ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸ್ವಾವಲಂಬಿಗಳನ್ನಾಗಿ ಮಾಡಲು ಮಧ್ಯಪ್ರದೇಶ ಸಾರಿಗೆ ಇಲಾಖೆಯು ರಾಜ್ಯದಾದ್ಯಂತದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿಯನ್ನು ನೀಡುತ್ತಿದೆ.

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಸಾರ್ವಜನಿಕ ಸಾರಿಗೆಯನ್ನು ಚಲಾಯಿಸಲು ಮಹಿಳೆಯರಿಲ್ಲದ ಕಾರಣ ಮತ್ತು ಅವರನ್ನು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಉಚಿತ ವೃತ್ತಿಪರ ಚಾಲನಾ ತರಬೇತಿಯನ್ನು ಯೋಜನೆಯನ್ನು ಸಾರಿಗೆ ಆಯುಕ್ತರು ರೂಪಿಸಿದ್ದಾರೆ ಎಂದು ಸಹಾಯಕ ಸಾರಿಗೆ ಅಧಿಕಾರಿ ಅರ್ಚನಾ ಮಿಶ್ರಾ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಇನ್ನು ಅವರು ಮಾತನ್ನು ಮುಂದುವರೆಸಿ, 50 ಮಹಿಳೆಯರು ಇಲ್ಲಿ ಚಾಲನಾ ತರಬೇತಿ ಸಂಸ್ಥೆಯಲ್ಲಿ (ಡಿಟಿಐ) ತರಬೇತಿ ಪಡೆಯುತ್ತಿದ್ದಾರೆ. ನಾಲ್ಕು ಚಕ್ರ ವಾಹನಗಳನ್ನು ಓಡಿಸುವುದರ ಹೊರತಾಗಿ ಮಹಿಳೆಯರಿಗೆ ವಾಹನಗಳ ದುರಸ್ತಿ ಬಗ್ಗೆಯು ತರಬೇತಿಯನ್ನು ನೀಡಲಾಗುತ್ತಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಇದರ ಜೊತೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆಯೂ ಅವರಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮ ಪ್ರಯತ್ನವು ಅವರಿಗೆ ಉದ್ಯೋಗವನ್ನು ತಂದುಕೊಡುವುದು ಮತ್ತು ಇದರಿಂದ ಅವರು ಸ್ವಾವಲಂಬಿಗಳಾಗುತ್ತಾರೆ "ಎಂದು ಅರ್ಚನಾ ಮಿಶ್ರಾ ಹೇಳಿದರು.

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಇನ್ನು ಒಂದು ತಿಂಗಳಲ್ಲಿ ಉಚಿತ ತರಬೇತಿ ಪಡೆದ ನಂತರ ಮಹಿಳೆಯರಿಗೆ ವಾಣಿಜ್ಯ ಚಾಲನಾ ಕಲಿಕೆ ಪರವಾನಗಿ ಸಿಗಲಿದೆ ಎಂದು ಡಿಟಿಐ ಅಧಿಕಾರಿ ಅನಿಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಉಚಿತ ವೃತ್ತಿಪರ ಚಾಲನಾ ತರಬೇತಿಯನ್ನು ಪಡೆಯಲು ಮಧ್ಯಪ್ರದೇಶದ ಜಾಬ್ವ, ರತ್ಲಂ, ಗ್ವಾಲಿಯರ್, ಚಿಂದ್ವಾರಾದಂತಹ ನಗರಗಳಿಂದ ಬಂದಿದ್ದಾರೆ. ಮಧ್ಯಪ್ರದೇಶ ಸಾರಿಗೆ ಇಲಾಖೆಯು ಅವರಿಗೆ ವಸತಿ ನಿಲಯಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಮೂವತ್ತೈದು ಮಹಿಳೆಯರು ಇಂದೋರ್ ಮೂಲದವರಾಗಿದ್ದಾರೆ. ಕೆಲವು ಫಲಾನುಭವಿಗಳು ವಿಧವೆಯರು ಮತ್ತು ಅವರ ಕುಟುಂಬವನ್ನು ನಡೆಸುವ ದೊಡ್ಡ ಜವಾಬ್ದಾರಿ ಇದೆ ಮಧ್ಯಪ್ರದೇಶದ ಸಾರಿಗೆ ಇಲಾಖೆಯು ಹೇಳಿದೆ.

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಭಾಗವಹಿಸಿದ ಪಿಂಕಿ ಗುಪ್ತಾ ಅವರು ಮಾತನಾಡಿ, ನನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಉತ್ತಮ ಉದ್ಯೋಗವನ್ನು ಆರಿಸಿ ಈ ಯೋಜನೆಗೆ ಸೇರಿದ್ದೇನೆ. "ನನ್ನ ಪತಿ ಆರು ತಿಂಗಳ ಹಿಂದೆ ನಿಧನರಾದರು. ಈಗ ಅತ್ತೆ ಮತ್ತು ನನ್ನ ಮಕ್ಕಳ ಜವಾಬ್ದಾರಿ ನನ್ನ ಮೇಲಿದೆ. ನಾನು ಎಲೆಕ್ಟ್ರಿಕ್-ರಿಕ್ಷಾ ಚಾಲಾಯಿಸುತ್ತಿದ್ದೆ ಮತ್ತು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಉತ್ತಮ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಲು ಬಯಸುತ್ತೇನೆ ಮತ್ತು ಈ ಯೋಜನೆ ಬಹಳ ಪ್ರಯೋಜನಕಾರಿ ಎಂದು ಅವರು ಹೇಳಿದರು.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಈ ಯೋಜನೆಯ ಮತ್ತೊಂದು ಫಲಾನುಭವಿ ಮನೀಶಾ ಪಾಲ್ ಅವರು ವಿಚ್ಚೇದನಕ್ಕೆ ಒಳಗಾಗಿದ್ದಾರೆ ಮತ್ತು ವೈದ್ಯಕೀಯ ವಿಜ್ಞಾನದ ಶೀಕ್ಷಣವನ್ನು ಮುಂದುವರಿಸಲು ಬಯಸುವ ಮಗಳ ಅಧ್ಯಯನದ ಜವಾಬ್ದಾರಿಯನ್ನು ಹೊಂದಿದ್ದಾರೆ.ಇಲ್ಲಿ ತರಬೇತಿಯ ಸಮಯದಲ್ಲಿ, ನಮಗೆ ಯಂತ್ರದ ಭಾಗಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ ಸಿದ್ಧಾಂತವನ್ನು ಕಲಿಸಲಾಗುತ್ತಿದೆ. ಯೋಗ್ಯವಾದ ಉದ್ಯೋಗವನ್ನು ಪಡೆಯಲು ನಾನು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಮಹಿಳೆಯರನ್ನು ಸಮಾಜದಲ್ಲಿ ದ್ವಿತೀಯ ದರ್ಜೆಯ ಪ್ರಜೆಯೆಂದು ಅನಾದಿಕಾಲದಿಂದಲೂ ಕಡೆಗಣಿಸಲಾಗಿದೆ. ಮಹಿಳೆಯು ಸಮಾಜದ ಜೀವನಾಡಿಯಾಗಿದ್ದು ಮಹಿಳೆಯರ ಅಭಿವೃದ್ಧಿ, ಸಬಲೀಕರಣ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ಸಂಬಂಧಿಸಿದ ಕೂಗು ಬಹು ಹಿಂದಿನದು.

ಮಧ್ಯಪ್ರದೇಶದ ಸಾರಿಗೆ ಇಲಾಖೆಯಿಂದ 50 ಮಹಿಳೆಯರಿಗೆ ಉಚಿತ ವೃತ್ತಿಪರ ಚಾಲನಾ ತರಬೇತಿ

ಆದರೆ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಅವರ ಸೇವೆ ಮತ್ತು ತ್ಯಾಗ ಮನೋಭಾವವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕಾಲ ಕಳೆದ ಹಾಗೇ ಮಹಿಳಾ ಸಬಲೀಕರಣಕ್ಕೆ ಸರ್ಕಾರ ಮತ್ತು ಖಾಸಗಿ ಸಂಘಟನೆ ಅಥವಾ ಸಂಸ್ಥೆಗಳು ಬೆಂಬಲವನ್ನು ನೀಡುತ್ತದೆ. ಇದರಿಂದಾಗಿ ಇಂದು ಮಹಿಳೆಯರು ಪುರಷರಿಗಿಂತ ತಾವು ಕಡಿಮೆ ಇಲ್ಲವೆಂದು ಎಲ್ಲಾ ರಂಗಗಳಲ್ಲಿಯು ತೊಡಗಿಸಿಕೊಂಡಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Madhya Pradesh Providing Free Professional Driving Training To 50 women. Read In Kannada.
Story first published: Wednesday, February 10, 2021, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X