Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಐಷಾರಾಮಿ ಕಾರುಗಳು ಹರಾಜು..!
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ ಸದ್ಯ ಲಂಡನ್‌ನಲ್ಲಿ ಜಾಮೀನಿಗಾಗಿ ಯತ್ನಿಸುತ್ತಿದ್ದರೆ ಇತ್ತ ಭಾರತದಲ್ಲಿ ನೀರವ್ ಮೋದಿ ಮತ್ತು ಆತನ ಸಂಬಂಧಿ ಮೆಹುಲ್ ಚೋಕ್ಸಿಗೆ ಸೇರಿದ ಐಷಾರಾಮಿ ಕಾರುಗಳನ್ನು ಹರಾಜು ಹಾಕಲಾಗಿದೆ.

ಸದ್ಯ ನೀರವ್ ಮೋದಿಯನ್ನು ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಜೈಲಿನಲ್ಲಿರುವ ನೀರವ್ ಮೋದಿಗೆ ಇಡಿ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ. ಸಾಲವಸೂಲಿ ಭಾಗವಾಗಿ ನೀರವ್ ಮೋದಿಗೆ ಸೇರಿದ 11 ಕಾರುಗಳನ್ನು ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 2 ಕಾರುಗಳನ್ನು ಆನ್‌ಲೈನ್ ಮೂಲಕ ಹರಾಜು ಮಾಡಲಾಗಿದೆ.

ಇಡಿ ಅಧಿಕಾರಿಗಳು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಿಂದ ವಶಪಡಿಸಿಕೊಳ್ಳಲಾದ ಕಾರುಗಳನ್ನು ಮೆಟಲ್ಸ್ ಆ್ಯಂಡ್ ಸ್ಕ್ರಾಬ್ ಟ್ರೇಡಿಂಗ್ ಕಾರ್ಪೊರೇಷನ್(ಎಂಎಸ್‌ಟಿಸಿ) ಆನ್‌ಲೈನ್ ಮೂಲಕ ಹರಾಜು ಹಾಕಿದ್ದು, ಹರಾಜಿಗೆ ಈಡಲಾಗಿದ್ದ ಒಟ್ಟು 13 ಕಾರುಗಳಲ್ಲಿ 12 ಕಾರುಗಳು ಹರಾಜುಗೊಂಡಿವೆ.

ನೀರವ್ ಮೋದಿಗೆ ಸೇರಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಒಟ್ಟು 11 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಾಲವಸೂಲಿ ಭಾಗವಾಗಿ ಕಾರುಗಳ ಹರಾಜು ಪ್ರಕ್ರಿಯೆಗೆ ಪಿಎಂಎಲ್‌ಎ ವಿಶೇಷ ಕೋರ್ಟ್‌ನಿಂದ ಅನುಮತಿ ಪಡೆದಿತ್ತು.

ಇದೇ ವೇಳೆ ಮೆಹುಲ್ ಚೋಕ್ಸಿ ಸೇರಿದ ಮತ್ತೆರಡು ಐಷಾರಾಮಿ ಕಾರುಗಳನ್ನು ಸಹ ಹರಾಜು ಹಾಕಲು ಅನುಮತಿ ಪಡೆದಿದ್ದ ಇಡಿ ಅಧಿಕಾರಿಗಳು ಆನ್‌ಲೈನ್ ಮೂಲಕ ಹರಾಜು ಹಾಕಿದ್ದು, ನೀರವ್ ಮೋದಿ ಸೇರಿದ ಒಂದು ಕಾರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳು ಹರಾಜುಗೊಂಡಿವೆ. ಹೀಗಾಗಿ ಹರಾಜುಗೊಂಡಿರುವ 12 ಕಾರುಗಳಿಂದ ಬರೋಬ್ಬರಿ 3.29 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಸಾಲ ಮರುಪಾವತಿಗಾಗಿ ಇದನ್ನು ಬಳಸಿಕೊಳ್ಳಲಾಗಿದೆ.
MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಹರಾಜು ಬೆಲೆಗಳು
ರೋಲ್ಸ್ ರಾಯ್ಸ್‌ಗೆ ರೂ. 1.33 ಕೋಟಿ, ಪೋರ್ಷೆಗೆ ಪನಾಮೆರಾ ಕಾರಿಗೆ ರೂ. 54.60 ಲಕ್ಷ, ಕೆಂಪು ಬಣ್ಣದ ಮರ್ಸಿಡಿಸ್ ಬೆಂಝ್‌ಗೆ ರೂ. 14 ಲಕ್ಷ, ವೈಟ್ ಮರ್ಸಿಡಿಸ್ ಬೆಂಝ್‌ಗೆ ರೂ. 37 ಲಕ್ಷ, ಬಿಎಂಡಬ್ಲ್ಯುಗೆ ರೂ. 9.80 ಲಕ್ಷ, ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ರೂ.10.50 ಲಕ್ಷ ಮೂಲ ಬೆಲೆಯನ್ನು ನಿಗದಿ ಮಾಡಲಾಗಿತ್ತು.

ಇದರ ಜೊತೆಗೆ ಹೋಂಡಾ ಬ್ರಿಯೊ, ಟೊಯೊಟಾ ಫಾರ್ಚೂನರ್, ಹೋಂಡಾ ಸಿಆರ್-ವಿ, ಸ್ಕೋಡಾ ಒಕ್ಟಿವಿಯಾ ಕಾರುಗಳನ್ನು ಸಹ ಹರಾಜು ಹಾಕಲಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ನಿಗದಿಪಡಿಸಲಾಗಿದ್ದ ಮೂಲ ಬೆಲೆಗಿಂತ ಕೇವಲ ರೂ. 28 ಲಕ್ಷ ಮಾತ್ರ ಹೆಚ್ಚುವರಿ ಹಣವನ್ನು ಸಂಗ್ರಹಿಸಲಾಗಿದೆ.
MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಆದ್ರೆ ಹರಾಜಿನಲ್ಲಿ ನೀರವ್ ಮೋದಿ ಒಡೆತನದ ಟೊಯೊಟಾ ಕೊರೊಲ್ಲಾ ಅಲ್ಟಿಸ್ ಸೆಡಾನ್ ಕಾರು ಹರಾಜಿನಲ್ಲಿ ಮಾರಾಟವಾಗದೆ ಹಾಗೆ ಉಳಿದೆ. ಇನ್ನು ನೀರವ್‌ರನ್ನು ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮೆಹುಲ್ ಚೋಕ್ಸಿ ಕೂಡಾ ಇದೇ ರೀತಿಯ ಕಾನೂನು ಕ್ರಮ ಎದುರಿಸುತ್ತಿದ್ದಾರೆ.