ಅದೇ ವಿಮಾನದಲ್ಲಿ ಕೆಲಸ... ಮದರ್ಸ್ ಡೇ ದಿನ ಮಗಳನ್ನು ಕಂಡು ಕಣ್ಣೀರಿಟ್ಟ ತಾಯಿ

ಮೇ 14 ರಂದು ವಿಶ್ವಾದ್ಯಂತ ಅಂತರಾಷ್ಟ್ರೀಯ ಮದರ್ಸ್ ಡೇ ಆಚರಿಸಲಾಯಿತು, ಮಕ್ಕಳು ತಾಯಂದಿರಿಗೆ ಶುಭಾಷಯಗಳನ್ನು ತಿಳಿಸಿ ಉಡುಗೊರೆಗಳನ್ನು ನೀಡುತ್ತಾರೆ. ಏನೂ ಇಲ್ಲದವರು ಕನಿಷ್ಷಪಕ್ಷ ಶುಭಾಷಯಗಳನ್ನಾದರೂ ತಿಳಿಸುತ್ತಾರೆ. ಹಾಗೆಯೇ ಇಲ್ಲೊಂದು ಯುವತಿ ತನ್ನ ತಾಯಿಗೆ ವಿಮಾನದಲ್ಲಿ ಶುಭಾಷಯ ತಿಳಿಸಿ ಸರ್ಪೈಸ್ ನೀಡಿದ್ದಾಳೆ.

ಈ ಹಿಂದೆಯೂ ತಾಯಂದಿರ ದಿನದ ಸಂದರ್ಭದಲ್ಲಿ ತಮ್ಮ ತಾಯಂದಿರೊಂದಿಗೆ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡ ಹಲವಾರು ವೀಡಿಯೊಗಳನ್ನು ನಾವು ನೋಡಿದ್ದೇವೆ. ಈಗಲೂ ಅಂತಹದ್ದೇ ವಿಡಿಯೋ ಸಖತ್ ವೈರಲ್ ಆಗಿದ್ದು, ನೋಡುಗರಿಗೆ ಏನೋ ತಿಳಿಯದ ಖುಷಿಯನ್ನು ನೀಡುತ್ತಿದೆ. ಈ ವಿಡಿಯೋವನ್ನು ವಿಮಾನಯಾನ ಸಂಸ್ಥೆಯಾದ ಇಂಡಿಗೋ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹಂಚಿಕೊಂಡಿದೆ.

mother-daughter

ವಿಡಿಯೋದಲ್ಲಿ ಮಗಳು ತನ್ನ ತಾಯಿಗಾಗಿ ಘೋಷಣೆ ಮಾಡುವುದನ್ನು ನಾವು ನೋಡಬಹುದು. ಅಂದರೆ ವಿಮಾನದಲ್ಲಿ ಅನೌನ್ಸ್ ಮೆಂಟ್ ಮಾಡುವಾಗ ಬಳಸಲಾಗುವ ಫೋನ್‌ನಲ್ಲಿ ತನ್ನ ತಾಯಿಗೆ ಮದರ್ಸ್ ಡೇ ಶುಭಾಷಯಗಳನ್ನು ತಿಳಿಸಿದ್ದಾರೆ. ಮೊದಲು ತನ್ನನ್ನು ನಬಿರಾ ಸಂಶಿ ಎಂದು ಪರಿಚಯಿಸಿಕೊಳ್ಳುವ ಯುವತಿಯು ಬಳಿಕ ತನ್ನ ತಾಯಿಯನ್ನು ಇತರರಿಗೆ ಪರಿಚಯಿಸಿ ರಕ್ತ ಸಂಬಂಧವನ್ನು ತಿಳಿಸುತ್ತಾಳೆ.

ಇಲ್ಲಿ ಅಚ್ಚರಿ ಎಂದರೆ ತಾಯಿಗೋಸ್ಕರ ಮಗಳು ಕೂಡ ಗಗನಸಖಿಯಾಗಿದ್ದಾಳೆ. ತನ್ನ ತಾಯಿಯೇ ತನಗೇ ಸ್ಫೂರ್ತಿ ಎಂದು ಹೇಳುವ ನಬಿರಾ ಮದರ್ಸ್ ಡೇ ದಿನದಂದು ತಾಯಿಯೊಂದಿಗೆ ಇರಲು ಸಂಸ್ಥೆಯನ್ನು ಕೇಳಿಕೊಂಡಿದ್ದಾಳು. ಅದರಂತೆ ಮದರ್ಸ್ ಡೇ ದಿನ ತಾಯಿ ಮತ್ತು ಮಗಳು ಇಬ್ಬರೂ ತಮ್ಮ ಇಂಡಿಗೋ ಸಮವಸ್ತ್ರವನ್ನು ಧರಿಸಿ ಒಂದೇ ವಿಮಾನದಲ್ಲಿದ್ದರು.

ನನ್ನ ತಾಯಿ ಸುಮಾರು ಆರು ವರ್ಷಗಳಿಂದ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ತಾಯಿಯನ್ನು ಸಮವಸ್ತ್ರದಲ್ಲಿ ನೋಡಿದ್ದು ಇದೇ ಮೊದಲ ಬಾರಿ. ನನ್ನ ತಾಯಿಯೇ ನನಗೆ ಸ್ಫೂರ್ತಿ, "ನಾನು ಇಂದು ತಾಯಿಯನ್ನು ಹೆಮ್ಮೆಪಡುವಂತೆ ಮಾಡಿದ್ದೇನೆಂದು ಭಾವಿಸುತ್ತೇನೆ" ಎಂದು ನಬೀರಾ ಹೇಳಿತಿದ್ದಂತೆ ತಾಯಿ ಗಳಗಳನೇ ಅಳುವುದನ್ನು ವಿಡಿಯೋದಲ್ಲಿ ನೋಡಬಹುದು.

"ನೆಲದಲ್ಲಿ ಮತ್ತು ಗಾಳಿಯಲ್ಲಿ ಯಾವಾಗಲೂ ನನ್ನ ಬೆನ್ನಿಗೆ ನಿಂತವರಿಗೆ ತಾಯಂದಿರ ದಿನದ ಶುಭಾಶಯಗಳು" ಎಂದು ಇಂಡಿಗೋ ಭಾವನಾತ್ಮಕ ವಿಡಿಯೋಗೆ ಶೀರ್ಷಿಕೆ ನೀಡಿ ಹಮಚಿಕೊಂಡಿದೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ಬಳಕೆದಾದರಿಂದ ಹೆಚ್ಚು ಪ್ರಶಂಸೆ ಗಳಿಸುತ್ತಿದ್ದು, ಸಾವಿರಾರು ಮಂದಿ ಟ್ವಿಟ್ಟರ್ ಬಳೆಕೆದಾದರರು ಕಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ತಾಯಂದಿರ ದಿನದ ಸಂದರ್ಭದಲ್ಲಿ ತಾಯಿ ಮತ್ತು ಮಗಳನ್ನು ಒಂದೇ ವಿಮಾನದಲ್ಲಿ ಹಾರಲು ನೀಡಿದ ಇಂಡಿಗೋ ಮ್ಯಾನೇಜ್‌ ಮೆಂಟ್‌ಗೆ ಧನ್ಯವಾದಗಳು" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಒಟ್ಟಾರೆ ವಿಡಿಯೋದಲ್ಲಿ ತಾಯಿ- ಮಗಳ ಭಾವನಾತ್ಮಕ ದೃಶ್ಯವು ಎಂಥವರನ್ನು ಮಮ್ಮರಿಗಿಸುತ್ತಿದೆ. ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ.

ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Tuesday, May 16, 2023, 11:59 [IST]
English summary
Mother daughter working same flight viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+