ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

ಭಾರತದ ವಿವಿಧ ರಾಜ್ಯಗಳ ಪೊಲೀಸರು ಜೀಪ್ ನಿಂದ ಮಹೀಂದ್ರಾ ಸ್ಕಾರ್ಪಿಯೋವರೆಗೆ ಹಲವು ರೀತಿಯ ವಾಹನಗಳನ್ನು ಬಳಸುತ್ತಾರೆ. ಇತ್ತೀಚೆಗೆ ಆಂಧ್ರಪ್ರದೇಶ ಪೊಲೀಸರು ತಮ್ಮ ಪಡೆಗೆ ಫೋರ್ಸ್ ಟ್ರ್ಯಾಕ್ಸ್ ತೂಫಾನ್ ಬಿಎಸ್ 6 ವಾಹನವನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ.

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

ಆಂಧ್ರಪ್ರದೇಶ ಪೊಲೀಸರು ಈ ವಾಹನವನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ. ಆದರೆ ಈ ಫೋರ್ಸ್ ಟ್ರ್ಯಾಕ್ಸ್ ತೂಫಾನ್ ವಾಹನದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ವಾಹನದ ಮುಂಭಾಗದಲ್ಲಿ ಹಾಗೂ ಸೈಡ್ ನಲ್ಲಿ ಪೊಲೀಸ್ ಬ್ಯಾಡ್ಜ್ ಇದ್ದು, ಮೇಲ್ಭಾಗದಲ್ಲಿ ಪೊಲೀಸ್ ಸೈರನ್ ಅಳವಡಿಸಲಾಗಿದೆ.

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

ಈ ವಾಹನದ ಇಂಟಿರಿಯರ್ ನಲ್ಲಿ ಪೊಲೀಸ್ ಕನೆಕ್ಟಿವಿಟಿ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದರ ಹೊರತಾಗಿ ಬೇರೆ ರೀತಿಯ ದೊಡ್ಡ ಬದಲಾವಣೆಗಳಾಗಿಲ್ಲ. ಫೋರ್ಸ್ ತೂಫಾನ್ ನ ಮುಂಭಾಗದಲ್ಲಿ ಹೊಸ ಫ್ರಂಟ್ ಗ್ರಿಲ್, ಹೊಸ ಹೆಡ್ ಲೈಟ್, ಹೊಸ ಬಂಪರ್ ಹಾಗೂ ಹಿಂಭಾಗದಲ್ಲಿ ಹೊಸ ಟೇಲ್ ಲೈಟ್‌ ಹಾಗೂ ಬಂಪರ್‌ಗಳನ್ನು ಅಳವಡಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

ಫೋರ್ಸ್ ತೂಫಾನ್‌ನ 12 ಸೀಟುಗಳ ಮಾದರಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಂಯುವಿ 4.8 ಮೀಟರ್ ಉದ್ದವನ್ನು ಹೊಂದಿದೆ. ಈ ವಾಹನದಲ್ಲಿ 1947 ಸಿಸಿಯ 3-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 66 ಬಿಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

ಫೋರ್ಸ್ ತೂಫಾನ್ ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಫೋರ್ಸ್ ತೂಫಾನ್ ದೇಶಾದ್ಯಂತ ಪ್ರಯಾಣಿಕರ ವಾಹನವಾಗಿ ಜನಪ್ರಿಯವಾಗಿದೆ. ಈಗ ಈ ವಾಹನವನ್ನು ಆಂಧ್ರ ಪ್ರದೇಶ ಪೊಲೀಸರು ತಮ್ಮ ಪಡೆಗೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳ ಪೊಲೀಸರು ಬಳಸುತ್ತಿರುವ ಕಾರುಗಳು ಯಾವುವು ಎಂಬುದನ್ನು ನೋಡೋಣ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

1. ಟೊಯೊಟಾ ಇನೋವಾ

7 ಸೀಟರ್ ಗಳ ಟೊಯೊಟಾ ಇನೋವಾ ಕಾರನ್ನು ದೆಹಲಿ, ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಪೊಲೀಸರು ಬಳಸುತ್ತಿದ್ದಾರೆ.

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

2. ಮಾರುತಿ ಜಿಪ್ಸಿ

ಆಧುನಿಕ ಕಾರುಗಳ ಜೊತೆಗೆ ದೆಹಲಿ ಹಾಗೂ ಹರಿಯಾಣ ಪೊಲೀಸರು ಇನ್ನೂ ಮಾರುತಿ ಸುಜುಕಿ ಕಂಪನಿಯ ಜಿಪ್ಸಿ ಕಾರನ್ನು ಬಳಸುತ್ತಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

3. ಮಾರುತಿ ಎರ್ಟಿಗಾ

7 ಸೀಟರ್ ಗಳ ಮಾರುತಿ ಎರ್ಟಿಗಾ ಕಾರನ್ನು ಬೆಂಗಳೂರು, ಚಂಡೀಗಢ, ಹರಿಯಾಣ, ಮುಂಬೈ ಪೊಲೀಸರು ಬಳಸುತ್ತಿದ್ದಾರೆ.

ಪೊಲೀಸ್ ಪಡೆಗೆ ಸೇರ್ಪಡೆಯಾಯ್ತು ಫೋರ್ಸ್ ಟ್ರ್ಯಾಕ್ಸ್ ತೂಫಾನ್

4. ಮಹೀಂದ್ರಾ ಸ್ಕಾರ್ಪಿಯೋ

ಬಲಿಷ್ಠ ಡೀಸೆಲ್ ಎಂಜಿನ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಎಸ್ ಯುವಿಯನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಪೊಲೀಸರು ಬಳಸುತ್ತಿದ್ದಾರೆ.

Most Read Articles

Kannada
English summary
Modified Trax toofan BS6 added to Andhra Pradesh police fleet. Read in Kannada.
Story first published: Wednesday, August 19, 2020, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X