ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಇಂಗ್ಲೆಂಡಿನ ನಗರಗಳಲ್ಲಿ ಕಾರುಗಳ್ಳತನವು ಪ್ರಮುಖ ಅಪರಾಧ ಸಮಸ್ಯೆಯಾಗಿ ಕಾಡುತ್ತಿದೆ. ಅಲ್ಲಿ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಹೊಸ ಕಾರು ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಇಂಗ್ಲೆಂಡ್ ಪೊಲೀಸರು ಕಾರುಗಳ್ಳತನವನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ.

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಅತ್ಯುತ್ತಮ ಭದ್ರತಾ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಸಹ ಕದಿಯಲಾಗುತ್ತಿದೆ. ಇಂಗ್ಲೆಂಡ್ ಪೊಲೀಸರು ಬಿಡುಗಡೆಗೊಳಿಸಿರುವ ವರದಿಗಳ ಪ್ರಕಾರ, ಇಂಗ್ಲೆಂಡ್ ನಲ್ಲಿ 2019ರಲ್ಲಿ 1,06,291 ಕಾರುಗಳನ್ನು ಕಳವು ಮಾಡಲಾಗಿದೆ. ಈ ಅಂಕಿ ಅಂಶಗಳು ಹಿಂದಿನ ವರ್ಷದ ಅಂಕಿಅಂಶಗಳಿಗಿಂತ 50%ನಷ್ಟು ಹೆಚ್ಚಾಗಿವೆ. ಕಾರುಗಳ್ಳತನದ ಘಟನೆಗಳು ಅತ್ಯಂತ ವೇಗದಲ್ಲಿ ಹೆಚ್ಚುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

666 ಕಾರುಗಳುವು ಪ್ರಕರಣಗಳಲ್ಲಿ 243 ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಹೆಚ್ಚಿನ ಕಾರುಗಳುವು ಪ್ರಕರಣಗಳಲ್ಲಿ ಖದೀಮರು ಸಿಕ್ಕಿಬೀಳುವುದೇ ಇಲ್ಲ. ಸಿಕ್ಕಿ ಬಿದ್ದರೂ ಶಿಕ್ಷೆಗೊಳಗಾಗದೇ ಬಚಾವ್ ಆಗುತ್ತಿದ್ದಾರೆ. ಕಾರುಗಳ ಅತಿದೊಡ್ಡ ಮಾರುಕಟ್ಟೆಯಾಗಿರುವ ಇಂಗ್ಲೆಂಡ್ ನಲ್ಲಿ ಕಾರುಗಳ್ಳತನವು ದೊಡ್ಡ ಸಮಸ್ಯೆಯನ್ನು ತಂದಿಟ್ಟಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಪ್ರಕರಣದ ಗಂಭೀರತೆಯನ್ನು ಅರಿತ ಇಂಗ್ಲೆಂಡಿನ ಹೈಕೋರ್ಟ್ ಕಾರು ಕಳ್ಳತನದ ಪ್ರಕರಣಗಳ ತನಿಖೆ ನಡೆಸಲು ಕಳೆದ ವರ್ಷ ಕಾರ್ಯಪಡೆ ತಂಡವನ್ನು ರಚಿಸಿತ್ತು. ಹೆಚ್ಚುತ್ತಿರುವ ಕಾರುಗಳುವು ಪ್ರಕರಣಗಳನ್ನು ಗಮನಿಸಿದರೆ ಕಾರ್ಯಪಡೆಯು ಸಹ ಅಸಮರ್ಪಕವಾಗಿರುವುದು ಕಂಡು ಬರುತ್ತದೆ.

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಪೊಲೀಸರು ಸಹ ಕಾರು ಕಳ್ಳತನದ ಪ್ರಕರಣಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಕಳುವಾದ ಕಾರುಗಳು ಮತ್ತೆ ಸಿಗುವ ಸಾಧ್ಯತೆಗಳು ಸಹ ತೀರಾ ಕಡಿಮೆ. ಇದರ ಜೊತೆಗೆ ವಿಮಾ ಕಂಪನಿಗಳು ಕಳುವಾದ ಕಾರುಗಳ ಮಾಲೀಕರಿಗೆ ಪರಿಹಾರ ನೀಡುತ್ತಿವೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಹೆಚ್ಚಿನ ಕಾರು ಮಾಲೀಕರು ಕಾರುಗಳನ್ನು ಪಾರ್ಕ್ ಮಾಡಿದ ನಂತರ ಲಾಕ್ ಮಾಡುವುದಿಲ್ಲವೆಂಬುದು ವರದಿಯಲ್ಲಿ ಬಹಿರಂಗವಾಗಿದೆ. ಈ ಕಾರಣದಿಂದಾಗಿ ಕಾರುಗಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಕಾರು ಮಾಲೀಕರು ಕಾರುಗಳ ಸುರಕ್ಷತೆಗೆ ಆದ್ಯತೆ ನೀಡದೇ ಇರುವುದೇ ಮತ್ತೊಂದು ಕಾರಣ.

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಕಾರಿನ ಲಾಕಿಂಗ್ ಸಿಸ್ಟಂ ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಲಾಕ್ ಮಾಡುತ್ತದೆ ಎಂಬುದು ಬಹುತೇಕ ಕಾರು ಮಾಲೀಕರ ಅಭಿಪ್ರಾಯ. ಕಾರಿನ ಕೀ ಹತ್ತಿರದಲ್ಲಿದ್ದರೆ ಕಾರು ತಾನಾಗಿಯೇ ಅನ್ ಲಾಕ್ ಆಗುತ್ತದೆ. ಕೀ ದೂರದಲ್ಲಿದ್ದರೆ ಲಾಕ್ ಆಗುತ್ತದೆ ಎಂಬ ತಪ್ಪು ಕಲ್ಪನೆಯೇ ಕಾರುಗಳ ಕಳ್ಳತನಕ್ಕೆ ಮುಖ್ಯ ಕಾರಣವಾಗುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇಂಗ್ಲೆಂಡ್ ಪೊಲೀಸರಿಗೆ ಕಗ್ಗಂಟಾದ ಕಾರುಗಳ್ಳತನ ಪ್ರಕರಣಗಳು

ಕಾರುಗಳನ್ನು ಸರಿಯಾಗಿ ಲಾಕ್ ಮಾಡದೇ ಇರುವುದರಿಂದ ಅನೇಕ ಕಾರುಗಳನ್ನು ಕಳವು ಮಾಡಲಾಗಿದೆ. ಇಂಗ್ಲೆಂಡ್ ಸರ್ಕಾರವು ಜನರು ತಮ್ಮ ಕಾರನ್ನು ಹೆಚ್ಚು ಸುರಕ್ಷಿತವಾದ ಅಥವಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವಂತೆ ಕೇಳಿಕೊಂಡಿದೆ.

Most Read Articles

Kannada
English summary
More than 300 cars theft reported daily in United Kingdom. Read in Kannada.
Story first published: Sunday, July 12, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X