ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ವಾಹನಗಳನ್ನು ಮಾಢಿಫೈಗೊಳಿಸುವುದು ಹಾಗೂ ವಾಹನಗಳಲ್ಲಿ ಅನಧಿಕೃತವಾದ ಆಫ್ಟರ್ ಮಾರ್ಕೆಟ್ ಎಕ್ವಿಪ್‍‍ಮೆಂಟ್‍‍ಗಳನ್ನು ಬಳಸುವುದು ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ಅಪರಾಧವಾಗಿದೆ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ವಿ‍ಐಪಿಗಳಿಗೂ ಸಹ ಈ ನಿಯಮವು ಅನ್ವಯಿಸುತ್ತದೆ. ಅವರುಗಳು ತಮ್ಮ ಕಾರುಗಳ ಮೇಲೆ ಯಾವುದೇ ಹಾರ್ನ್‍‍ಗಳನ್ನಾಗಲಿ ಅಥವಾ ಫ್ಲಾಶ್‍‍ಲೈಟ್‍‍ಗಳನ್ನಾಗಲಿ ಬಳಸುವಂತಿಲ್ಲ. ಆದರೆ ತುರ್ತು ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ತುರ್ತು ವಾಹನಗಳಾದ ಆಂಬ್ಯುಲೆನ್ಸ್, ಪೊಲೀಸ್ ವಾಹನಗಳು ಹಾಗೂ ಅಗ್ನಿ ಶಾಮಕ ವಾಹನಗಳನ್ನು ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳನ್ನು ಬಳಸಬಹುದು. ನಮ್ಮ ದೇಶದ ಮಂತ್ರಿಯವರೂ ಸಹ ಈ ರೀತಿಯ ಎಕ್ವಿಪ್‍‍ಮೆಂಟ್‍‍ಗಳನ್ನು ತಮ್ಮ ಕಾರಿನಲ್ಲಿ ಬಳಸುವಂತಿಲ್ಲ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಆದರೆ ಕೆಲವು ಭಂಡ ರಾಜಕಾರಣಿಗಳು ಈ ನಿಯಮವನ್ನು ಪಾಲಿಸದೇ ತಮ್ಮ ಕಾರಿನಲ್ಲಿ ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳನ್ನು ರಾಜಾರೋಷವಾಗಿ ಬಳಸುತ್ತಿದ್ದಾರೆ. ಇವುಗಳನ್ನು ಬಳಸಿ ಅಮಾಯಕ ಜನರನ್ನು ಹೆದರಿಸುತ್ತಿದ್ದಾರೆ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳನ್ನು ಹೊಂದಿದ್ದ ಮಹೀಂದ್ರಾ ಸ್ಕಾರ್ಪಿಯೊಗೆ ರೂ.2,000 ದಂಡ ವಿಧಿಸಲಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ನಿಯಮಗಳನ್ನು ಉಲ್ಲಂಘಿಸಿದ ವಾಹನವು ಸಂಸತ್ ಸದಸ್ಯರಿಗೆ ಸೇರಿದ್ದು ಎಂಬುದು ವಿಶೇಷ. ನಿಯಮವನ್ನು ಉಲ್ಲಂಘಿಸಿದ ಸಂಸತ್ ಸದಸ್ಯರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಸ್ಕಾರ್ಪಿಯೊ ಕಾರಿನ ಮೇಲೆ ಎಂಪಿ ಎಂಬ ಸ್ಟಿಕ್ಕರ್ ಅನ್ನು ಅಂಟಿಸಲಾಗಿತ್ತು.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಈ ಕಾರಿನಲ್ಲಿ ಹಲವು ಮಧ್ಯ ವಯಸ್ಕ ಯುವಕರು ಪ್ರಯಾಣಿಸುತ್ತಿದ್ದರು. ಈ ರಸ್ತೆಯಲ್ಲಿ ಪೊಲೀಸರು ಯಾವಾಗಲೂ ತಪಾಸಣೆ ನಡೆಸುತ್ತಾರೆ. ಪೊಲೀಸರ ತಪಾಸಣೆ ವೇಳೆಯಲ್ಲಿಯೇ ಕಾರಿನಲ್ಲಿದ್ದ ಯುವಕರು ಹಾರ್ನ್‍‍ನಿಂದ ಕರ್ಕಶವಾಗಿ ಶಬ್ದ ಮಾಡಿದ್ದಾರೆ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಎಚ್ಚೆತ್ತ ಪೊಲೀಸರು ತಕ್ಷಣವೇ ಕಾರ್ ಅನ್ನು ತಡೆದು ನಿಲ್ಲಿಸಿ ಸಂಬಂಧಪಟ್ಟ ದಾಖಲೆಗಳನ್ನು ಕೇಳಿದ್ದಾರೆ. ತನಿಖೆಯ ನಂತರ ಯು‍‍ಪಿ 21 ಪಿ‍ಹೆಚ್ 0101 ಕಾರು ಗಂಭೀರ್‍ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಇದೇ ಕಾರಿನ ಮೇಲೆ ಎಂಪಿ ಎಂಬ ಸ್ಟಿಕ್ಕರ್ ಅಂಟಿಸಲಾಗಿತ್ತು.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಈ ಕಾರಣಕ್ಕೆ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆಯಲ್ಲಿ ಕಾರಿನಲ್ಲಿದ್ದವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ನಿಯಮ ಉಲ್ಲಂಘನೆಯ ಕಾರಣಕ್ಕೆ ಸ್ಥಳದಲ್ಲಿಯೇ ರೂ.2,000 ದಂಡ ವಿಧಿಸಿದ್ದಾರೆ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಸ್ಥಳದಲ್ಲಿದ್ದ ಎಸ್‍‍ಪಿ ಅಮಿತ್ ಬದಾಕ್‍‍ರವರು ಸ್ಥಳಕ್ಕೆ ಪತ್ರಕರ್ತರನ್ನು ಕರೆಸಿ, ನಿಯಮಗಳನ್ನು ಉಲ್ಲಂಘಿಸಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೊದಲೇ ತಿಳಿಸಿದಂತೆ ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳನ್ನು ವಾಹನಗಳಲ್ಲಿ ಬಳಸುವುದು ಕಾನೂನುಬಾಹಿರ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಈ ಕಾರಣಕ್ಕೆ ಪೊಲೀಸರು ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳನ್ನು ಬಳಸುವ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ರೀತಿಯ ವಾಹನಗಳು ಕಣ್ಣಿಗೆ ಬಿದ್ದ ತಕ್ಷಣ ನಿಷೇಧಿಸಲಾಗಿರುವ ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳನ್ನು ವಾಹನಗಳಿಂದ ಕಿತ್ತೆಸೆಯುತ್ತಿದ್ದಾರೆ.

