ಅತಿ ಹೆಚ್ಚು ಕಳ್ಳತನವಾಗುವ ಸ್ಕೂಟರ್, ಬೈಕ್‌ಗಳು: ನಿಮ್ಮ ಬಳಿ ಈ ದ್ವಿಚಕ್ರ ವಾಹನಗಳಿದ್ರೆ ಎಚ್ಚರ!
ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ. ನಮ್ಮ ದೇಶದಲ್ಲಿ ದ್ವಿಚಕ್ರ ವಾಹನಗಳಿಲ್ಲದ ಮನೆಗಳು ಕಡಿಮೆ ಎಂದೇ ಹೇಳಬಹುದು. ಭಾರತದಲ್ಲಿ ನಾವು ಒಂದು ಕಡೆ ಮತ್ತೊಂದು ಕಡೆಗೆ ಸುಲಭವಾಗಿ ಮತ್ತು ಅಗ್ಗದ ಮಾರ್ಗದಿಂದಾಗಿ ದ್ವಿಚಕ್ರ ವಾಹನಗಳು ಹೆಚ್ಚು ಉತ್ತಮ. ಕಳೆದ ವರ್ಷವೊಂದರಲ್ಲೇ ಭಾರತದಲ್ಲಿ 13.47 ಮಿಲಿಯನ್ ಮೋಟಾರ್ ಸೈಕಲ್‌ಗಳು ಮಾರಾಟವಾಗಿವೆ.
ಆದರೆ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾದಂತೆ ಕಳ್ಳರ ಕಾಟವೂ ಹೆಚ್ಚುತ್ತಿದೆ. ಸಾಮಾನ್ಯವಾಗಿ ನಮ್ಮ ದೇಶದೆಲ್ಲೆಡೆ ಕಳ್ಳತನವಾಗುವ ದ್ವಿಚಕ್ರ ವಾಹನಗಳ ಮತ್ತೆ ಪತ್ತೆ ಆಗುವುದು ಕಷ್ಟ. ಏಕೆಂದರೆ ದ್ವಿಚ್ಕರ ವಾಹನಗಳ ಭಾಗಗಳಾಗಿ ಒಡೆದು ಮಾರಾಟ ಮಾಡುವ ದಂಧೆ ಇದೆ. ಭಾರತದಲ್ಲಿ ಅತಿ ಹೆಚ್ಚು ಕಳುವಾದ ಬೈಕ್‌ಗಳು (Bikes) ಮತ್ತು ಸ್ಕೂಟರ್ ಗಳ (Scooters) ಯಾವುವು ಗೊತ್ತಾ? ನಿಮಗೆ ಗೊತ್ತಿಲ್ಲದಿದ್ದರೆ, ಇಲ್ಲಿ ನೋಡಿ ಅದರ ಕುರಿತು ಸಂಪೂರ್ಣ ಮಾಹಿತಿ.

ಹೀರೋ ಸ್ಪ್ಲೆಂಡರ್: ಹೀರೋ ಸ್ಪ್ಲೆಂಡರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಆಗಿದೆ. ತಲೆಮಾರುಗಳಿಂದಲೂ ಭಾರತೀಯ ಜನರ ನಂಬಿಕೆಯನ್ನು ಉಳಿಸಿಕೊಂಡಿರುವ ಕಲ್ಟ್ ಕ್ಲಾಸಿಕ್ ಮಾಡೆಲ್ ಇನ್ನೂ ಮಾರಾಟದ ಪಟ್ಟಿಯಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಅದೇ ರೀತಿ, ಸ್ಪ್ಲೆಂಡರ್ ದೇಶದಲ್ಲೇ ಅತಿ ಹೆಚ್ಚು ಕಳ್ಳತನವಾದ ಮೋಟಾರ್ ಸೈಕಲ್ ಆಗಿದೆ.
ಹೋಂಡಾ ಆಕ್ಟಿವಾ: ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಮಾರುಕಟ್ಟೆಗೆ ಯಾವುದೇ ಪರಿಚಯ ಅಗತ್ಯವಿಲ್ಲದ ಹೆಸರು. ಕಳೆದ ಎರಡು ದಶಕಗಳಲ್ಲಿ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಆಕ್ಟಿವಾ ಕಳ್ಳರ ಅಚ್ಚುಮೆಚ್ಚಿನ ಸ್ಕೂಟರ್ ಆಗಿರುವುದರಿಂದ ಕಳ್ಳತನ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಹೋಂಡಾ ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಕಳ್ಳತನವಾದ ದ್ವಿಚಕ್ರ ವಾಹನಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ಬಜಾಜ್ ಪಲ್ಸರ್: ಸ್ಪ್ಲೆಂಡರ್‌ನಂತೆಯೇ ಪಲ್ಸರ್ ಬೈಕ್ ಸರಣಿಯಾಗಿದ್ದು, ಯುವಕರನ್ನು ಆಕರ್ಷಿಸುತ್ತಿದೆ. ಇಂದು ನಮ್ಮ ದೇಶದಲ್ಲಿ ವಿವಿಧ ಮಾದರಿಯ ಹೆಸರುಗಳಲ್ಲಿ ಅನೇಕ ಪಲ್ಸರ್‌ಗಳು ಮಾರಾಟದಲ್ಲಿವೆ. ದೇಶದ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಪೋರ್ಟಿ ಆರಾಮದಾಯಕ ಬೈಕ್‌ಗೆ ಉಪಯೋಗಿಸಿದ ವಾಹನ ಮಾರುಕಟ್ಟೆಯಲ್ಲೂ ಹೆಚ್ಚಿನ ಬೇಡಿಕೆಯಿದೆ. ಈ ಬೈಕ್ ಕಳ್ಳರ ಪಾಲಿಗೆ ಪ್ರಿಯವಾಗಿರುವುದರಿಂದ ದೇಶದಲ್ಲೇ ಅತಿ ಹೆಚ್ಚು ಕಳ್ಳತನವಾಗಿರುವ ಬೈಕ್‌ಗಳಲ್ಲಿ ಪಲ್ಸರ್ ಕೂಡ ಸೇರಿದೆ. ಈ ಪಟ್ಟಿಯಲ್ಲಿ ಪಲ್ಸರ್ ಮೂರನೇ ಸ್ಥಾನದಲ್ಲಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: ದೇಶದಲ್ಲಿ ಅತಿ ಹೆಚ್ಚು ಕಳ್ಳತನವಾಗಿರುವ ಮತ್ತೊಂದು ದ್ವಿಚಕ್ರ ವಾಹನವಾಗಿದೆ. ಐಕಾನಿಕ್ ಬ್ರ್ಯಾಂಡ್‌ನ ಮಾರಾಟಕ್ಕೆ ಪ್ರಮುಖ ಕೊಡುಗೆ ನೀಡುತ್ತಿರುವ ಈ ಮಾದರಿಯು ಕಳ್ಳಸಾಗಣೆದಾರರು ಕಣ್ಣಿಟ್ಟಿರುವ ವಾಹನಗಳಲ್ಲಿ ಒಂದಾಗಿದೆ. ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಬೇಡಿಕೆಯಿರುವ ಮಾದರಿಗಳಲ್ಲಿ ಒಂದಾದ ಕ್ಲಾಸಿಕ್ 350 ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‌ಫೀಲ್ಡ್ ಎಂಬ ಹೆಗ್ಗಳಿಕೆಯನ್ನು ಮುಂದುವರೆಸಿದೆ. ಪ್ರಾರಂಭದಿಂದಲೂ ಕ್ಲಾಸಿಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ಗೆ ಪ್ರಮುಖ ಮಾದರಿಗಳಲ್ಲಿ ಒಂದಾಗಿದೆ. ಕ್ಲಾಸಿಕ್ 350 ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ.
ಟಿವಿಎಸ್ ಅಪಾಚೆ: ಈ ಪಟ್ಟಿಯಲ್ಲಿ ಮತ್ತೊಂದು ಜನಪ್ರಿಯ ದ್ವಿಚಕ್ರ ವಾಹನವೆಂದರೆ ಟಿವಿಎಸ್ ಅಪಾಚೆ. ಟಿವಿಎಸ್ ಈಗಾಗಲೇ 4 ಮಿಲಿಯನ್‌ಗಿಂತಲೂ ಹೆಚ್ಚು ಅಪಾಚೆಗಳನ್ನು ಮಾರಾಟ ಮಾಡಿದೆ. ಮೇಲೆ ತಿಳಿಸಿದ ಹಲವು ಮಾದರಿಗಳಂತೆ, ಈ ಹೆಚ್ಚು ಮಾರಾಟವಾದ ಸ್ಪೋರ್ಟಿ ಕಮ್ಯೂಟರ್ ಮಾದರಿಯು ಕಳ್ಳರ ಮೆಚ್ಚಿನ ಮಾದರಿಯಾಗಿದೆ. ಟಿವಿಎಸ್ ಅಪಾಚೆ ಭಾರತದಲ್ಲಿ ಐದನೇ ಅತಿ ಹೆಚ್ಚು ಕದ್ದ ದ್ವಿಚಕ್ರ ವಾಹನವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications