ಕ್ಯಾಮೆರಾ ಇಲ್ಲದಿದ್ದರೆ ನಿಜ ಕಾರು ಮಾಲೀಕ ಕೂಡ ನಂಬುತ್ತಿರಲಿಲ್ಲ! ಈಗ ಅನಗತ್ಯ ವೆಚ್ಚ!
ಭಾರತದಲ್ಲಿ ಇತ್ತೀಚೆಗೆ ಕಾರುಗಳಲ್ಲಿ ಅಪಾರವಾಗಿ ಜನಪ್ರಿಯವಾಗುತ್ತಿರುವ ಪ್ರೀಮಿಯಂ ವೈಶಿಷ್ಟ್ಯವೆಂದರೆ ಸನ್‌ರೂಫ್. ಮೊದಲಿಗೆ ಇದು ಸಿಂಗಲ್-ಪ್ಯಾನ್ ಎಲೆಕ್ಟ್ರಿಕ್ ಸನ್ ರೂಫ್‌ನೊಂದಿಗೆ ಪ್ರಾರಂಭವಾಗಿ ಈಗ ಪನಾರಮಿಕ್ ಸನ್‌ರೂಫ್‌ಗೆ ಅಪ್‌ಡೇಟ್ ಆಗಿದೆ. ಇನ್ನೂ ಮುಂದುವರಿದ ಹಂತವಾಗಿ ಕೆಲ ಕಾರುಗಳು ಸಂಪೂರ್ಣ ಗಾಜಿನ ರೂಫ್‌ಗಳೊಂದಿಗೆ ಬರುತ್ತವೆ. ಈಗ ಸನ್‌ರೂಫ್ ಬಗ್ಗೆ ಯಾಕೆ ಅಂತೀರಾ? ಇತ್ತೀಚೆಗೆ ಸನ್‌ರೂಫ್ ಇರುವ ಕಾರಿನ ಮಾಲೀಕರೊಬ್ಬರು ಯಾರೋ ಮಾಡಿದ ತಪ್ಪಿಗೆ ಅನಗತ್ಯವಾಗಿ ವೆಚ್ಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸನ್‌ರೂಫ್ ಇಂದಿನ ಆಧುನಿಕ ಕಾರುಗಳ ಅತ್ಯಗತ್ಯ ಭಾಗವಾಗುತ್ತಿದೆ. ಹೆಚ್ಚಿನ ಹೊಸ ಕಾರು ಖರೀದಿದಾರರು ಕಾರಿನ ಸನ್‌ರೂಫ್ ಇದ್ದರೆ ಮಾತ್ರ ಖರೀದಿಸಬೇಕು ಎಂದುಕೊಳ್ಳುವ ಮಟ್ಟಿಗೆ ಇದೆ. ಆದರೆ ನಿಜವಾಗಿಯೂ ನಮಗೆ ಸನ್ ರೂಫ್ ಅಗತ್ಯವಿದೆಯೇ? ವಾರಣಾಸಿಯಲ್ಲಿ ನಡೆದ ಈ ಘಟನೆ ನೋಡಿದ್ರೆ, ಕಂಡಿತ ಸನ್‌ರೂಫ್ ಬೇಡ ಎಂದು ನಿರ್ಧರಿಸುತ್ತೀರ. ಕೋತಿಯೊಂದು ಮಾಡಿದ ಕೀಟಲೆಗೆ ಮಾಲೀಕನಿಗೆ ಲಕ್ಷಾಂತರ ರೂ. ವೆಚ್ಚಿಸುವಂತಾಗಿದೆ.

ಈ ಕಾರಿನ ಮಾಲೀಕನಿಗೆ ವೀಡಿಯೊ ಸಿಗದಿದ್ದರೆ, ಈ ಘಟನೆಯನ್ನು ನಿಜವಾಗಿಯೂ ನಂಬುತ್ತಿರಲಿಲ್ಲ. ಸನ್ ರೂಫ್ ಹೇಗೆ ಮುರಿಯಿತು? ಯಾರಾದರೂ ಉದ್ದೇಶಪೂರ್ವಕವಾಗಿ ಒಳನುಗ್ಗಿ ಕಾರನ್ನು ಕದಿಯಲು ಪ್ರಯತ್ನಿಸಿದ್ದಾರೆಯೇ? ಇಲ್ಲವೇ ಯಾರೋ ಕಿಡಿಗೇಡಿಗಳು ಅಥವಾ ವಿರೋಧಿಗಳು ಈ ಕೃತ್ಯವೆಸಗಿದ್ದಾರೆಯೇ ಎಂದು ತಲೆಕೆಡಿಸಿಕೊಳ್ಳುತ್ತಿದ್ದರು. ಅದೃಷ್ಟವಶಾತ್, ಸನ್‌ರೂಫ್ ಮುರಿದ ಕೋತಿ ಕಾರಿನೊಳಗೆ ಹೋಗಿಲ್ಲ.
ಕೋತಿಯೊಂದು ಸನ್‌ರೂಫ್ ಮೇಲೆ ಬಿದ್ದು ಧ್ವಂಸಗೊಳಿಸಿದ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಹನವನ್ನು ಜನನಿಬಿಡ ರಸ್ತೆಯ ಬದಿಯಲ್ಲಿ ನಿಲ್ಲಿಸಿರುವುದನ್ನು ನಾವು ಗಮನಿಸಬಹುದು. ತುಸು ಎತ್ತರದಿಂದ ಕೋತಿ ಅದರ ಮೇಲೆ ಜಿಗಿಯುವುದರಿಂದ, ಸನ್‌ರೂಫ್‌ನ ಹಿಂಭಾಗದ ಭಾಗವನ್ನು ಸಂಪೂರ್ಣವಾಗಿ ಛಿದ್ರಗೊಳಿಸಿದೆ. ನಂತರ, ಕಾರಿನಿಂದ ಹೊರಬಂದು ಓಡಿಹೋಗಿದೆ.

ಈ ಅಪಘಾತದಲ್ಲಿ ಕೋತಿಗೆ ಗಾಯವಾದಂತೆ ಕಾಣುತ್ತಿಲ್ಲ. ಅದು ಯಾವುದೇ ಸಮಸ್ಯೆಯಿಲ್ಲದೆ ಕಾರಿನ ರೂಫ್‌ನಿಂದ ಜಿಗಿದು ಸದ್ದಿಲ್ಲದೆ ಹೊರಟುಹೋಯಿತು. ಘಟನೆಯಲ್ಲಿ ಕಾರಿನ ಅರ್ಧದಷ್ಟು ಸನ್‌ರೂಫ್ ಸಂಪೂರ್ಣವಾಗಿ ಹಾನಿಯಾಗಿದೆ. ವರದಿಗಳ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಇದು ಯಾವ ಕಾರು ಹಾಗೂ ಮಾಲೀಕ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಕಾರನ್ನು ಆಧರಿಸಿ ಮುರಿದ ಸನ್‌ರೂಫ್ ಅನ್ನು ಸಂಪೂರ್ಣವಾಗಿ ಬದಲಾಯಿಸಲು ಅಂದಾಜು 30,000 ರೂ.ಗಳಿಂದ 1 ಲಕ್ಷ ರೂ. ವರೆಗೆ ಖರ್ಚಾಗಬಹುದು. ಇತ್ತೀಚಿನ ಕ್ರೇಜ್‌ನಿಂದಾಗಿ ಗ್ರಾಹಕರು ಸನ್‌ರೂಫ್ ಹೊಂದಿರುವ ಕಾರುಗಳನ್ನು ಹುಡುಕುತ್ತಿದ್ದಾರೆ. ಇದರ ಉಪಯೋಗವೇನು ಹಾಗೂ ಇದನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದನ್ನು ತಿಳಿಯದೇ ಖರೀದಿಸುತ್ತುದ್ದಾರೆ.
ಸನ್‌ರೂಫ್ ಕಾರಿನ ದೇಹದಷ್ಟು ಬಲವಾಗಿದೆಯೇ ಎಂದು ನೀವು ಕೇಳಿದರೆ, ಕಂಡಿತವಾಗಿಯೂ ಇಲ್ಲ. ಯಾವುದೇ ಸನ್ ರೂಫ್ ಕಾರಿನ ಬಾಡಿಯಷ್ಟು ಪ್ರಬಲವಾಗಿರುವುದಿಲ್ಲ. ಈ ಬಗ್ಗೆ ಎಲ್ಲರೂ ಅರಿತುಕೊಳ್ಳಲು, ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಈ ಒಂದು ಘಟನೆ ಸಾಕು. ಸನ್‌ರೂಫ್ ಹೊಂದಿರುವ ಕಾರುಗಳನ್ನು ಸರಿಯಾದ ಪಾರ್ಕಿಂಗ್ ಜಾಗವಿಲ್ಲದಿದ್ದರೇ ಖರೀದಿಸಬೇಡಿ ಎಂಬುದು ನಮ್ಮ ಸಲಹೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications