ರಸ್ತೆಯಲ್ಲಿ ಮಗನ ಕೃತ್ಯವನ್ನು ಕಂಡು ಕಣ್ಣೀರಿಟ್ಟ ತಾಯಿ... ಕರುಳು ಹಂಚಿಕೊಂಡವರಿಗೆ ಗೊತ್ತಲ್ಲವೆ ನೋವು!
ಭಾರತದಲ್ಲಿ ಹೆಚ್ಚಿನ ಪವರ್ ಹೊಂದಿರುವ ಮೋಟಾರ್ ಸೈಕಲ್‌ಗಳನ್ನು ಹೊಂದಿರುವ ಅನೇಕ ಜನರಿಗೆ ಅವುಗಳನ್ನು ಹೇಗೆ ಬಳಸಬೇಕೆಂಬುದೇ ಗೊತ್ತಿಲ್ಲ. ಆಗಾಗ್ಗೆ ಸಾಹಸಗಳನ್ನು ಪ್ರದರ್ಶಿಸುತ್ತಾರೆ, ರಸ್ತೆಯಲ್ಲಿ ಅಜಾಗರೂಕತೆಯಿಂದ ಸವಾರಿ ಮಾಡುತ್ತಾರೆ. ಇಲ್ಲಿ ಕೂಡ ಅಂತಹದ್ದೆ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಮಗನ ಅತಿವೇಗದ ಚಾಲನೆ ಕಂಡು ತಾಯಿ ಕಣ್ಣೀರಿಟ್ಟಿದ್ದಾರೆ.
ಈ ವಿಡಿಯೋವನ್ನು ಉತ್ತರಾಖಂಡ ಟ್ರಾಫಿಕ್ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರು ಬಹುಶಃ YouTube ನಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರಬಹುದು. ದುಬಾರಿ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಬೈಕ್‌ಗಳನ್ನು ಹೊಂದಿರುವ ಅನೇಕ ಯುವಕರು ತಾವು ಓಡಿಸುವಾಗ ರೆಕಾರ್ಡ್ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ.

ಅವರು ಸಾಮಾನ್ಯವಾಗಿ GoPro ನಂತಹ ಆಕ್ಷನ್ ಕ್ಯಾಮೆರಾಗಳನ್ನು ಬಳಸುತ್ತಾರೆ. ತಮ್ಮ ವೀಡಿಯೊಗಳನ್ನು ವೈರಲ್ ಮಾಡಲು, ಅವರು ಆಗಾಗ್ಗೆ ದುಡುಕಿನ ಸವಾರಿ ಮಾಡುತ್ತಾರೆ. ನಂತರ ಆ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಇಲ್ಲಿ ನಾವು ವೈರಲ್ ಆಗಿರುವ ಅಂತಹದ್ದೇ ವೀಡಿಯೊವನ್ನು ನೋಡಬಹುದು. ಈ ವೀಡಿಯೋದಲ್ಲಿ ಕೆಟಿಎಂ ಆರ್‌ಸಿ ಸವಾರನೊಬ್ಬ ವೇಗವಾಗಿ ಬೈಕ್ ಓಡಿಸಿ ತನ್ನ ತಾಯಿಗೆ ಸಿಕ್ಕಿಬಿದ್ದಿದ್ದಾನೆ.
ರಸ್ತೆಯಲ್ಲಿ ಮಗನ ಬೇಜವಾಬ್ದಾರಿ ವರ್ತನೆಗೆ ತಾಯಿ ನಿಜವಾಗಿಯೂ ಗದರಿಸುತ್ತಿದ್ದರು. ತನ್ನ ಮಗ ಅಜಾಗರೂಕತೆಯಿಂದ ಬೈಕ್ ಓಡಿಸುತ್ತಾನೆ ಎಂದು ಜನರು ಹೇಳುತ್ತಲೇ ಇದ್ದರು, ಆದ್ರೂ ನಾ ಕೇಳಲಿಲ್ಲ ಎಂದು ತಾಯಿ ಮಗನ ಬಳಿ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಯುವಕ ಕೂಡ ಅದೇ ರೀತಿ ಓಡಿಸುವುದನ್ನು ಒಮ್ಮೆಲೆ ಕಂಡು ಆ ತಾಯಿಗೆ ಭರಿಸಲಾಗದಷ್ಟು ನೋವಾಗಿದೆ.