ಎಂಪಿ ಸ್ಟಿಕ್ಕರ್ ಬಳಸಿದ್ದ ಸ್ಕಾರ್ಪಿಯೊಗೆ ಬಿತ್ತು ದಂಡ..!

ಹಾರ್ನ್ ಹಾಗೂ ಫ್ಲಾಶ್‍‍ಲೈಟ್‍‍ಗಳು ಮಾತ್ರವಲ್ಲದೇ ಪ್ರೆಸ್, ಲಾಯರ್, ಎಂಪಿ ಹಾಗೂ ಇನ್ನಿತರ ಚಿಹ್ನೆಗಳನ್ನು ವಾಹನಗಳಲ್ಲಿ ಅಳವಡಿಸುವುದು ಕಾನೂನುಬಾಹಿರವಾಗಿದೆ. ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ಧರ್ಮ ಹಾಗೂ ಜಾತಿಯ ಹೆಸರುಗಳನ್ನು ವಾಹನಗಳಲ್ಲಿ ಅಳವಡಿಸುವುದು ಸಹ ಕಾನೂನುಬಾಹಿರವಾಗಿದೆ.

Most Read Articles

Kannada
English summary
MP stickered Mahindra Scorpio busted by cops. Read in Kannada.
Story first published: Saturday, January 11, 2020, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X