ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು..!!

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿದೇಶಿಗಳಲ್ಲಿ ಮಜಾ ಮಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಒಡೆತನದ ಕಾರುಗಳನ್ನು ಆನ್‍ಲೈನ್ ಹರಾಜು ಮಾಡಲಾಗಿದ್ದು, ದುಬಾರಿ ಕಾರುಗಳು ಅಗ್ಗದ ಬೆಲೆಗೆ ಬಿಕರಿಯಾಗಿವೆ.

By Praveen

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿದೇಶಿಗಳಲ್ಲಿ ಮಜಾ ಮಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಒಡೆತನದ ಕಾರುಗಳನ್ನು ಆನ್‍ಲೈನ್ ಹರಾಜು ಮಾಡಲಾಗಿದ್ದು, ದುಬಾರಿ ಕಾರುಗಳು ಅಗ್ಗದ ಬೆಲೆಗೆ ಬಿಕರಿಯಾಗಿವೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಸಾವಿರಾರು ಕೋಟಿ ಸಾಲ ಮಾಡಿ ಸುಸ್ತಿದಾರನಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಮತ್ತೆ ಸಂಕಷ್ಟದ ದಿನಗಳು ಎದುರಾಗುತ್ತಿದ್ದು, ಈ ನಡುವೆ ಮಲ್ಯಗೆ ಸೇರಿದ 2 ದುಬಾರಿ ಕಾರುಗಳನ್ನು ಆನ್‌ಲೈನ್ ಮೂಲಕ ಹರಾಜು ಮಾಡಲಾಗಿದೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಅಂದಹಾಗೆ ಸಾಲಮಾಡಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಐಷಾರಾಮಿ ಎರಡು ಕಾರುಗಳನ್ನ ಹುಬ್ಬಳ್ಳಿ ಮೂಲದ ಉದ್ಯಮಿ ಹನುಮಂತರೆಡ್ಡಿ ಆನ್‍ಲೈನ್ ಹರಾಜಿನಲ್ಲಿ ಕೇವಲ 1.40ಲಕ್ಷಕ್ಕೆ ಖರೀದಿಸಿದ್ದಾರೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಉದ್ಯಮಿ ಮಲ್ಯ ದುಬಾರಿ ಕಾರುಗಳ ಸಂಗ್ರಹದಲ್ಲಿದ್ದ ಹ್ಯುಂಡೈ ಸೊನಾಟಾ ಗೋಲ್ಡ್ ಮತ್ತು ಹೋಂಡಾ ಅಕಾರ್ಡ್ ಕಾರುಗಳನ್ನು ಹರಾಜು ಹಾಕಲಾಗಿದ್ದು, ಮಾರುಕಟ್ಟೆಯಲ್ಲಿನ ಬೆಲೆಗಿಂತಲೂ ಅಂತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗಿವೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಹುಬ್ಬಳ್ಳಿಯ ಗೋಕುಲ ರಸ್ತೆಯ ಮಂಜುನಾಥ್ ನಗರದ ನಿವಾಸಿಯಾಗಿರುವ ಹನುಮಂತರೆಡ್ಡಿ ಎಂಬುವರು ಕಳೆದ ಜನವರಿ ತಿಂಗಳಲ್ಲಿನಲ್ಲಿ ಮುಂಬೈಯಲ್ಲಿ ನಡೆದಿದ್ದ ಆನ್ ಲೈನ್ ಹರಾಜಿನಲ್ಲಿ ಬಿಡ್ ಮಾಡಿದ್ದು, ಇದೀಗ 13.15ಲಕ್ಷ ಮೌಲ್ಯದ ಹುಂಡೈ ಸೊನಾಟಾ ಗೋಲ್ಡ್ ಕಾರು ಕೇವಲ 40 ಸಾವಿರಕ್ಕೆ ದೊರೆತಿದೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಅಲ್ಲದೆ 21 ಲಕ್ಷಕ್ಕೂ ಅಧಿಕ ಮೌಲ್ಯದ ಹೋಂಡಾ ಅಕಾರ್ಡ್ ಕಾರು ಕೇವಲ 1 ಲಕ್ಷಕ್ಕೆ ಖರೀದಿಸಿದ್ದಾರೆ. ಹೀಗಾಗಿ ಎರಡೂ ಕಾರು ವ್ಯಾಟ್ ಸೇರಿ ಒಟ್ಟು 1 ಲಕ್ಷ 58 ಸಾವಿರದ 900 ರೂ ಪಾವತಿಸಿದ್ದಾರೆ ಎನ್ನಲಾಗಿದೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಹುಂಡೈ ಸೊನಾಟಾ ಗೋಲ್ಡ್ ಕಾರ್ 2002ರ ಮಾಡೆಲ್ ಆಗಿದ್ದು, ಹೋಂಡಾ ಅಕಾರ್ಡ್ 2003 ನೇ ಮಾಡೆಲ್ ಆಗಿದೆ. ಎರಡೂ ಕಾರ್ ಗಳು ಕೂಡ ಹೊಸ ಕಾರಿನಂತೆ ಉತ್ತಮ ಕಾರ್ಯನಿರ್ವಹಣೆಯಲ್ಲಿವೆ.

Recommended Video

2017 Hyundai Verna Launched In India - DriveSpark
ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಹೀಗಾಗಿಯೇ ಹರಾಜಿನಲ್ಲಿ ಪಡೆದುಕೊಂಡ ಬಳಿಕ ಕಾರುಗಳ ಬೆಲೆಯು ಹೆಚ್ಚಾಗಿದ್ದು, ಹರಾಜಿಗಿಂತ ದುಪ್ಪಟ್ಟು ಹಣ ಕೊಟ್ಟು ಖರೀದಿಸಲು ನೂರಾರು ಗ್ರಾಹಕರು ಮುಗಿಬಿದ್ದಿದ್ದಾರೆ ಎಂದರೇ ನಂಬಲೇಬೇಕು.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಸದ್ಯ ಮಾರುಕಟ್ಟೆಯಲ್ಲಿ ಹುಂಡೈ ಸೊನಾಟಾ ಗೋಲ್ಡ್ ಸೆಕೆಂಡ್ ಹ್ಯಾಂಡ್ ಕಾರ್ ಬೆಲೆ 2.5 ಲಕ್ಷ ರೂ. ಹಾಗೂ ಹೋಂಡಾ ಎಕಾರ್ಡ್ ಬೆಲೆ 4.5 ಲಕ್ಷ ಇದ್ದು, ಹನುಮಂತ ರೆಡ್ಡಿ ಬಳಿ ಇರುವ ಮಲ್ಯ ಕಾರುಗಳಿಗೆ ಅದು ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ.

ಹರಾಜಿನಲ್ಲಿ ಅಗ್ಗದ ಬೆಲೆಗೆ ಬಿಕರಿಯಾದ ಮಲ್ಯ ಒಡೆತನ ದುಬಾರಿ ಕಾರುಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 9 ಸಾವಿರ ಕೋಟಿ ಸಾಲ ಮಾಡಿ ಮರುಪಾತಿಸಲು ಹಿಂದೇಟು ಹಾಕುತ್ತಿರುವ ಮಲ್ಯ ಅವರನ್ನು ಭಾರತಕ್ಕೆ ಕರೆ ತರುವ ಎಲ್ಲಾ ಪ್ರಯತ್ನ ಜಾರಿಯಲ್ಲಿದ್ದು, ಈ ನಡುವೆ ಅವರ ಒಂದೊಂದೇ ಆಸ್ತಿ ಗಳನ್ನು ಹರಾಜು ಹಾಕಲಾಗುತ್ತಿದೆ.

ಚಿತ್ರ ಕೃಪೆ- ಪಬ್ಲಿಕ್ ಟಿವಿ

Most Read Articles

Kannada
English summary
Read in Kannada about Hubballi Businessman Buys Mallya's Cars in Auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X