ಮಗನನ್ನು ಬೈಯುತ್ತಲೇ ತಾಯಿ ಬೈಕ್‌ನಿಂದ ಕೀ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅಪಾಯವಾಗಲು ರಸ್ತೆಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಮಗ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೇ, ಮಗನನ್ನು ಬೈಯ್ಯುತ್ತಲೇ ಗಳಗಳನೆ ಅತ್ತು ದೂರ ಹೋಗಿದ್ದಾಳೆ. ಅಜಾಗರೂಕತೆಯಿಂದ ಸವಾರಿ ಮಾಡಬೇಡಿ, ರಸ್ತೆಯಲ್ಲಿ ಹೆಚ್ಚು ಜಾಗರೂಕರಾಗಿರಿ ಎಂದು ತಾಯಿ ಕೇಳಿಕೊಳ್ಳುವುದನ್ನು ನೋಡಬಹುದು.
ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಈ ವಿಡಿಯೋವನ್ನು ಅಂತರ್ಜಾಲದಲ್ಲಿ ಹರಿಬಿಡಲಾಗುತ್ತಿದೆ. ರಸ್ತೆಯಲ್ಲಿ ಇಂತಹ ಬೇಜವಾಬ್ದಾರಿ ಕೃತ್ಯಗಳಲ್ಲಿ ತೊಡಗುವ ಮೊದಲು ಮನೆಯಲ್ಲಿ ತಮ್ಮ ತಂದೆ, ತಾಯಿ ಮತ್ತು ಒಡಹುಟ್ಟಿದವರ ಬಗ್ಗೆ ಯೋಚಿಸುವಂತೆ ಟ್ವೀಟ್ ಮಾಡಲಾಗಿದೆ. ರಸ್ತೆಯಲ್ಲಿ ಹೆಚ್ಚು ಜವಾಬ್ದಾರಿಯುತವಾಗಿರಲು ಜನರನ್ನು ಒತ್ತಾಯಿಸಿದ್ದಾರೆ.

ಈ ವೀಡಿಯೋದಲ್ಲಿ ತಾಯಿ ವ್ಯಕ್ತಪಡಿಸುವ ಕಳವಳ ನಿಜವಾಗಿಯು ಬಹಳ ನೈಜವಾಗಿದೆ. ಪ್ರತಿದಿನ, ಬೈಕ್ ಸವಾರರು ದೊಡ್ಡ ಅಪಘಾತಕ್ಕೆ ಒಳಗಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಎದರು ಬರುವ ಅಮಾಯಕ ಪ್ರಯಾಣಿಕರು ಕೂಡ ಜೀವ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಈ ವಿಡಿಯೋದಲ್ಲಿ ಕಂಡು ಬರುವ ಯುವಕ ರಸ್ತೆಯಲ್ಲಿ ನಿಖರವಾಗಿ ಏನು ಮಾಡುತ್ತಿದ್ದಾನೆಂದು ವೀಡಿಯೊದಲ್ಲಿ ತೋರಿಸಿಲ್ಲ.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಕಿರಿದಾದ ಪರ್ವತ ರಸ್ತೆಯಾಗಿಯೂ ಕಂಡುಬರುತ್ತಿದೆ, ಕೆಲವೊಮ್ಮೆ, ಪರ್ವತ ರಸ್ತೆಗಳಲ್ಲಿ ತಿರುವುಗಳನ್ನು ತೆಗೆದುಕೊಳ್ಳುವಾಗ ಅತ್ತಕಡೆಯಿಂದ ಬರುವ ವಾಹನಗಳ ಬಗ್ಗೆ ಅರಿವಿರುವುದಿಲ್ಲ. ಇಂತಹ ತಿರುವುಗಳಲ್ಲಿ ವಾಹನಗಳನ್ನು ಓವರ್‌ಟೇಕ್ ಮಾಡುವ ಜನರು ಅಪಘಾತಗಳಿಗೆ ಕಾರಣವಾದ ಹಲವಾರು ಪ್ರಕರಣಗಳಿವೆ. ಪರ್ವತದ ರಸ್ತೆಗಳಲ್ಲಿ, ಒಂದು ಸಣ್ಣ ತಪ್ಪು ಕೂಡ ಹೆಚ್ಚು ಅಪಾಯಕಾರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications