ಕರ್ನಾಟಕದಲ್ಲಿ ಮತ್ತೊಂದು ಎಕ್ಸ್‌ಪ್ರೆಸ್‌ ವೇ: ಭಾರತದ ಬಹುನಿರೀಕ್ಷಿತ 5 ಎಕ್ಸ್‌ಪ್ರೆಸ್‌ ವೇ ಯೋಜನೆಗಳಿವು

ಭಾರತ ಸರ್ಕಾರವು ಇತ್ತೀಚೆಗೆ ವಿಶ್ವ ದರ್ಜೆಯ ಗುಣಮಟ್ಟವುಳ್ಳ ಹೆದ್ದಾರಿಗಳನ್ನು ನಿರ್ಮಿಸಲು ಪಣತೊಟ್ಟಂತೆ ತೋರುತ್ತಿದೆ. ವರದಿಗಳ ಪ್ರಕಾರ ಭಾರತೀಯ ಸಾರಿಗೆ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರವು 1.8 ಲಕ್ಷ ಕಿಲೋಮೀಟರ್‌ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಯೋಜನೆ ನಡೆಸುತ್ತಿದ್ದು ಆದಷ್ಟು ಬೇಗ ಮುಗಿಸುವತ್ತ ಗಮನ ಹರಿಸಿದೆ ಎಂದು ತಿಳಿದು ಬಂದಿದೆ.

ಎಕ್ಸ್‌ಪ್ರೆಸ್‌ ವೇ ಯೋಜನೆಗಳನ್ನು 2025 ರಲ್ಲಿ ಮುಗಿಸುವ ಗುರಿ ಹೊಂದಿದ್ದು, ನಾಗರೀಕರ ಸಂಚಾರಕ್ಕೆ ಬಹುದೊಡ್ಡ ಉತ್ತೇಜನ ಸಿಕ್ಕಿದಂತಾಗುತ್ತದೆ. ನೀವೇನಾದರೂ ಮುಂದೆ ಯಾವುದೆಲ್ಲಾ ಎಕ್ಸ್‌ಪ್ರೆಸ್‌ ವೇ (Express Way) ಯೋಜನೆಗಳನ್ನು ಭಾರತ ಸರ್ಕಾರ ಕೈಗೊಳ್ಳಲಿದೆ ಎಂಬುದರ ಬಗ್ಗೆ ತುಂಬಾ ಕುತೂಹಲಕಾರಿ ಆಗಿದ್ದರೆ ಲೇಖನ ನಿಮಗಾಗಿ.

Most Anticipated Upcoming Express Way

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ: ದೇಶದ ಪ್ರಮುಖ ನಗರಗಳಲ್ಲಿ ದೆಹಲಿ ಮತ್ತು ಮುಂಬೈ. ಎರಡೂ ಮಹಾ ನಗರಗಳನ್ನು ಸಂಪರ್ಕಿಸಲು ಸರ್ಕಾರವು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ಹೈವೇ ಯನ್ನು ನಿರ್ಮಿಸಲಿದೆ. ಒಂದೊಮ್ಮೆ ರಸ್ತೆ ಸಂಪೂರ್ಣವಾದರೆ ಕೇವಲ 11 ರಿಂದ 12 ಗಂಟೆಗಳಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಸುಮಾರು 13 ರಿಂದ 14 ಗಂಟೆಗಳು ಉಳಿಯುತ್ತವೆ.

ಮುಂಬೈ-ನಾಗ್ಪುರ್‌ ಎಕ್ಸ್‌ಪ್ರೆಸ್‌ ವೇ: ವರದಿಗಳ ಪ್ರಕಾರ ಮುಂಬೈ-ನಾಗ್ಪುರ್‌ ಎಕ್ಸ್‌ಪ್ರೆಸ್‌ ವೇ ಪೂರ್ತಿಯಾಗಲು ಇನ್ನು ಕೇವಲ 6 ರಿಂದ 7 ತಿಂಗಳುಗಳು ಬಾಕಿ ಉಳಿದಿವೆ. ಒಂದೊಮ್ಮೆ ಇದು ಸಂಪೂರ್ಣವಾಗಿ ಪೂರ್ತಿಯಾದರೆ ಕೇವಲ 8 ಅಥವಾ ಅದಕ್ಕಿಂತ ಕಡಿಮೆ ಗಂಟೆಗಳ ಅವಧಿಯಲ್ಲಿ ಪ್ರಯಾಣಿಕರು ಮುಂಬೈ ಯಿಂದ ನಾಗ್ಪುರ ತಲುಪಬಹುದಾಗಿದೆ.

Most Anticipated Upcoming Express Way

ದೆಹಲಿ-ಅಮೃತಸರ್‌-ಕಾತ್ರಾ ಎಕ್ಸ್‌ಪ್ರೆಸ್‌ ವೇ: ದೇಶದ ಬಹುಮಿರೀಕ್ಷಿತ ಎಕ್ಸ್‌ಪ್ರೆಸ್‌ ವೇ ಪ್ರಾಜೆಕ್ಟ್‌ಗಳಲ್ಲಿ ದೆಹಲಿ-ಅಮೃತಸರ್‌-ಕಾತ್ರಾ ಎಕ್ಸ್‌ಪ್ರೆಸ್‌ ವೇ ಸಹ ಒಂದು. ಸುಮಾರು 648 ಕಿಲೋ ಮೀಟರ್‌ಗಳಷ್ಟು ಇರುವ ಎಕ್ಸ್‌ಪ್ರೆಸ್‌ ವೇ ಜಮ್ಮುವಿನ ಕಾತ್ರಾ ಯಿಂದ ದೆಹಲಿಯ ಬಹದುರ್‌ಗರ್‌ ಗಡಿಯ ನಡುವೆ ಸಂಪರ್ಕ ಒದಗಿಸುತ್ತದೆ.

ಗಂಗಾ ಎಕ್ಸ್‌ಪ್ರೆಸ್‌ ವೇ: ಸುಮಾರು 94 ಕಿಮೀ ಉದ್ದವುಳ್ಳ ಗಂಗಾ ಎಕ್ಸ್‌ಪ್ರೆಸ್‌ ವೇ ಆರು ಲೇನ್‌ಗಳನ್ನು ಹೊಂದಲಿದೆ. ಎಕ್ಸ್‌ಪ್ರೆಸ್‌ ವೇ ಹಾಪುರ್‌, ಬುಲಾಂದ್‌ಶರ್‌, ಅಮೋರಾ, ಸಾಂಭಲ್‌, ಉನ್ನಾವೋ ಸೇರಿದಂತೆ ಸುಮಾರು 12 ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ. ವರದಿಗಳ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ 2025 ಒಳಗಾಗಿ ಗಂಗಾ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಪೂರ್ಣಗೊಳ್ಳಲಿದೆ.

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ನಮ್ಮ ರಾಜ್ಯದ ಮತ್ತೊಂದು ಎಕ್ಸ್‌ಪ್ರೆಸ್‌ ವೇ. ಇದರ ಕಾಮಗಾರಿ ಈಗಾಗಲೇ ಆರಂಭವಾಗಿದ್ದು ಹೆದ್ದಾರಿಯ ಕೆಲಸ ಪೂರ್ಣವಾಗಲು ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದು 262 ಕಿಲೋ ಮೀಟರ್‌ 4 ಲೆನ್‌ ಹೆದ್ದಾರಿ ಉದ್ಘಾಟನೆ ಆದಮೇಲೆ ಕೇವಲ ಎರಡೂವರೆ ಗಂಟೆಗಳಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 14, 2023, 16:37 [IST]
English summary
Most anticipated upcoming express way s of india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+