Just In
- 13 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 13 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 14 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 14 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- News
ಪಂಜಾಬ್: ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ರಾಜಕೀಯ- ಅಮರಿಂದರ್ ಸಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ವಿಶ್ವದ ಅತ್ಯಂತ ವಿಶಿಷ್ಟ ಮತ್ತು ವಿಚಿತ್ರವಾದ ಕಾರ್ ಪಾರ್ಕಿಂಗ್ ಗ್ಯಾರೇಜುಗಳಿವು!
ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕಾರ್ ಪಾರ್ಕ್ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಮಿತಿ ಮೀರಿ ಬೆಳೆಯುತ್ತಿರುವ ಕಾರುಗಳು ಹಾಗೂ ಪಾರ್ಕಿಂಗ್ ಜಾಗದ ಕೊರತೆ. ಇದರಿಂದ ನಿತ್ಯ ದೊಡ್ಡ ದೊಡ್ಡ ನಗರಗಳಲ್ಲಿ ಜನರು ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ.

ವಾಹನ ನಿಲುಗಡೆಗೆ ಜಾಗವಿಲ್ಲದ ಕಾರಣ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ನಗರಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಸರಿಯಾದ ಸ್ಥಳವಿಲ್ಲದಿರುವುದು ಹಾಗೂ ಇಕ್ಕಟ್ಟಿನ ಪಾರ್ಕಿಂಗ್ ಸ್ಥಳಗಳಿಂದಾಗಿ ವಾಹನಗಳನ್ನು ರಸ್ತೆಗಳಲ್ಲಿ ಪಾರ್ಕ್ ಮಾಡುತ್ತಿರುವುದರಿಂದ ರಸ್ತೆಗಳಲ್ಲಿ ಸಂಚರಿಸುವ ಇತರ ವಾಹನಗಳಿಗೆ ತೊಂದರೆಯಾಗುತ್ತಿದೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಧುನಿಕ ಎಂಜಿನಿಯರಿಂಗ್‌ನಿಂದ ಸಾಧ್ಯವಾಗಬಹುದು. ಇದಕ್ಕೆ ಉತ್ತಮ ಉದಾಹರಣೆಯಂತಿವೆ ಕೆಲವು ವಿಚಿತ್ರ, ವಿಭಿನ್ನ, ನಂಬಲಸಾಧ್ಯವಾದ ವಿಶ್ವದ ಕೆಲವು ಪಾರ್ಕಿಂಗ್ ಕಟ್ಟಡಗಳು. ಇವುಗಳಲ್ಲಿ ಒಂದೇ ಸಮಯದಲ್ಲಿ ನೂರಾರು ವಾಹನಗಳನ್ನು ನಿಲ್ಲಿಸಬಹುದು ಹಾಗೂ ಸುಲಭವಾಗಿ ಹೊರಗೆ ತರಬಹುದು.

ಪ್ರಪಂಚದಾದ್ಯಂತ ಇಂತಹ ಅನೇಕ ಪಾರ್ಕಿಂಗ್ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇವು ಜನರನ್ನು ಆಚ್ಚರಿಗೊಳಿಸುತ್ತಿವೆ. ವಿಶ್ವದಾದ್ಯಂತ ಇರುವ ಇಂತಹ ಪಾರ್ಕಿಂಗ್ ಕಟ್ಟಡಗಳ ಬಗ್ಗೆ ಈ ಲೇಖನದಲ್ಲಿ ನೋಡಬಹುದು.

ಆಟೋಸ್ಟಾಡ್ ಕಾರ್ ಟವರ್, ವೋಲ್ಫ್ಸ್ಬರ್ಗ್ (ಜರ್ಮನಿ)
ಆಟೋಸ್ಟಾಡ್ಟ್ ಎಂದರೆ ಜರ್ಮನ್ ಭಾಷೆಯಲ್ಲಿ 'ಸಿಟಿ ಆಫ್ ಕಾರ್ಸ್' ಎಂದರ್ಥ. ಜರ್ಮನಿಯ ವೋಲ್ಫ್ಸ್‌ಬರ್ಗ್‌ನಲ್ಲಿರುವ ಫೋಕ್ಸ್‌ವ್ಯಾಗನ್ ಕಾರ್ಖಾನೆಯ ಪಕ್ಕದಲ್ಲಿ ನಿರ್ಮಿಸಲಾದ ಆಟೋಸ್ಟಾಡ್ ಕಾರ್ ಟವರ್ ಸಾರ್ವಜನಿಕರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಆದರೆ, ಈ ಕಾರ್ ಪಾರ್ಕಿಂಗ್‌ನಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇಲ್ಲ.

ಇಲ್ಲಿ ಫೋಕ್ಸ್‌ವ್ಯಾಗನ್ ತನ್ನ ಕಾರುಗಳನ್ನು ಮಾತ್ರ ಇಡುತ್ತದೆ. ಇದನ್ನು ಬಹುಮಹಡಿಯ ಶೋರೂಂ ಎಂದು ಸಹ ಕರೆಯಲಾಗುತ್ತದೆ. ಇಂತಹ ಎರಡು ಟವರ್‌ಗಳಿವೆ, ಅದರ ಎತ್ತರವು ಸುಮಾರು 60 ಮೀಟರ್ ಇದ್ದು, ಪ್ರತಿ ಟವರ್‌ನಲ್ಲಿ 400 ಕಾರುಗಳನ್ನು ನಿಲ್ಲಿಸಬಹುದು. ಇಲ್ಲಿ ಕಾರುಗಳನ್ನು ನಿಲ್ಲಿಸಲು ಒಂದರ ಮೇಲೊಂದು ರ್ಯಾಕ್‌ಗಳನ್ನು ಮಾಡಲಾಗಿದೆ.

ಪ್ರತಿ ಕಾರನ್ನು ಕಟ್ಟಡದ ಅಡಿಯಲ್ಲಿ ಅಳವಡಿಸಲಾಗಿರುವ ಯಂತ್ರದ ಸಹಾಯದಿಂದ ಮೇಲಕ್ಕೆ ಕೆಳಕ್ಕೆ ಸಾಗಿಸಲಾಗುತ್ತದೆ. ಕಾರ್ಖಾನೆಯಿಂದ ಟವರ್ ಬಳಿಗೆ ಕಾರುಗಳನ್ನು ಸಾಗಿಸಲು ನೆಲದಡಿಯಲ್ಲಿ ಸುರಂಗಗಳನ್ನು ನಿರ್ಮಿಸಲಾಗಿದೆ. ಗ್ರಾಹಕರು ಈ ಟವರ್‌ಗೆ ಬಂದು ತಮ್ಮ ಆಯ್ಕೆಯ ಫೋಕ್ಸ್‌ವ್ಯಾಗನ್ ಕಾರುಗಳನ್ನು ಖರೀದಿಸಬಹುದು.

ತೇಲುವ ಪಾರ್ಕಿಂಗ್ ಗ್ಯಾರೇಜ್, ಉಮಿಹೊಟಾರು (ಜಪಾನ್)
ಜಪಾನ್‌ನ ಉಮಿಹೊಟಾರುದಲ್ಲಿ ನಿರ್ಮಿಸಲಾದ ಪಾರ್ಕಿಂಗ್ ಗ್ಯಾರೇಜ್ ಅದ್ಭುತವಾಗಿದ್ದು, ಇದು ಕೃತಕ ದ್ವೀಪದಲ್ಲಿ ನಿರ್ಮಿಸಲಾದ ಪಾರ್ಕಿಂಗ್ ಗ್ಯಾರೇಜ್ ಆಗಿದೆ. ಇಲ್ಲಿಂದ ನೀವು ಟೋಕಿಯೊ ನಗರವನ್ನು ಕಣ್ತುಂಬಿಕೊಳ್ಳಬಹುದು. Umihotaru ಕಾರ್ ಪಾರ್ಕಿಂಗ್ ಅನ್ನು ಐಕಾನಿಕ್ ಆಕ್ವಾ-ಲೈನ್ ಮೇಲೆ ನಿರ್ಮಿಸಲಾಗಿದ್ದು, ಇದು ಬಹಳ ಉದ್ದವಾದ ನೀರೊಳಗಿನ ಸುರಂಗವಾಗಿದೆ.

Umihotaru ಪಾರ್ಕಿಂಗ್ ಜಾಗದ ಉದ್ದ ಸುಮಾರು 650 ಮೀಟರ್ ಇದ್ದು, ಐದು ಅಂತಸ್ತಿನ ಪಾರ್ಕಿಂಗ್ ಸ್ಥಳವಾಗಿದೆ. ಎಲ್ಲಾ ರೀತಿಯ ವಾಹನಗಳಿಗೆ ಮೂರು ಅಂತಸ್ತಿನ ಪಾರ್ಕಿಂಗ್ ಸ್ಥಳವಿದೆ, ಆದರೆ ನಾಲ್ಕು ಮತ್ತು ಐದನೇ ಅಂತಸ್ತಿನಲ್ಲಿ ಹೋಟೆಲ್‌ಗಳು, ವಿಶ್ರಾಂತಿ ಕೊಠಡಿಗಳು, ಮಾಲ್‌ಗಳಿವೆ. ಅಂತರರಾಷ್ಟ್ರೀಯ ಏಜೆನ್ಸಿಗಳು ಉಮಿಹೊಟಾರು ಪಾರ್ಕಿಂಗ್ ಅನ್ನು ವಿಶ್ವದ ಅತ್ಯಂತ 'ಅಸಾಮಾನ್ಯ ಪಾರ್ಕಿಂಗ್ ಪ್ರದೇಶ' ಎಂದು ಘೋಷಿಸಿವೆ.

ಯುರೇಕಾ ಕಾರ್ ಪಾರ್ಕ್, ಮೆಲ್ಬೋರ್ನ್ (ಆಸ್ಟ್ರೇಲಿಯಾ)
ಯುರೇಕಾ ಟವರ್ 297.3 ಮೀ (975 ಅಡಿ) ಎತ್ತರದ ಗಗನಚುಂಬಿ ಕಟ್ಟಡವಾಗಿದ್ದು, ಆಸ್ಟ್ರೇಲಿಯಾದ ವಿಕ್ಟೋರಿಯಾದ ಮೆಲ್ಬೋರ್ನ್‌ನ ಸೌತ್‌ಬ್ಯಾಂಕ್ ಕ್ಯಾಂಪಸ್‌ನಲ್ಲಿದೆ. ಈ ಕಾರ್ ಟವರ್‌ನಲ್ಲಿ ಅಧಿಕೃತವಾಗಿ 2006 ರಿಂದ ಕಾರುಗಳನ್ನು ನಿಲ್ಲಿಸಲು ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು ಮೆಲ್ಬೋರ್ನ್ ಆರ್ಕಿಟೆಕ್ಚರಲ್ ಸಂಸ್ಥೆ ಫೆಂಡರ್ ಕಟ್ಸಾಲಿಡಿಸ್ ಆರ್ಕಿಟೆಕ್ಟ್ಸ್ ವಿನ್ಯಾಸಗೊಳಿಸಿದ್ದಾರೆ. ಇದು ವಿಶ್ವದ ಅತಿ ಎತ್ತರದ ಕಾರ್ ಪಾರ್ಕಿಂಗ್ ಟವರ್ ಆಗಿದ್ದು, ಆಸ್ಟ್ರೇಲಿಯಾದ ಮೂರನೇ ಅತಿ ಎತ್ತರದ ಕಟ್ಟಡವಾಗಿದೆ.

1111 ಲಿಂಕನ್ ರೋಡ್ ಪಾರ್ಕಿಂಗ್, ಫ್ಲೋರಿಡಾ (USA)
1111 ಲಿಂಕನ್ ರೋಡ್ ಪಾರ್ಕಿಂಗ್ ಗ್ಯಾರೇಜ್ ಅನ್ನು ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿರುವ ಸೌತ್‌ನಲ್ಲಿ ನಿರ್ಮಿಸಲಾಗಿದೆ. ಇದನ್ನು ಸ್ವಿಸ್ ಆರ್ಕಿಟೆಕ್ಚರ್ ಸಂಸ್ಥೆ ಹೆರ್ಜೋಗ್ & ಡಿ ಮೆಯುರಾನ್ ವಿನ್ಯಾಸಗೊಳಿಸಿದ್ದಾರೆ. ಇದು ಲಿಂಕನ್ ರೋಡ್ ಮಾಲ್‌ನ ಪಶ್ಚಿಮ ತುದಿಯಲ್ಲಿರುವ ಆಲ್ಟನ್ ರೋಡ್‌ನಲ್ಲಿದೆ. ಈ ಗ್ಯಾರೇಜ್ ಸುಮಾರು 300 ಕಾರುಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ವಿನ್ಯಾಸವು ಸಾಂಪ್ರದಾಯಿಕ ಪಾರ್ಕಿಂಗ್ ಗ್ಯಾರೇಜ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ ಪ್ರಮುಖ ಆಕರ್ಷಣೆಯಾಗಿದೆ.

KRE ಕಾರ್ ಹೌಸ್, ಟೋಕಿಯೊ (ಜಪಾನ್)
ಜಪಾನ್‌ನ ಟೋಕಿಯೊದಲ್ಲಿರುವ KRE ಕಾರ್ ಹೌಸ್ ಒಂದು ವಿಶಿಷ್ಟವಾದ ಕಾರ್ ಪಾರ್ಕಿಂಗ್ ಸ್ಥಳವಾಗಿದೆ. ಇದು ಸುಮಾರು 2,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಮನೆಯ ಕೋಣೆಯಂತೆ ಕಾಣುತ್ತದೆ. ಇದರಲ್ಲಿ 9 ಕಾರುಗಳನ್ನು ನಿಲ್ಲಿಸಬಹುದು. ಈ ಪಾರ್ಕಿಂಗ್‌ನ ವಿಶೇಷತೆಯೆಂದರೆ ಇಲ್ಲಿಗೆ ಬರುವ ಗ್ರಾಹಕರು ತಮ್ಮ ಕಾರನ್ನು ಮತ್ತೊಂದು ಕಾರಿನೊಂದಿಗೆ ಬದಲಾಯಿಸಬಹುದು. ಇದಕ್ಕಾಗಿ ಎರಡೂ ಕಾರುಗಳ ಬೆಲೆ ಒಂದೇ ಆಗಿರಬೇಕು. ಉದಾಹರಣೆಗೆ, ನೀವು ಇಲ್ಲಿ ಲಂಬೋರ್ಗಿನಿ ಕಾರನ್ನು ತಂದರೆ, ಅದೇ ಬೆಲೆಯ ಪೋರ್ಷೆ ಕಾರನ್ನು ನೀವು ಬದಲಾಯಿಸಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಪ್ರಸ್ತುತ ಹೊಸ ವಾಹನಗಳ ಮಾರಾಟ ಹೆಚ್ಚಳ ಹಾಗೂ ಹಳೆ ವಾಹನಗಳ ಸ್ಥಿರವಾದ ಉಳಿಕೆಯು ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಲು ಮುಖ್ಯಕಾರಣವಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನಿತ್ಯ ಕಾರುಗಳು ಸಾಲಾಗಿ ಪಾರ್ಕಿಂಗ್‌ಗಾಗಿ ಪರದಾಡುತ್ತಿರುತ್ತವೆ. ಭಾರತದಲ್ಲೂ ಮೇಲೆ ತಿಳಿಸಲಾದ ಪಾರ್ಕಿಂಗ್ ಕಟ್ಟಡಗಳು ಹೇರಳವಾಗಿ ನಿರ್ಮಾಣವಾಗಬೇಕಿದೆ.