ್ ಟಾಪ್ ಅನ್ನು ಸೇರಿಸಿಕೊಂಡಿಲ್ಲ. ಮಳೆಗಾಲದಲ್ಲಿ ಈ ಕಾರನ್ನು ಉಪಯೋಗಿಸಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಬ್ಯಾಕ್‌ಅಪ್‌ಗಳಾಗಿ ಒಂದೆರಡು ಇತರ ಕಾರುಗಳನ್ನು ಹೊಂದಿರಬಹುದು.

ಇದು ಎಲ್ಲಾ ನಾಲ್ಕು ಡೋರುಗಳನ್ನು ಇತರ ಶೀಟ್ ಮೆಟಲ್ ಬಾಡಿ ಪ್ಯಾನೆಲ್‌ಗಳು ಮತ್ತು ಫೈಬರ್ ಭಾಗಗಳೊಂದಿಗೆ ಉಳಿಸಿಕೊಂಡಿದೆ. ವಿಂಡ್ ಶೀಲ್ಡ್ ಪ್ರಾರಂಭವಾಗುವ A-ಪಿಲ್ಲರ್ ಅನ್ನು ಕತ್ತರಿಸಲಾಗಿದೆ. ಇದು ಭಾಗ A-ಪಿಲ್ಲರ್ ಮತ್ತು ಭಾಗವಾಗಿ ಕತ್ತರಿಸಿದ ಫ್ರೇಮ್ ಆಗಿರುವುದರಿಂದ ಸ್ವಲ್ಪ ದಪ್ಪವಾಗಿ ಕಾಣುತ್ತದೆ. ಮಾಡರ್ ಬಿ-ಪಿಲ್ಲರ್‌ಗಳು ಮತ್ತು ಸಿ-ಪಿಲ್ಲರ್‌ಗಳನ್ನು ಸಂಪೂರ್ಣವಾಗಿ ಕತ್ತರಿಸಿದ್ದಾರೆ. ಎಂಜಿನ್ ಮತ್ತು ಉಳಿದ ಭಾಗಗಳು ಯಾವುದೇ ಬದಲಾವಣೆಗಳನ್ನು ಹೊಂದಿದುವುದಿಲ್ಲ, ಇವುಗಳು ಸ್ಟಾಕ್ ಆಗಿರಬಹುದು.

Modified Maruti Suzuki Dzire

ಹೀಗೆ ಮಾಡುವುದು ಸ್ಪಷ್ಟವಾಗಿ ನಿಯಮಗಳ ಉಲ್ಲಂಘನೆಯಾಗಿದೆ. ಈ ಕಾರು ಪೆಟ್ರೋಲ್ ಬಕ್ ನಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ಅವರು ಹೆಮ್ಮೆಯಿಂದ ಕ್ಯಾಮೆರಾದತ್ತ ಕೈ ಬೀಸುತ್ತಾರೆ. ಈ ರೀತಿ ಸಾಮಾನ್ಯ ಮಾರುತಿ ಸುಜುಕಿ ಡಿಜೈರ್ ಕಾರನ್ನು ಕನ್ವರ್ಟಿಬಲ್ ಆಗಿ ಮಾಡುವುದು ಸುರಕ್ಷಿತವೇ ಎಂಬ ಪ್ರಶ್ಭೇ ಕೂಡ ಬರುತ್ತದೆ. ಇದು ಮಾರುತಿ ಡಿಜೈರ್ ಈಗಾಗಲೇ ನೀಡಿದ್ದಕ್ಕಿಂತ ಕೆಟ್ಟದಾಗಿದೆ.

ಇದು ಅಸ್ಥಿರ ಬಾಡಿ ಶೆಲ್‌ನೊಂದಿಗೆ 1 ಸ್ಟಾರ್ ಕ್ರ್ಯಾಶ್ ರೇಟಿಂಗ್ ಆಗಿದೆ (ಸ್ವಿಫ್ಟ್‌ನ ರೇಟಿಂಗ್, ಇದು ಡಿಜೈರ್ ಅನ್ನು ಹೋಲುತ್ತದೆ). ಇದು ಎ-ಪಿಲ್ಲರ್‌ಗಳನ್ನು ಹೊಂದಿದೆಯೇ? ಇಲ್ಲ. ಇದು ರೋಲ್‌ಓವರ್ ರಕ್ಷಣೆಯ ಹಿಂದಿನ ರೋಲ್ ಹೂಪ್‌ಗಳನ್ನು ಹೊಂದಿದೆಯೇ? ಇಲ್ಲ. ಇದರಿಂದ ಹೀಗೆ ಮಾಡುವುದು ಸುರಕ್ಷಿತವಲ್ಲ. ಇದರಿಂದ ಇವರಿಂದ ಪ್ರೇರಿತವಾಗಿ ಯಾರು ಕೂಡ ಈ ರೀತಿ ಮಾಡಲು ಪ್ರಯತ್ನಿಸಬಾರದು.

ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಬಹುನಿರೀಕ್ಷಿತ 2023ರ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಮಾರುತಿ ಸುಜುಕಿ ಎಲ್ಲಾ ಅಧಿಕೃತ ಡೀಲರ್ ಔಟ್‌ಲೆಟ್‌ಗಳಲ್ಲಿ ಮತ್ತು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈಫ್‌ಸ್ಟೈಲ್ ಆಫ್-ರೋಡರ್‌ಗಾಗಿ ಬುಕಿಂಗ್‌ಗಳನ್ನು ಪ್ರಾರಂಭಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 1, 2023, 13:53 [IST]
English summary
Modified maruti suzuki dzire convertible not safe details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+