ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಮೊಹಮ್ಮದ್ ಸಿರಾಜ್ ಕಳೆದ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಭಾರತದ ಪರ ತಮ್ಮ ಮೊದಲ ಟೆಸ್ಟ್ ಕ್ರಿಕೆಟ್ ಸರಣಿಯನ್ನಾಡಿದರು. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಮೂರು ಟೆಸ್ಟ್‌ಗಳಲ್ಲಿ 13 ವಿಕೆಟ್‌ಗಳನ್ನು ಗಳಿಸಿದ ಅವರು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಅವರ ಈ ಸಾಧನೆಯು ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಜಯಿಸಲು ನೆರವಾಯಿತು. ಮುಂಬೈನ ಹೋಟೆಲ್‌ವೊಂದರಲ್ಲಿ ಬಯೋ ಬಬಲ್'ಗೆ ಒಳಗಾದ ನಂತರ, ಸಿರಾಜ್ ಸೇರಿದಂತೆ ಇಡೀ ಭಾರತೀಯ ಕ್ರಿಕೆಟ್ ತಂಡವು ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿದೆ.

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಡಬ್ಲ್ಯುಟಿಸಿ ಫೈನಲ್‌ಗಾಗಿ ಸಿರಾಜ್ ಅವರನ್ನು ಭಾರತ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈಗ ಅವರು ಬಜಾಜ್ ಪ್ಲಾಟಿನಾ ಬೈಕಿನಲ್ಲಿ ಸವಾರಿ ಮಾಡುತ್ತಿದ್ದ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಈ ಬಗ್ಗೆ ಮಾತನಾಡಿರುವ ಅವರು, ನನ್ನ ಬಳಿ ಇನ್ನೂ ನನ್ನ ಮೊದಲ ಬಜಾಜ್ ಪ್ಲಾಟಿನಾ ಬೈಕ್ ಇದೆ. ನನ್ನ ಆರಂಭಿಕ ಕ್ರಿಕೆಟ್ ದಿನಗಳಲ್ಲಿ ನಾನು ಇದನ್ನು ಬಳಸುತ್ತಿದ್ದೆ. ಈ ಬೈಕ್ ಆಟೋಮ್ಯಾಟಿಕ್ ಸ್ಟಾರ್ಟ್ ಅಥವಾ ಕಿಕ್ ಸ್ಟಾರ್ಟ್ ಹೊಂದಿರಲಿಲ್ಲ.

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಈ ಬೈಕ್ ಎಂಜಿನ್ ಸ್ಟಾರ್ಟ್ ಮಾಡಲು ಅದರೊಂದಿಗೆ ಸ್ವಲ್ಪ ದೂರ ತಳ್ಳಬೇಕಾಗಿತ್ತು. ಈ ಬೈಕ್ ಸಮಯಕ್ಕೆ ಸರಿಯಾಗಿ ನನ್ನನ್ನು ಸೇರಬೇಕಾದ ಸ್ಥಳಕ್ಕೆತಲುಪಿಸುತ್ತಿತ್ತು. ಈ ಬೈಕ್ ಎಂದರೆ ನನಗೆ ಈಗಲೂ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ನಾನು ಹೈದರಾಬಾದ್‌ನಲ್ಲಿ ಪಂದ್ಯಗಳನ್ನು ಆಡಿದಾಗಲೆಲ್ಲಾ ಅಭ್ಯಾಸದ ನಂತರ ಅಥವಾ ಪಂದ್ಯದ ಕೊನೆಯಲ್ಲಿ ನನ್ನ ಬೈಕ್‌ ಸ್ಟಾರ್ಟ್ ಮಾಡಲು ಎಲ್ಲರೂ ಅವರ ಕಾರುಗಳಲ್ಲಿ ಸ್ಟೇಡಿಯಂನಿಂದ ಹೊರ ಹೋಗುವುದನ್ನು ಕಾಯುತ್ತಿದ್ದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಈಗ ನನ್ನ ಬಳಿ ದುಬಾರಿ ಬೆಲೆಯ ಕಾರುಗಳಿವೆ. ಆದರೆ ನನ್ನ ಮೊದಲ ಬೈಕ್ ಅನ್ನು ಈಗಲೂ ಇಟ್ಟು ಕೊಂಡಿದ್ದೇನೆ. ಆ ಬೈಕ್ ನನ್ನ ಹೋರಾಟವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದ್ದಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಬಜಾಜ್ ಕಂಪನಿಯು ಪ್ಲಾಟಿನಾ ಬೈಕ್ ಅನ್ನು 100 ಸಿಸಿ ಹಾಗೂ 110 ಸಿಸಿ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ. ಮಾರ್ಚ್ ತಿಂಗಳಲ್ಲಿ ಬಜಾಜ್ ಕಂಪನಿಯು ಪ್ಲಾಟಿನಾ 100 ಬೈಕಿನ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯನ್ನು ಬಿಡುಗಡೆಗೊಳಿಸಿತು.

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಪ್ಲಾಟಿನಾ 100 ಇಎಸ್ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.53,920ಗಳಾಗಿದೆ. ಬಜಾಜ್ ಕಂಪನಿಯು ಪ್ಲಾಟಿನಾ 110 ಬೈಕ್ ಅನ್ನು ಸಿಂಗಲ್-ಚಾನೆಲ್ ಎಬಿಎಸ್'ನೊಂದಿಗೆ ಬಿಡುಗಡೆಗೊಳಿಸಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಭಾರತೀಯ ಕ್ರಿಕೆಟಿಗ

ಹೊಸ ಪ್ಲಾಟಿನಾ 110 ಬೈಕಿನ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.59,859ರಿಂದ ಆರಂಭವಾಗುತ್ತವೆ. ಬಜಾಜ್ ಪ್ಲಾಟಿನಾ 110 ಬೈಕಿನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಡಿಟಿಎಸ್-ಐ ಎಂಜಿನ್ ಅಳವಡಿಸಲಾಗಿದೆ.

Most Read Articles

Kannada
English summary
Mohammed Siraj recalls his old Bajaj Platina bike riding days. Read in Kannada.
Story first published: Monday, June 7, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X