ಹರಾಜಿನಲ್ಲಿ ಅತ್ಯಂತ ದುಬಾರಿ ಕಾರುಗಳ ಮಾರಾಟ
ನೀವು ಎಂದಾದರೂ ಕಾರು ಹರಾಜು ಪಕ್ರಿಯೆಯಲ್ಲಿ ಪಾಲ್ಗೊಂಡಿದ್ದೀರಾ? ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿದ್ದೀರಾ? ಯಾವುದೇ ಹರಾಜು ಪ್ರಕ್ರಿಯೆ ನಡೆದರೂ ಕೊನೆಗೆ ಆ ಕಾರು ಎಷ್ಟು ಮೊತ್ತಕ್ಕೆ ಹರಾಜಾಯಿತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮದಾಗಿರುತ್ತದೆ.
ಇನ್ನು ಜಗತ್ತಿನ ಬೆಳೆಬಾಳುವ ಕಾರುಗಳ ಹರಾಜು ನಡೆದರೆ ಹೇಗಿರಬಹುದು. ಹೌದು, ಇಂತಹದೊಂದು ದೊಡ್ಡ ಪಟ್ಟಿಯೊಂದಿಗೆ ನಾವಿಂದು ನಿಮ್ಮ ಮುಂದೆ ಆಗಮಿಸಿರುತ್ತೇವೆ. ಇಲ್ಲಿ ಹರಾಜು ಬೆಲೆಯನ್ನು ಡಾಲರ್‌ಗಳ ಮೂಲಕ ಕೊಡಲಾಗಿದೆ. ಇಲ್ಲಿ ಜಗತ್ತಿನ ಅತಿ ಪುರಾತನ ಕಾರುಗಳ ಪರಿಚಯ ಮಾಡಿಕೊಳ್ಳುವ ಅಪೂರ್ವ ಅವಕಾಶವಿದೆ.

1957 Ferrari 250 Testa Rossa
1950 ಹಾಗೂ 60ರ ದಶಕದಲ್ಲಿ ಫೆರಾರಿ 250 ಟೆಸ್ಟ್ ರೊಸ್ಸಾ ಹೆಚ್ಚಿನ ಗಮನ ಸೆಳೆದಿತ್ತು.
ಹರಾಜು ಬೆಲೆ: $16,390,000
ಹರಾಜುಗಾರರು- ಗುಡಿಂಗ್ಸ್ ಆಂಡ್ ಕಂಪನಿ
ಹರಾಜು ದಿನಾಂಕ- ಆಗಸ್ಟ್ 21, 2011

1936 Mercedes-Benz 540K Spezial Roadster
ಒಂದು ಕಾಲಘಟ್ಟದಲ್ಲಿ ಅತಿ ಬೇಡಿಕೆಯ ಕಾರೆನಿಸಿಕೊಂಡಿದ್ದ ಮರ್ಸಿಡಿಸ್ ಬೆಂಝ್ 540 ಕೆ ಸ್ಪೆಷಲ್ ರೋಡ್‌ಸ್ಟರ್ ಕಾರನ್ನು 1935 ಹಾಗೂ 1940ರ ಕಾಲಘಟ್ಟದಲ್ಲಿ ತಯಾರಿಸಲಾಗಿತ್ತು.
ಹರಾಜು ಬೆಲೆ:$11,770,000
ಹರಾಜುಗಾರರು- ಗುಡಿಂಗ್ಸ್ ಆಂಡ್ ಕಂಪನಿ
ಹರಾಜು ದಿನಾಂಕ- ಆಗಸ್ಟ್ 19, 2012

1960 Ferrari 250 GT California LWB Competizione Spyder
ವಿಶೇಷವಾಗಿಯೂ ಉತ್ತಮ ಅಮೆರಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಫೆರಾರಿ ಈ ಮಾದರಿಯನ್ನು ತಯಾರಿಸಿತ್ತು. ಫೆರಾರಿ 250 ಜಿಟಿ ಅತಿ ವಿರಳ ಮಾಡೆಲ್ ಆಗಿದ್ದು, ಕೇವಲ 50 ಯುನಿಟ್‌ಗಳನ್ನಷ್ಟೇ ತಯಾರಿಸಲಾಗಿತ್ತು. ಇದನ್ನು ಹಾಲಿವುಡ್ ನಟ ಜೇಮ್ಸ್ ಕೊಬರ್ನ್ ಹೊಂದಿದ್ದಾರೆ.
ಹರಾಜು ಬೆಲೆ: $11,275,000
ಹರಾಜುಗಾರರು- ಗುಡಿಂಗ್ಸ್ ಆಂಡ್ ಕಂಪನಿ
ಹರಾಜು ದಿನಾಂಕ- ಆಗಸ್ಟ್ 19, 2012

1968 Ford GT40
ಪ್ರಮುಖವಾಗಿಯೂ ಫೆರಾರಿ ಸವಾಲನ್ನು ಹಿಮ್ಮೆಟ್ಟಿಸಲು ಫೋರ್ಡ್ ಜಿಟಿ40 ತಯಾರಿಸಲಾಗಿತ್ತು. ಸತತ ನಾಲ್ಕು ಬಾರಿ ಲಿ ಮ್ಯಾನ್ ಟೂರ್ನಿ ಗೆದ್ದ ಖ್ಯಾತಿಯಿದೆ.
ಹರಾಜು ಬೆಲೆ: $11,000,000
ಹರಾಜುಗಾರರು- ಆರ್‌ಎಂ ಆಕ್ಷನ್ಸ್
ಹರಾಜು ದಿನಾಂಕ- ಆಗಸ್ಟ್ 17, 2012

1931 Duesenberg Model J Long-Wheelbase Coupe
1928ರಿಂದ 1937ರ ಕಾಲಘಟ್ಟದಲ್ಲಿ ಡ್ಯೂಸೆನ್‌ಬರ್ಗ್ ಮಾಡೆಲ್ ಜೆ ವೀಲ್ ಬೇಸ್ ಕೂಪೆ ಕಾರನ್ನು ತಯಾರಿಸಲಾಗಿತ್ತು. ಇದರ ವಿಶೇಷತೆಯೆಂದರೆ ಸಂಪೂರ್ಣ ಮಾನವ ನಿರ್ಮಿತ ಕಾರಾಗಿದೆ.
ಹರಾಜು ಬೆಲೆ: $10,340,000
ಹರಾಜುಗಾರರು- ಆರ್‌ಎಂ ಆಕ್ಷನ್ಸ್
ಹರಾಜು ದಿನಾಂಕ- ಆಗಸ್ಟ್ 17, 2012

1931 Bugatti Royale Kellner Coupe
ನೂತನ ಮಾದರಿಯ ರೋಲ್ಸ್ ರಾಯ್ಸ್ ಕಾರುಗಳನ್ನು ಹೋಲಿಸಿದಾಗ 1931 ಬುಕಾಟಿ ರೋಯಲ್ ಕೆಲ್‌ನೆರ್ ಕೂಪೆ ಕಾರು 25 ಪಟ್ಟು ಹೆಚ್ಚು ತೂಕ ಹಾಗೂ ಶೇಕಡಾ 20ರಷ್ಟು ಹೆಚ್ಚು ಉದ್ದವನ್ನು ಹೊಂದಿದೆ.
ಹರಾಜು ಬೆಲೆ: $9,800,000
ಹರಾಜುಗಾರರು- ಆರ್‌ಎಂ ಆಕ್ಷನ್ಸ್
ಹರಾಜು ದಿನಾಂಕ- ಆಗಸ್ಟ್ 17, 1987

1962 Ferrari 330 TRI/LM Spider
ಇದು ಫೆರಾರಿಯಿಂದ ನಿರ್ಮಾಣವಾಗಿರುವ ಅಂತಿಮ ಟೆಸ್ಟಾ ರೊಸ್ಸ ಫ್ರಂಟ್ ಎಂಜಿನ್ ಸ್ಪೋರ್ಟ್ಸ್ ರೇಸಿಂಗ್ ಕಾರಾಗಿದೆ.
ಹರಾಜು ಬೆಲೆ: $9,281,250
ಹರಾಜುಗಾರರು- ಆರ್‌ಎಂ ಆಕ್ಷನ್ಸ್
ಹರಾಜು ದಿನಾಂಕ- ಮೇ 20, 2007

1955 Ferrari 410S
1955ನೇ ಇಸವಿಯಲ್ಲಿ ಕೇವಲ ನಾಲ್ಕು ಮಾದರಿಗಳನ್ನಷ್ಟೇ ತಯಾರಿಸಲಾಗಿತ್ತು.
ಹರಾಜು ಬೆಲೆ: $8,250,000
ಹರಾಜುಗಾರರು- ಆರ್‌ಎಂ ಆಕ್ಷನ್ಸ್
ಹರಾಜು ದಿನಾಂಕ- ಆಗಸ್ಟ್ 17, 2012

1937 Bugatti Type 57SC Atalante Coupe
ವಿಂಟೇಜ್ ಕಾರುಗಳ ಪೈಕಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬುಕಾಟಿ 17 ಮಾದರಿಗಳಷ್ಟೇ ತಯಾರಿಸಲಾಗಿತ್ತು. ಗ್ರೀಕ್ ಪುರಾಣದಲ್ಲಿರುವ ಪ್ರಕಾರ ಇದಕ್ಕೆ ಅಂಟ್ಲಾಟೆ ಹೆಸರು ಇಡಲಾಗಿತ್ತು.
ಹರಾಜು ಬೆಲೆ: $7,920,000
ಹರಾಜುಗಾರರು- ಗುಡಿಂಗ್ಸ್ ಆಂಡ್ ಕಂಪನಿ
ಹರಾಜು ದಿನಾಂಕ- ಆಗಸ್ಟ್ 17, 2008

1929 Bentley Blower
ಆಟೋ ಜಗತ್ತಿನಲ್ಲಿ 1929ರ ಬೆಂಟ್ಲಿ ಬ್ಲವರ್ ಕಾರಿಗೆ ಯಾವುದೇ ಬದಲಿ ವಾಹನ ಇರುವ ಸಾಧ್ಯತೆಗಳಿಲ್ಲ. ಯಾಕೆಂದರೆ ಇದು ತನ್ನದೇ ಆದ ವಿಶಿಷ್ಟ ಲುಕ್ ಹೊಂದಿದೆ.
ಹರಾಜು ಬೆಲೆ: $7,906,745
ಹರಾಜುಗಾರರು- ಬೊನ್ಹಾಮ್ಸ್
ಹರಾಜು ದಿನಾಂಕ- ಜೂನ್ 29, 2012


Click it and Unblock the Notifications








