ಕಾರು ಡ್ರೈವ್ ಮಾಡುವಾಗ ಮಾಡುವ ಸಾಮಾನ್ಯ ತಪ್ಪುಗಳಿವು..!
ಎಷ್ಟೇ ದೊಡ್ಡ ಡ್ರೈವರ್ ಆಗಿರಲಿ, ಕಾರು ಚಾಲನೆ ಮಾಡುವಾಗ ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿರುತ್ತಾರೆ. ಆದರೆ ಈ ಸಣ್ಣ ಪುಟ್ಟ ತಪ್ಪುಗಳೇ ಭಾರೀ ಪ್ರಮಾಣದ ಅಪಘಾತಕ್ಕೆ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು.

ಕಾರು ಡ್ರೈವ್ ಮಾಡುವಾಗ, ಮಾಡುವ ಆ ಸಣ್ಣ ಪುಟ್ಟ ತಪ್ಪುಗಳೇನು? ಅವುಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದರಿಂದ ಮುಂದೆ ಈ ರೀತಿಯ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬಹುದು.

ಮಳೆ ಸುರಿಯುವಾಗ
ನೀವು ಕಾರಿನಲ್ಲಿ ಪ್ರಯಾಣಿಸುವಾಗ ಮಳೆ ಬಂದರೆ, ಬರುತ್ತಿದ್ದರೆ, ಕಾರ್ ಅನ್ನು ನಿಧಾನಗೊಳಿಸುವುದು ಒಳ್ಳೆಯದು. ಮಳೆ ಬರುವಾಗ ರಸ್ತೆಗಳು ಜಾರುವಂತಾಗುವುದು ಸಹಜ. ಕಾರ್ ಅನ್ನು ಕಂಟ್ರೋಲ್ ಮಾಡಬೇಕಾದರೆ ನಿಧಾನವಾಗಿ ಚಲಿಸುವುದು ಉತ್ತಮ. ಆದರೆ ಬಹುತೇಕ ಜನರು ಎಷ್ಟೇ ಜೋರಾಗಿ ಮಳೆ ಸುರಿಯುತ್ತಿದ್ದರೂ ಕಾರ್ ಅನ್ನು ನಿಧಾನಗೊಳಿಸುವುದಿಲ್ಲ.

ಸ್ಮೂಥ್ ಡ್ರೈವ್
ನೀವು ಕಾರು ಚಾಲನೆ ಮಾಡುವಾಗ ಆಕ್ಸೆಲೆರೇಟರ್ ಪೆಡಲ್‍ಗಳನ್ನು ಅವಶ್ಯಕತೆಗಿಂತ ಹೆಚ್ಚು ತುಳಿಯುವ ಅಭ್ಯಾಸವನ್ನು ಹೊಂದಿರುವಿರಾ? ಕಾರ್ ಅನ್ನು ನಿಧಾನಗೊಳಿಸಲು ಬ್ರೇಕ್ ಪೆಡಲ್‍ಗಳನ್ನು ತುಳಿಯುವ ಅಭ್ಯಾಸವನ್ನು ಹೊಂದಿರುವಿರಾ? ಇವೆರಡೂ ಅಭ್ಯಾಸವನ್ನು ಹೊಂದಿದ್ದರೆ ನೀವು ಇಂಧನವನ್ನು ವೇಸ್ಟ್ ಮಾಡುತ್ತಿದ್ದೀರಾ ಎಂದು ಅರ್ಥ.

ಬ್ರೇಕ್ ಪ್ಯಾಡ್‍ಗಳು ವ್ಯರ್ಥವಾಗಿರುತ್ತವೆ. ಇದರಿಂದ ಕಾರು ಚಾಲನೆ ಮಾಡಲು ಅಭ್ಯಾಸ ಮಾಡಿಕೊಳ್ಳಿ. ಕ್ರಮೇಣ ಪೆಡಲ್‌ಗಳ ಮೇಲೆ ಒತ್ತಡ ಹೇರುವ ಮೂಲಕ ನೀವು ಕಾರನ್ನು ಸರಾಗವಾಗಿ ಓಡಿಸಬಹುದು. ಸರಿಯಾದ ತರಬೇತಿಯೊಂದಿಗೆ, ನೀವು ಕಾರನ್ನು ಚಾಲನೆ ಮಾಡಲು ಒಗ್ಗಿಕೊಳ್ಳಬಹುದು.

ನಿಧಾನವಾಗಿ ಇಂಡಿಕೇಟರ್ ಹಾಕುವುದು
ಕೆಲವರು ತಮ್ಮ ಕಾರುಗಳನ್ನು ಬಲಕ್ಕೆ ಅಥವಾ ಎಡಕ್ಕೆ ತಿರುಗಿಸುವಾಗ ಸಾಕಷ್ಟು ಮೊದಲು ಇಂಡಿಕೇಟರ್ ಹಾಕುವ ಬದಲು, ಇನ್ನೇನು ಕಾರು ತಿರುಗಿಸಬೇಕು ಎನ್ನುವಾಗ ಇಂಡಿಕೇಟರ್ ಹಾಕುತ್ತಾರೆ. ಇದರಿಂದ ಹಿಂದೆ ಬರುತ್ತಿರುವ ಬೇರೆ ವಾಹನ ಚಾಲಕರಿಗೆ ಗಲಿಬಿಲಿ ಉಂಟಾಗಿ ಅಪಘಾತಗಳಾಗುತ್ತವೆ. ಮೊದಲೇ ಇಂಡಿಕೇಟರ್ ಆನ್ ಮಾಡಿದರೆ ಬೇರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ.

ಸುಮ್ಮನೆ ಇಂಡಿಕೇಟರ್ ಹಾಕುವುದು
ಕೆಲವರು ತಮ್ಮ ಕಾರ್ ಅನ್ನು ಬಲಕ್ಕೆ ಅಥವಾ ಎಡಕ್ಕೆ ತಿರುಗಿಸದಿದ್ದರೂ ಸುಮ್ಮನೆ ಇಂಡಿಕೇಟರ್ ಹಾಕುತ್ತಾರೆ. ಇದರಿಂದಾಗಿ ಹಿಂದೆ ಬರುತ್ತಿರುವ ಬೇರೆ ವಾಹನ ಸವಾರರು ಗೊಂದಲಕ್ಕೊಳಗಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಬಲಕ್ಕೆ ಅಥವಾ ಎಡಕ್ಕೆ ವಾಹನಗಳನ್ನು ತಿರುಗಿಸಿದರೂ ಇಂಡಿಕೇಟರ್‍ಗಳನ್ನು ಆಫ್ ಮಾಡುವುದಿಲ್ಲ.

ವಾಟರ್ ಬಾಟಲ್
ಬೇಸಿಗೆಯಲ್ಲಿ ದೂರದ ಪ್ರಯಾಣ ಮಾಡುವಾಗ ಬಾಯಾರಿಕೆಯಾಗುವುದು ಸಹಜ. ನೀರು ಸಿಗದಿದ್ದಲ್ಲಿ ಗಮನವೆಲ್ಲಾ ನೀರಿನ ಮೇಲಿರಲಿದೆ. ಇದರಿಂದಾಗಿ ವಾಹನದತ್ತ ಗಮನ ಹರಿಸದೇ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಸಾಧ್ಯವಾದಷ್ಟು ನೀರಿನ ಬಾಟಲ್ ಅನ್ನು ಜೊತೆಯಲ್ಲಿ ಕೊಂಡೊಯ್ಯಿರಿ.

ಒನ್‍ವೇಯಲ್ಲಿ ಸಂಚಾರ
ಒನ್‍ವೇ ಸಂಚಾರ ಇರುವ ಕಡೆ ಅದರಲ್ಲೂ ಆ ಏರಿಯಾದಲ್ಲಿ ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದರೆ, ಒನ್‍ವೇಯಲ್ಲಿ ಹೋಗದಿರುವುದು ಒಳ್ಳೆಯದು. ಗೊತ್ತಿಲ್ಲದೇ ಹೋಗುವುದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ.

ನಿಧಾನಗತಿಯಲ್ಲಿ ಚಲಿಸಿ
ಕೆಲವರು ಕಾರುಗಳಿರುವುದೇ ಅತಿ ವೇಗದಲ್ಲಿ ಚಲಿಸಲು ಎಂಬಂತೆ ವೇಗವಾಗಿ ಕಾರುಗಳನ್ನು ಚಲಾಯಿಸುತ್ತಾರೆ. ಇದರಿಂದಾಗಿ ಕಾರಿನ ಮೇಲೆ ನಿಯಂತ್ರಣ ತಪ್ಪಿ ಅಪಘಾತಗಳಾಗುತ್ತವೆ. ಆದ್ದರಿಂದ ನಿಧಾನಗತಿಯಲ್ಲಿ ಚಲಿಸುವುದು ಒಳ್ಳೆಯದು.

ಮೊಬೈಲ್ ಬಳಕೆ
ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯನ್ನು ತಪ್ಪಿಸುವುದು ಒಳ್ಳೆಯದು. ಮೊಬೈಲಿನ ಇನ್ನೊಂದು ಕಡೆಯಿಂದ ಗಾಬರಿಗೊಳ್ಳುವ ಸುದ್ದಿಗಳು ಬರುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಗಮನವೆಲ್ಲಾ ಅತ್ತ ಹರಿದು ಅಪಘಾತಗಳಾಗುತ್ತವೆ.


Click it and Unblock the Notifications