ಇವರೇ ನೋಡಿ ಭಾರತದ ಅತ್ಯಂತ ದುಬಾರಿ ಕಾರುಗಳ ಒಡೆಯರು... ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ!
ಭಾರತೀಯ ಮಾರುಕಟ್ಟೆಯಲ್ಲಿ ಹಲವು ಕೈಗೆಟುವ ಕಾರುಗಳ ಜೊತೆ ಬಲು ದುಬಾರಿ ಕಾರುಗಳು ಕೂಡ ಇವೆ. ಭಾರತದಲ್ಲಿ ಉದ್ಯಮಿಗಳು ಮತ್ತು ಹಲವು ಕ್ಷೇತ್ರದ ಸೆಲೆಬ್ರಿಟಿಗಳು ಅತ್ಯಂತ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಅತ್ಯಂತ ದುಬಾರಿ ಬೆಲೆಯ ಕಾರುಗಳು ಮತ್ತು ಮಾಲೀಕರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಎಸ್ ರೆಡ್ಡಿ: ಪ್ರಸ್ತುತ, ಭಾರತದಲ್ಲಿನ ಅತ್ಯಂತ ದುಬಾರಿ ವಾಹನವೆಂದರೆ ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಆವೃತ್ತಿ. ಈ ಸೂಪರ್ ಐಷಾರಾಮಿ ಸೆಡಾನ್ ಭಾರತದ ಅತಿದೊಡ್ಡ ವೈದ್ಯಕೀಯ ಪೌಷ್ಟಿಕಾಂಶ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಬ್ರಿಟಿಷ್ ಬಯೋಲಾಜಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಎಸ್ ರೆಡ್ಡಿ ಅವರ ಒಡೆತನದಲ್ಲಿದೆ. ವರದಿಗಳ ಪ್ರಕಾರ, ಈ ಕಾರು ಬೆಂಗಳೂರಿನಲ್ಲಿ ಡೆಲಿವರಿ ಸಮಯದಲ್ಲಿ ಅವರಿಗೆ ಸುಮಾರು 14 ಕೋಟಿ ರೂ. ವೆಚ್ಚವಾಗಿದೆ.

ಈ ಮಾದರಿಯು ಬ್ರಿಟಿಷ್ ಐಷಾರಾಮಿ ವಾಹನ ತಯಾರಕ ಬೆಂಟ್ಲಿಯ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ರಚಿಸಲಾದ ಅತ್ಯಂತ ಸೀಮಿತ ಆವೃತ್ತಿಯಾಗಿದೆ. ಇಡೀ ಜಗತ್ತಿನಾದ್ಯಂತ ಬ್ರ್ಯಾಂಡ್‌ನಿಂದ ಕೇವಲ 100 ಯುನಿಟ್ ಗಳನ್ನು ಮಾತ್ರ ತಯಾರಿಸಲಾಗಿದೆ. ಈ ಐಷಾರಾಮಿ ಲ್ಯಾಂಡ್ ಯಾಚ್ 6.75-ಲೀಟರ್ V8 ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 506 ಬಿಹೆಚ್‍ಪಿ ಪವರ್ ಮತ್ತು 1020 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮುಖೇಶ್ ಅಂಬಾನಿ: .ಭಾರತದ ಅತ್ಯಂತ ದುಬಾರಿ ಕಾರುಗಳು ಪಟ್ಟಿಯಲ್ಲಿ ಅಂಬಾನಿಯ ಕಾರುಗಳು ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅವರು ಈ ಪಟ್ಟಿಯಲ್ಲಿ ಎರಡನೇಯ ಸ್ಥಾನವನ್ನು ಪಡೆದುಕೊಂಡಿದೆ. ರೋಲ್ಸ್ ರಾಯ್ಸ್ ಫ್ಯಾಂಟಮ್ ಸರಣಿ VIII ಲಾಂಗ್ ವ್ಹೀಲ್ ಬೇಸ್ (EWB) ಅಂಬಾನಿ ಫ್ಯಾಮಿಲಿ ಹೊಂದಿದ್ದಾರೆ. ಈ ಕಾರಿಗೆ ಮುಂಬೈನ ಆನ್ ರೋಡ್ ಬೆಲೆಯು ರೂ,13.5 ಕೋಟಿಯಾಗಿದೆ. ಇದು ಯಾವುದೇ ಗ್ರಾಹಕೀಕರಣ ಆಯ್ಕೆಗಳಿಲ್ಲದ ಬೆಲೆಯಾಗಿದೆ.

