22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಬೀಟಲ್, ಫೋಕ್ಸ್‌ವ್ಯಾಗನ್ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದು. ಫೋಕ್ಸ್‌ವ್ಯಾಗನ್ ಈ ಕಾರನ್ನು ದೀರ್ಘಕಾಲದವರೆಗೆ ಉತ್ಪಾದಿಸಿತು. ಕಂಪನಿಯು ಈಗ ಬೀಟಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಹೊಸ ಕಾರುಗಳನ್ನು ಉತ್ಪಾದಿಸುತ್ತಿದೆ.

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಹಳೆಯ ಬೀಟಲ್ ಕಾರು ಇತಿಹಾಸದ ಪುಟ ಸೇರಿದೆ. ಫೋಕ್ಸ್‌ವ್ಯಾಗನ್ ಬೀಟಲ್ ಕಾರನ್ನು ವೋಕಲ್ ಎಂದೂ ಸಹ ಕರೆಯಲಾಗುತ್ತದೆ. ಇತ್ತೀಚೆಗೆ ಬೀಟಲ್ ಕಾರಿನ 1990ರ ಮಾದರಿಗೆ ಸಂಬಂಧಿಸಿದ ಫೋಟೋಗಳು ಬಿಡುಗಡೆಯಾಗಿವೆ. ಈ ಫೋಟೋಗಳಲ್ಲಿ ಬೀಟಲ್ ಕಾರನ್ನು ವಿಶಿಷ್ಟವಾಗಿ ಅಲಂಕಾರ ಮಾಡಲಾಗಿದೆ. ಈ ಕಾರಿನ ಮೇಲೆ 22,77,000 ಗಾಜಿನ ತುಂಡುಗಳಿವೆ.

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಈ ಗಾಜಿನ ತುಂಡುಗಳು ವಿಭಿನ್ನ ಬಣ್ಣಗಳಲ್ಲಿರುವುದು ವಿಶೇಷ. ಈ ಕಾರು ಸಾಂಪ್ರದಾಯಿಕ ಕಲಾಕೃತಿಗಳನ್ನು ಹೊಂದಿದ್ದು, ಸಾಕಷ್ಟು ಆಕರ್ಷಕವಾಗಿದೆ.2010ರಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಬೀಟಲ್ ವೋಕಲ್ ತಯಾರಿಸಲು ತಂಡವೊಂದನ್ನು ರಚಿಸಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಬೀಟಲ್ ಹೆಸರನ್ನು ಪುನರುಜ್ಜೀವನಗೊಳಿಸುವ ಹಾಗೂ ಮೆಕ್ಸಿಕೊದ ಸಾಂಪ್ರದಾಯಿಕ ಕಲಾಕೃತಿಗಳನ್ನು ಕಾರಿನ ಸಹಾಯದಿಂದ ಉತ್ತೇಜಿಸುವ ಕಾರ್ಯವನ್ನು ಈ ತಂಡಕ್ಕೆ ವಹಿಸಲಾಯಿತು.

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಈ ತಂಡವು ಮೆಕ್ಸಿಕೊದ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಕಲಾಕೃತಿಗಳನ್ನು ಕಾರಿನ ಮೇಲೆ ಕೆತ್ತುವ ಕೆಲಸವನ್ನು ಆರಂಭಿಸಿತು. ಗಾಜಿನ ತುಂಡುಗಳಿಂದ ಕಲಾಕೃತಿಗಳನ್ನು ರಚಿಸುವ ಕೆಲಸವನ್ನು 8 ಕಲಾವಿದರ ತಂಡವು ಆರಂಭಿಸಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಈ ಕಲಾಕೃತಿಯನ್ನು ತಯಾರಿಸಲು ಎಂಟು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಈ ಕಲಾಕೃತಿಯನ್ನು ಕಾರಿನ ಒಳಗೆ ಹಾಗೂ ಹೊರಗೆ ತಯಾರಿಸಲಾಗಿದೆ. ಈ ಕಲಾಕೃತಿಯನ್ನು ತಯಾರಿಸಲು ಯಾವುದೇ ಯಂತ್ರವನ್ನು ಬಳಸಲಾಗಿಲ್ಲ.

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಈ ಕಾರಿನಲ್ಲಿರುವ ಕಲಾಕೃತಿಗಳು ಮೆಕ್ಸಿಕೊದ ಮೂಲನಿವಾಸಿಗಳ ಹ್ಯೂಕಾಲ್ ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಪ್ರದರ್ಶಿಸುತ್ತವೆ. ಹ್ಯೂಕಾಲ್ ಸಂಸ್ಕೃತಿಯ ಪ್ರಕಾರ ಎರಡು ಹಾವುಗಳನ್ನು ಕಾರಿನ ಹುಡ್'ನಲ್ಲಿ ತಯಾರಿಸಲಾಗಿದೆ. ಇದು ಮಳೆಯ ಸಂಕೇತವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಕರಡಿ, ಜಿಂಕೆ ಹಾಗೂ ಪಕ್ಷಿಗಳ ಕಲಾಕೃತಿಗಳನ್ನು ಸಹ ಇದರಲ್ಲಿ ರಚಿಸಲಾಗಿದೆ. ಕಾರಿನ ರೂಫ್ ನಲ್ಲಿ ಸೂರ್ಯನ ಸಂಕೇತವಾದ ಜೈ ಎಂಬ ಕಲಾಕೃತಿ ಇದೆ. ಇದು ಮನುಷ್ಯರು ಹಾಗೂ ದೇವರ ನಡುವಿನ ಸಂಬಂಧವನ್ನು ಸೂಚಿಸುತ್ತದೆ.

22 ಲಕ್ಷಕ್ಕೂ ಹೆಚ್ಚು ಗಾಜಿನ ತುಂಡುಗಳಿಂದ ಅಲಂಕೃತಗೊಂಡ ಫೋಕ್ಸ್‌ವ್ಯಾಗನ್ ಕಾರು

ಮೆಕ್ಸಿಕೋದ ಗ್ವಾಡಲಜ್ರಾ ನಗರದಲ್ಲಿರುವ ಮ್ಯೂಸಿಯಂನಲ್ಲಿ ಈ ಕಾರನ್ನು ಪ್ರದರ್ಶನಕ್ಕೀಡಾಲಾಗಿದೆ. ಈ ಕಾರು ಕಲೆಯ ರೂಪದಲ್ಲಿ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಕಾರನ್ನು ಅಮೆರಿಕಾ, ಯುರೋಪ್, ಏಷ್ಯಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಪ್ರದರ್ಶನಕ್ಕೆ ಬಳಸಲಾಗಿದೆ.

Most Read Articles

Kannada
English summary
More than two million glass buds used for Volkswagen Beetle car decoration. Read in Kannada.
Story first published: Tuesday, November 17, 2020, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X