ಭಾರತದಲ್ಲಿ ಕಾರು ಚಾಲನೆ ಎಷ್ಟು ಸುರಕ್ಷಿತ?

By Nagaraja

ಹಳ್ಳ, ಗುಂಡಿಗಳಿಂದ ಹದೆಗೆಟ್ಟಿರುವ ನಮ್ಮ ರಸ್ತೆಗಳ ಕುರಿತು ಯೋಚಿಸುವಾಗಲೇ ಸಾಕಪ್ಪಾ ಸಾಕು ಇಲ್ಲಿನ ಸಹವಾಸ ಎಂದು ಅನಿಸಿಬಿಡುತ್ತಾರೆ. ಹಾಗಿರುವಾಗ ದೇಶದ ರಸ್ತೆಯಲ್ಲಿ ಚಾಲನೆ ಮಾಡುವುದೇ ದೊಡ್ಡ ಸವಾಲೇ ಸರಿ. ಆದರೆ ಇಲ್ಲೊಂದು ಅಚ್ಚರಿಯ ಮಾಹಿತಿ ನಿಮಗಾಗಿ ಕಾದಿದೆ. ಅದು ಏನು ಅಂತೀರಾ? ಇತ್ತೀಚೆಗಷ್ಟೇ ಅಧ್ಯಯನ ಸಂಸ್ಥೆಯೊಂದು ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಇಲ್ಲಿ ಜಗತ್ತಿನ ಸುರಕ್ಷಿತ ಹಾಗೂ ಅತಿ ಅಪಾಯಕಾರಿ ದೇಶ ರಸ್ತೆಗಳ ಕುರಿತು ಮಾಹಿತಿ ಬಹಿರಂಗಪಡಿಸಿದೆ.

2014 ಆಟೋ ಎಕ್ಸ್ ಪೋ ಬಿಗ್ ಲಾಂಚ್

ನಿಮ್ಮಲ್ಲೂ ಜಗತ್ತಿನ ಸುರಕ್ಷಿತ ರಸ್ತೆ ಸಂಚಾರ ಯಾವ ದೇಶದಲ್ಲಿ ಸಾಧ್ಯ ಹಾಗೆಯೇ ಅತ್ಯಂತ ಕೆಟ್ಟ ರಸ್ತೆ ಹೊಂದಿರುವ ದೇಶ ಯಾವುದೆಂಬುದನ್ನು ತಿಳಿಯುವ ಕುತೂಹಲ ಇರಬಹುದು. ಅಂದ ಹಾಗೆ ಮಿಚಿಗನ್ ವಿಶ್ವವಿದ್ಯಾಲಯದ ಸಾರಿಗೆ ಅಧ್ಯಯನ ಸಂಸ್ಥೆ (university of Michigan Transportation Research Institute) ಈ ವರದಿಯನ್ನು ಬಿಡುಗಡೆಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿರುವ 193 ದೇಶಗಳ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಆಧಾರದಲ್ಲಿ ಇದನ್ನು ತಯಾರಿಸಲಾಗಿದೆ. ಇದರ ಮುಖ್ಯಾಂಶಗಳು ಇಂತಿದೆ:

  • ವಾಹನ ಅಪಘಾತದಲ್ಲಿ ಸರಾಸರಿ ಸಾವು - ಒಂದು ಲಕ್ಷ ಮಂದಿಗೆ 18.
  • ರಸ್ತೆ ಸುರಕ್ಷಿತ ವಿಚಾರದಲ್ಲಿ ಅತಿ ಕೆಟ್ಟ ದೇಶ - ನಮೀಬಿಯಾ, ಪ್ರತಿ ಲಕ್ಷ ಮಂದಿಗೆ 45 ಮರಣಗಳು
  • ಸುರಕ್ಷಿತ ರಸ್ತೆ ಹೊಂದಿರುವ ರಾಷ್ಟ್ರ- ಮಾಲ್ದೀವ್ಸ್, ಪ್ರತಿ ಲಕ್ಷಕ್ಕೆ 2 ಮರಣ.

ಅಚ್ಚರಿಯೆಂಬಂತೆ ಸಾವನ್ನಪ್ಪಿರುವ ಎಲ್ಲ ಕಾರಣಗಳನ್ನು ಪರಿಗಣಿಸಿದಾಗ ಅಭಿವೃದ್ಧಿ ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಮುಂಚೂಣಿಯಲ್ಲಿದ್ದು, ಶೇಕಡಾ 15.9 ಮಂದಿ ರಸ್ತೆ ಅಪಘಾತದಿಂದಲೇ ಸಾವನ್ನಪ್ಪುತ್ತಾರೆ. ಇಲ್ಲಿ ಜಾಗತಿಕ ಸರಾಸರಿ ಶೇಕಡಾ 2.1 ಆಗಿದೆ.

ನಮೀಬಿಯಾ

ನಮೀಬಿಯಾ

ಜಗತ್ತಿನಲ್ಲಿ ಅತ್ಯಂತ ಕೆಟ್ಟ ರಸ್ತೆ ನಮೀಬಿಯಾ ಹೊಂದಿರುವುದಾಗಿ ವಿಶ್ಲೇಷಿಸಬಹುದಾಗಿದ್ದು, ಇಲ್ಲಿ ಪ್ರತಿ ಒಂದು ಲಕ್ಷಕ್ಕೆ 45 ಮಂದಿ ರಸ್ತೆ ಅಪಘಾತದಿಂದಲೇ ಸಾವನ್ನಪ್ಪುತ್ತಾರೆ.

ಥಾಯ್ಲೆಂಡ್

ಥಾಯ್ಲೆಂಡ್

ನಮೀಬಿಯಾ ರಾಷ್ಟ್ರವನ್ನು ಥಾಯ್ಲೆಂಡ್ ಹಿಂಬಾಲಿಸುತ್ತಿದ್ದು, ಇಲ್ಲಿ ಪ್ರತಿ ಲಕ್ಷ ಮಂದಿಯಲ್ಲಿ 44 ಜನರು ರಸ್ತೆ ಅಪಘಾತದಿಂದಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ.

ಇರಾನ್

ಇರಾನ್

ಮೂರನೇ ಅತಿ ಕೆಟ್ಟ ರಸ್ತೆ ಪರಿಸ್ಥಿತಿ ಹೊಂದಿರುವ ಇರಾನ್‌ನಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 38 ಮರಣಗಳು ರಸ್ತೆ ಅಪಘಾತದಿಂದಲೇ ಸಂಭವಿಸುತ್ತದೆ.

ಸ್ವಾಝಿಲ್ಯಾಂಡ್ (Swaziland)

ಸ್ವಾಝಿಲ್ಯಾಂಡ್ (Swaziland)

ಸ್ವಾಝಿಲ್ಯಾಂಡ್ ಬಗ್ಗೆ ನೀವು ಹೆಚ್ಚು ಅರಿತುಕೊಂಡಿರಲಾರರು. ಆಫ್ರಿಕಾ ಖಂಡದ ಸಣ್ಣ ರಾಷ್ಟ್ರಗಳಲ್ಲಿ ಒಂದಾಗಿರುವ ಸ್ವಾಝಿಲ್ಯಾಂಡ್ ಅತ್ಯಂತ ಅಪಾಯಕಾರಿ ರಸ್ತೆ ಹೊಂದಿರುವ ದೇಶಗಳ ಪೈಕಿ ಐದನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ಒಂದು ಲಕ್ಷಕ್ಕೆ 36 ಮರಣಗಳು ರಸ್ತೆ ಅವಘಡದಿಂದಲೇ ಘಟಿಸುತ್ತಿವೆ.

ಚೀನಾ

ಚೀನಾ

ಇನ್ನು ಪಟ್ಟಿ ಮುಂದಕ್ಕೆ ಬೆಳೆದಂತೆ ನಮ್ಮ ನೆರೆಯ ಚೀನಾ ರಾಷ್ಟ್ರವು ಅತ್ಯಂತ ಕೆಟ್ಟ ರಸ್ತೆಗಳ ಪೈಕಿ 44ನೇ ಸ್ಥಾನದಲ್ಲಿದೆ. ಇಲ್ಲಿ ಲಕ್ಷ ಮಂದಿಗೆ 22 ಮರಣಗಳು ರಸ್ತೆ ಅಪಘಾತದಿಂದಾಗಿ ಸಂಭವಿಸುತ್ತದೆ.

ಭಾರತ

ಭಾರತ

ಅಭಿವೃದ್ಧಿ ಹೊಂದಿರುವ ಚೀನಾ ರಾಷ್ಟ್ರಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಂಡಿರುವ ಬಾರತ 76ನೇ ಸ್ಥಾನದಲ್ಲಿದ್ದು, ಇದು ಜಾಗತಿಕ ಸರಾಸರಿಯ ಸಮೀಪದಲ್ಲಿದೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 17 ಮರಣಗಳು ರಸ್ತೆ ಅಪಘಾತದಿಂದಾಗಿ ಸಂಭವಿಸುತ್ತದೆ.

ಅಮೆರಿಕ

ಅಮೆರಿಕ

ಅದೇ ರೀತಿ ಅಮೆರಿಕ 97ನೇ ಸ್ಥಾನದಲ್ಲಿದ್ದು, ಪ್ರತಿ ಒಂದು ಲಕ್ಷಕ್ಕೆ 14 ಮಂದಿ ರಸ್ತೆ ಅಪಘಾತದಿಂದಾಗಿ ಸಾವನ್ನಪ್ಪುತ್ತಾರೆ.

ಬ್ರಿಟನ್

ಬ್ರಿಟನ್

ಇನ್ನು ಯುನೈಟೆಡ್ ಕಿಂಗ್‌ಡಮ್ ಮುಂಚೂಣಿಯಲ್ಲಿ ಅಂದರೆ 180ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಪ್ರತಿ ಒಂದು ಲಕ್ಷಕ್ಕೆ 5 ಮರಣಗಳು ಮಾತ್ರ ರಸ್ತೆ ಅಪಘಾತದಿಂದಾಗಿ ಘಟಿಸುತ್ತಿರುತ್ತವೆ.

ಮಾಲ್ದೀವ್ಸ್

ಮಾಲ್ದೀವ್ಸ್

ಇನ್ನು ಸುರಕ್ಷಿತ ರಸ್ತೆ ಚಾಲನೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ನಮೀಬಿಯಾದಲ್ಲಿ ಪ್ರತಿ ಲಕ್ಷಕ್ಕೆ ಕೇವಲ ಇಬ್ಬರು ಮಾತ್ರ ರಸ್ತೆ ಅಪಘಾತದಿಂದಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ.

ನಕ್ಷೆ

ನಕ್ಷೆ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಜಗತ್ತಿನ ಅತ್ಯಂತ ಅಪಾಯಕಾರಿ 25 ರಾಷ್ಟ್ರಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ. ಅದೇ ರೀತಿ ಸುರಕ್ಷಿತ ರಾಷ್ಟ್ರಗಳನ್ನು ಹಸಿರು ವರ್ಣದಲ್ಲಿ ನೀಡಲಾಗಿದೆ.

More from DriveSpark

Article Published On: Thursday, February 27, 2014, 6:03 [IST]
English summary
I am sure each of us have wondered at some point in our life as to which country is the safest or the most dangerous in the world when it comes to driving on the road. The university of Michigan Transportation Research Institute now has clear answers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+