ಬೃಹತ್ ರೋಲ್ಸ್ ರಾಯ್ಸ್ ಸೀರಿಸ್ VIII EWB ಕಾರಿನಲ್ಲಿ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 563 Bhp ಮತ್ತು 900 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರು ಕೇವಲ 5.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪುತ್ತದೆ
ನಸೀರ್ ಖಾನ್ : ಇದು ದೇಶದ ಏಕೈಕ ಮೆಕ್ಲಾರೆನ್ 765 LT ಸ್ಪೈಡರ್ ಕಾರ್ ಆಗಿದೆ. ಈ ಮೆಕ್ಲಾರೆನ್ 765 LT ಸ್ಪೈಡರ್ ಕಾರಿನ ಬೆಲೆಯು ಸುಮಾರು ರೂ.12 ಕೋಟಿಯಾಗಿದೆ. ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿರುವ ಹೈದರಾಬಾದ್ ಮೂಲದ ಉದ್ಯಮಿ ನಸೀರ್ ಖಾನ್ ಈ ಅತಿ ದುಬಾರಿ ಸೂಪರ್ ಕಾರನ್ನು ಹೊಂದಿದ್ದಾರೆ. ಈ ಕಾರಿನಲ್ಲಿ 4.0 ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಈ ಎಂಜಿನ್ 765 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್ ಅನ್ನು 7-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಮೆಕ್ಲಾರೆನ್ ಬ್ರ್ಯಾಂಡ್ ಆಗಿ ಭಾರತದಲ್ಲಿನ ಉತ್ಸಾಹಿಗಳಲ್ಲಿ ದೀರ್ಘಕಾಲದವರೆಗೆ ಸಾಕಷ್ಟು ಜನಪ್ರಿಯವಾಗಿದೆ
ಮುಖೇಶ್ ಅಂಬಾನಿ: ಮರ್ಸಿಡಿಸ್ S600 ಗಾರ್ಡ್ ಆಗಿದೆ ಮತ್ತು ಇದು ವಿಶೇಷ ಆರ್ಡರ್ ವಾಹನವಾಗಿದ್ದು, ಇದರ ಬೆಲೆ ಸುಮಾರು ರೂ.10 ಕೋಟಿ. ಈ ಕಾರನ್ನು ಕುಟುಂಬದ ಮುಖ್ಯಸ್ಥ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮಾತ್ರ ಬಳಸುತ್ತಾರೆ. ಇದು ವಿಶ್ವದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ, ಅದರೊಳಗೆ ಕುಳಿತಿರುವ ಜನರನ್ನು ಯಾವುದೇ ರೀತಿಯ ದಾಳಿಯಿಂದ ರಕ್ಷಿಸಲು ಸಂಪೂರ್ಣವಾಗಿ ಶಸ್ತ್ರಸಜ್ಜಿತವಾಗಿದೆ.
ನಾಸೀರ್ ಖಾನ್: ಈ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಸಹ ನಾಸೀರ್ ಖಾನ್ ಅವರಿಗೆ ಸೇರಿದೆ ಮತ್ತು ಇದು ಭಾರತದ ಅತ್ಯಂತ ದುಬಾರಿ ಎಸ್‍ಯುವಿ ಆಗಿದೆ. ಇದರ ಬೆಲೆ ಸುಮಾರು ರೂ.8.20 ಕೋಟಿ. ಈ ಎಸ್‍ಯುವಿಯು 6.75-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 600 Bhp ಮತ್ತು 900 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications