ತಾಯಿಗೆ ಕಾರು ಓಡಿಸುವ ಆಸೆ: ತಾಯಿಯ ಆಸೆ ಈಡೇರಿಸಿ ಖುಷಿ ಹಂಚಿಕೊಂಡ ಯುವಕ

ನಿತ್ಯ ನಾವು ಮೊಬೈಲ್‌ನಲ್ಲಿ ಹಲವು ವೈರಲ್ ವಿಡಿಯೋಗಳನ್ನು ನೊಡುತ್ತಿರುತ್ತೇವೆ. ಇವುಗಳಲ್ಲಿ ಕೆಲವು ಕಾಮಿಡಿಯಾಗಿದ್ದರೇ, ಇನ್ನೂ ಕೆಲವು ವಿಡಿಯೋಗಳು ಹೃದಯವನ್ನು ಮುಟ್ಟುತ್ತವೆ. ಅಂತಹದೇ ವಿಡಿಯೋವೊಂದು ಈಗ ವೈರಲ್ ಆಗಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ವಾಸ್ತವವಾಗಿ ಪೋಷಕರು ತಾವು ಹಿಂದೆಂದೂ ಬದುಕಿರದ ಜೀವನವನ್ನು ತಮ್ಮ ಮಕ್ಕಳಿಗಾಗಿ ರೂಪಿಸಬೇಕು ಎಂದು ಬಯಸುತ್ತಾರೆ. ಹಾಗೆಯೇ ಮಕ್ಕಳು ಕೂಡ ತಮ್ಮ ಹೆತ್ತವರ ಮುಖದಲ್ಲಿ ನಗುವನ್ನು ನೋಡಲು ಬಯಸುತ್ತಾರೆ. ಇದಕ್ಕಾಗಿ ಗುರಿ ತಲುಪಲು ಎಷ್ಟೇ ಕಷ್ಟವಿದ್ದರೂ ಶ್ರಮಿಸುತ್ತಾರೆ. ಹಾಗೆಯೇ ಯುವಕನೊಬ್ಬ ತನ್ನ ತಾಯಿಯ ಮುಖದಲ್ಲಿ ಖುಷಿಯನ್ನು ಕಾಣಲು ಹೊಸ ಕಾರನ್ನು ಖರೀದಿಸಿದ್ದಾನೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ತನ್ನ ತಾಯಿಯ ಸಂತೋಷವನ್ನು ಪದೆ ಪದೇ ಕಾಣಲು ಆ ಅದ್ಬುತ ಕ್ಷಣಗಳನ್ನು ವಿಡಿಯೋ ಮಾಡಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿಯ ಸಂತೋಷವನ್ನು ಕಂಡು ಫಿದಾ ಆಗಿದ್ದಾರೆ. ಈ ವಿಡಿಯೋದಲ್ಲಿ ಮಗ ತನ್ನ ತಾಯಿಯ ಆಸೆಯಂತೆ XUV 700 ಕಾರನ್ನು ಖರೀದಿಸಿ ಆಕೆಗೆ ಓಡಿಸಲು ಕೊಟ್ಟಿದ್ದಾನೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಬಳಿಕ ಈ ವಿಡಿಯೋದಲ್ಲಿ ಯುವಕನ ತಾಯಿ ಕಾರಿನ್ನು ಡ್ರೈವಿಂಗ್ ಸೀಟ್‌ನಲ್ಲಿ ಕುಳಿತು ಓಡಿಸುವುದನ್ನು ಕಾಣಬಹುದು. ಈ ಸಮಯದಲ್ಲಿ ಆಕೆಯ ಮುಖದ ಮೇಲಿನ ನಗು ಎಲ್ಲರನ್ನು ಕಟ್ಟಿಹಾಕುತ್ತದೆ. ಆಕೆ ತನ್ನ ಮಗನೊಂದಿಗೆ ಮಾತನಾಡಲು ತುಂಬಾ ಸಂತೋಷಪಡುವುದನ್ನು ಇದರಲ್ಲಿ ಕಾಣಬಹುದು. ನಾನು ಕಾರು ಓಡಿಸುತ್ತಿರುವುದು ನಿಜವೇ ಎಂದೆಲ್ಲಾ ಕೇಳಿ ಆಶ್ಚರ್ಯ ಪಡುವುದನ್ನು ನೋಡಬಹುದು.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಮಗ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದರೇ ಆಕೆ ಸರಳವಾದ ಸೀರೆಯಲ್ಲಿ ಕಾರನ್ನು ಓಡಿಸುತ್ತಿರುವುದು ವಿಡಿಯೋದಲ್ಲಿನ ಹೈಲೆಟ್ ಆಗಿದೆ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಹಲವು ವಾಹನಗಳು ಈಕೆಯ ಸಮೀಪವೇ ಹಾದು ಹೋಗುವುದನ್ನು ನೀವು ನೋಡಬಹುದು, ಮಹಿಳೆಗೆ ಕಾರು ಚಾಲನೆಯಲ್ಲಿ ಹಲವು ವರ್ಷಗಳ ಅನುಭವವಿದೆ ಎಂದು ತೋರುತ್ತಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಈ ವಿಡಿಯೋವನ್ನು ಹಂಚಿಕೊಂಡಿರುವ ಮಗ 'ನನ್ನ ತಾಯಿ ನನ್ನ XUV 700 ಕಾರನ್ನು ಓಡಿಸುತ್ತಿದ್ದಾರೆ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಾಯಿಕಿರಣ್ ಕೋರ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದುವರೆಗೆ ಈ ವಿಡಿಯೋ 18 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಇನ್ನು XUV 700 ಕಾರಿನ ಬಗ್ಗೆ ಮಾತನಾಡುವುದಾದರೆ, ಎಕ್ಸ್‌ಯುವಿ700 ಬಿಡುಗಡೆಯ ನಂತರ ಇದುವರೆಗೆ ಕಂಪನಿಯು 1.50 ಲಕ್ಷ ಬುಕಿಂಗ್‌ನಲ್ಲಿ ಸುಮಾರು 40 ಸಾವಿರ ಯುನಿಟ್ ಮಾತ್ರ ವಿತರಿಸಿದ್ದು, ಇನ್ನುಳಿದ ಬುಕಿಂಗ್ ಪೂರ್ಣಗೊಳಿಸಲು ಕನಿಷ್ಠ 2 ವರ್ಷಗಳು ಬೇಕಾಬಹುದು. ಹೀಗಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿರುವ ಕಂಪನಿಯು ಸದ್ಯ ಉತ್ಪಾದನೆ ಕೈಗೊಳ್ಳುತ್ತಿರುವ 4,500 ಯುನಿಟ್ ಅನ್ನು 6 ಸಾವಿರ ಯುನಿಟ್‌ಗೆ ಹೆಚ್ಚಿಸಲಾಗುತ್ತಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಎಕ್ಸ್‌ಯುವಿ700 ಎಸ್‌ಯುವಿಯ ಪ್ರಮುಖ ವೆರಿಯೆಂಟ್‌ಗಳ ಬೆಲೆಯಲ್ಲಿ ಕಂಪನಿಯು ಎಕ್ಸ್‌ಶೋರೂಂ ದರದಲ್ಲಿ ಸುಮಾರು ರೂ. 6 ಸಾವಿರದಷ್ಟು ಬೆಲೆ ಇಳಿಕೆ ಮಾಡಿದ್ದು, ಹೊಸ ದರಪಟ್ಟಿಯಲ್ಲಿ ಇದೀಗ ಆರಂಭಿಕ ಮಾದರಿಯು 13.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.58 ಲಕ್ಷ ಬೆಲೆ ಹೊಂದಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಎಕ್ಸ್‌ಯುವಿ700 ಮಾದರಿಯಲ್ಲಿ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್‌ ಖರೀದಿಗೆ ಲಭ್ಯವಿದ್ದು, ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿವೆ. ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಇದರೊಂದಿಗೆ ಹೊಸ ಕಾರು ಸುರಕ್ಷಾ ವಿಚಾರವಾಗಿ ಭಾರತದಲ್ಲಿ 'ಸೇಫರ್ ಛಾಯ್ಸ್' ಪ್ರಶಸ್ತಿ ಪಡೆದ ಮೊದಲ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಇದೀಗ ಹೊಸ ಕಾರಿನ ಸುರಕ್ಷಾ ಸೌಲಭ್ಯಗಳನ್ನು ಆಧರಿಸಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಮತ್ತೊಂದು ಅತ್ಯುನ್ನತ ಪ್ರಶಸ್ತಿ ನೀಡಿದೆ.

ತಾಯಿಗೆ ಕಾರನ್ನು ಓಡಿಸುವ ಆಸೆ: ಕನಸನ್ನು ನನಸಾಗಿಸಿ ಖುಷಿಯನ್ನು ಹಂಚಿಕೊಂಡ ಯುವಕ

ಹೊಸ ಕಾರಿನಲ್ಲಿರುವ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟಂ ಸಿಸ್ಟಂ ಸೌಲಭ್ಯವನ್ನು ಪ್ರತ್ಯೇಕವಾಗಿ ಪರೀಕ್ಷಿಸಿರುವ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್ ಮತ್ತು ಪೆಡೆಟ್ರೆಷಿಯನ್ ಪ್ರೊಟೆಕ್ಷನ್ ಸೌಲಭ್ಯಗಳಿಗೆಗಾಗಿ 'ಸೇಫರ್ ಛಾಯ್ಸ್' ಪ್ರಶಸ್ತಿ ನೀಡಿದೆ.

Most Read Articles

Kannada
English summary
Mothers desire to drive a car A young man shared his joy by making his dream come true
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X