ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಎರಡು ಕೊಲೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್ ಮೂಲದ ಕುಖ್ಯಾತ ಗ್ಯಾಂಗ್​ಸ್ಟರ್ ಗಜಾನನ್ ಮಾರ್ನೆಯನ್ನು ಕಳೆದ ಮೂರು ವರ್ಷಗಳಿಂದ ಮುಂಬೈನ ತಲೇಜಾ ಜೈಲಿನಲ್ಲಿಡಲಾಗಿತ್ತು.

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಮೂರು ವರ್ಷದ ನಂತರ ಆತ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತ ಜೈಲಿನಿಂದ ಹೊರಬರುತ್ತಿರುವ ಮಾಹಿತಿ ಪಡೆದ ಆತನ ಸಹಚರರು ಮುಂಜಾನೆಯೇ ಮುಂಬೈನ ತಲೇಜಾ ಜೈಲಿನ ಬಳಿ ಜಮಾಯಿಸಿದ್ದರು. ಗಜಾನನ್ ಮಾರ್ನೆ ಬಿಡುಗಡೆಯಾಗಿ ಜೈಲಿನಿಂದ ಹೊರಬರುತ್ತಿದ್ದಂತೆ ಹೂವಿನ ಹಾರ ಹಾಕಿ ಆತನನ್ನು ಸ್ವಾಗತಿಸಲಾಯಿತು.

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಕೆಲವರು ಆತನನ್ನು ಮೇಲಕ್ಕೆತ್ತಿ ಜೈಕಾರ ಹಾಕಿದರು. ಇತ್ತೀಚೆಗೆ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಶಶಿಕಲಾ ನಟರಾಜನ್ ರವರಿಗೂ ಸಹ ಇದೇ ರೀತಿಯಲ್ಲಿ ಸ್ವಾಗತ ನೀಡಲಾಗಿತ್ತು. ಈ ರೀತಿ ಸ್ವಾಗತಿಸಿದ ಕಾರ್ಯಕರ್ತರ ವಿರುದ್ಧ ತಮಿಳುನಾಡಿನಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಗಜಾನನ್ ಮಾರ್ನೆಯನ್ನು ಸ್ವಾಗತಿಸಲು 300ಕ್ಕೂ ಹೆಚ್ಚು ಕಾರುಗಳು ಜೈಲಿನ ಬಳಿ ತೆರಳಿದ್ದವು ಎಂದು ಹೇಳಲಾಗಿದೆ. ಈ ಕಾರುಗಳೆಲ್ಲವೂ ಆತ ತನ್ನ ಊರಿಗೆ ತೆರಳುವವರೆಗೂ ಜೊತೆಗಿದ್ದವು. ಈ ಕಾರುಗಳ ರ‍್ಯಾಲಿಯು ರಾಜಕಾರಣಿಗಳ ಪ್ರಚಾರ ರ‍್ಯಾಲಿಯನ್ನೂ ಮೀರಿಸುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಈ ವೇಳೆ ಗಜಾನನ್ ಮಾರ್ನೆ ಸನ್‌ರೂಫ್ ಮೂಲಕ ತನ್ನ ಸಹಚರರಿಗೆ ಧನ್ಯವಾದ ಸಲ್ಲಿಸಿದ. ಆತನ ಬೆಂಬಲಿಗರು ಆತನ ಮೇಲೆ ಹೂವಿನ ಮಳೆಗೆರೆದು ಜೈಕಾರ ಹಾಕುತ್ತಲೇ ಇದ್ದರು. ಇನ್ನೂ ಕೆಲವರು ಕಾರಿನ ವಿಂಡೋ ಮೂಲಕ ಆತನ ಕೈ ಕುಲುಕಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಈ ರೀತಿಯ ಚಲಿಸುವ ವಾಹನಗಳ ಮೂಲಕ ಇಣುಕಿ ನೋಡುವುದು ಹಾಗೂ ಸಾಹಸಗಳನ್ನು ಪ್ರದರ್ಶಿಸುವುದು ಅಪರಾಧವಾಗಿದೆ. ಹೀಗೆ ಮೆರವಣಿಗೆಯಲ್ಲಿ ಸಾಗುವಾಗ ಗಜಾನನ್ ಮಾರ್ನೆ ಹಾಗೂ ಆತನ ಸಹಚರರು ಟೋಲ್'ಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಸಿಲ್ಲವೆಂದು ವರದಿಯಾಗಿದೆ.

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಇದರ ಜೊತೆಗೆ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿನ ಸಂಚಾರವನ್ನು ನಿರ್ಬಂಧಿಸುವ ರೀತಿಯಲ್ಲಿ ಕಾರುಗಳನ್ನು ಚಾಲನೆ ಮಾಡಿದ ಕಾರಣ ಎಕ್ಸ್‌ಪ್ರೆಸ್‌ವೇ ಹಲವಾರು ಗಂಟೆಗಳ ಕಾಲ ವಾಹನ ದಟ್ಟಣೆಯನ್ನು ಎದುರಿಸಿತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಈ ವೀಡಿಯೊಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಟೋಲ್ ಗೇಟ್‌ಗಳಲ್ಲಿ ಶುಲ್ಕ ಪಾವತಿಸದೇ ಇರುವುದು, ಕಿಟಕಿಯಿಂದ ಇಣುಕಿ ನೋಡುವುದು, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವುದು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಶೀಘ್ರದಲ್ಲೇ ಗಜಾನನ್ ಮಾರ್ನೆ ವಿರುದ್ಧ ಪೊಲೀಸರು ಮತ್ತೆ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಗಜಾನನ್ ಮಾರ್ನೆಯನ್ನು ಕುಖ್ಯಾತ ರೌಡಿಗಳಾದ ಅಮನ್ ಬೇಡೆ ಹಾಗೂ ಪಪ್ಪು ಕವಾಡೆ ಅವರ ಹತ್ಯೆಗೆ ಸಂಬಂಧಿಸಿದಂತೆ ಜೈಲಿನಲ್ಲಿಡಲಾಗಿತ್ತು.

ಗ್ಯಾಂಗ್​ಸ್ಟರ್ ಸ್ವಾಗತಕ್ಕೆ ಜೈಲಿನ ಬಳಿ ಬಂದ 300ಕ್ಕೂ ಹೆಚ್ಚು ಕಾರುಗಳು

ಜೈಲಿನಿಂದ ಬಿಡುಗಡೆಯಾದ ನಂತರ ಆತನ ಸಹಚರರು ಮತ್ತೆ ವಿವಿಧ ಅಪರಾಧಗಳನ್ನು ಎಸಗಿದ್ದಾರೆ. ಆತನ ಸಹಚರರ ಈ ಕೃತ್ಯಗಳು ಮುಂಬೈ-ಪುಣೆ ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿವೆ.

Most Read Articles

Kannada
English summary
More than 300 cars arrive near Taloja jail to welcome gangster. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X