ವಿಶೇಷ ವೇಷಭೂಷಣ ಧರಿಸಿ ಸ್ಟಂಟ್ ಮಾಡುವ ಕ್ರೇಜಿ ಬೈಕ್ ರೈಡರ್ ಈಗ ಬೆಂಗಳೂರು ಪೊಲೀಸರ ಅತಿಥಿ

ಇಂದು ಸೋಶಿಯಲ್ ಮೀಡಿಯಾ ಕಾಲ. ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ (Reels) ಅಥವಾ ಶಾರ್ಟ್ ವೀಡಿಯೊ ಮಾಡುವುದು ಒಂದು ಟ್ರೆಂಡ್ ಆಗಿದೆ. ಅದರಲ್ಲೂ ಇಂದು ಇನ್ಸ್ಟಾಗ್ರಾಮ್ (Instagram) ಹೆಚ್ಚು ಟ್ರೆಂಡಿಗ್ ನಲ್ಲಿ ಇರುವ ಸೋಶಿಯಲ್ ಮೀಡೀಯಾ ಆಗಿದೆ. ಇದರಲ್ಲಿ ರೀಲ್ಸ್ ವೈರಲ್ ಆಗಲು ಯುವಕ ಮತ್ತು ಯುವತಿಯರು ವಿಭಿನ್ನವಾಗಿ ರೀಲ್ಸ್ ಮಾಡುತ್ತಾರೆ.

ಇನ್ಸ್ಟಾಗ್ರಾಮ್ ರೀಲ್ಸ್ ವೈರಲ್ ಆಗಲು ಕೆಲವು ಯುವಕರು ಅಪಾಯಕಾರಿ ಸ್ಟಂಟ್ ಮಾಡುತ್ತಾರೆ. ಇದೇ ರೀತಿ ವಿಶೇಷ ವೇಷಭೂಷಣ ಧರಿಸಿ ಬೈಕ್​ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಖತ್ ಕಲರ್ ಫುಲ್ ಆಗಿ ವಿಶೇಷ ವೇಷಭೂಷಣ ಧರಿಸಿ ಕೆಐಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಬೈಕ್ ರೈಡರ್ ಅನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಬೈಕ್ ವ್ಹೀಲಿಂಗ್ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ, ವ್ಹೀಲಿಂಗ್ ಮಾಡುವ ಸಂಖ್ಖೆ ಕಡಿಮೆಯಾಗುತ್ತಿಲ್ಲ. ಇದೇ ರೀತಿ ಬೆಂಗಳೂರಿನ ಯಾವುದೇ ಭಯ ಇಲ್ಲದೆ ರಸ್ತೆಯಲ್ಲಿ ಸ್ಟಂಟ್ ಮಾಡಿ ಅದರ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿದ್ದ ಮಿಸ್ಟರ್ ಕ್ರೇಜಿ (Mr Crazy) ಬೈಕ್ ರೈಡರ್. ಈ ಬೈಕ್ ರೈಡರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಫಾಲವರ್ಸ್ ಅನ್ನು ಹೊಂದಿದ್ದಾರೆ.

ಕೆಲವು ಕಡೆ ಇತನ ಜೊತೆ ಹೋದಲ್ಲಿ ಸೆಲ್ಫೆ ತೆಗೆದುಕೊಳ್ಳಲು ಯುವಕರು ಮುಗಿ ಬೀಳುತ್ತಾರೆ. ಇತನ ವೀಡಿಯೊ ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಪರಿಶೀಲನೆ ನಡೆಸಿ ಬೈಕ್‌ ರೈಡರ್‌ನ ಪತ್ತೆ ಹಚ್ಚಿದ ಯಲಹಂಕ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಿಸ್ಟರ್ ಕ್ರೇಜಿ ಬೈಕ್ ರೈಡನ್ ಬೈಕ್ ಜಪ್ತಿ ಮಾಡಿದ ಪೊಲೀಸರು ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.


ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಮಿಸ್ಟರ್ ಕ್ರೇಜಿ ಬೈಕ್ ರೈಡರ್ ಈಗ ನಮ್ಮ ಅತಿಥಿ. ಸಂಚಾರಿ ನಿಯಮಗಳ ಉಲ್ಲಂಘನೆ ಹಿನ್ನೆಲೆ ಬೈಕ್ ವಶಕ್ಕೆ ಪಡೆಯಲಾಗಿದೆ. ಅಪಾಯಕಾರಿ ಹಾಗೂ ದುರ್ವತನೆ ನಡವಳಿಕೆಗಾಗಿ ಮಿನಲ್ ಕ್ರಮ ತೆಗೆದುಕೊಳ್ಳಲಾಗಿದೆ. ದಯಮಾಡಿ ಯಾರೂ ಇಂತಹ ಅಪಾಯಕಾರಿ ಸ್ಟಂಟ್ ಗಳನ್ನು ಮಾಡಬೇಡಿ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಘೋರ್ಪಡೆ ಐಪಿಎಸ್ ಟ್ವಿಟ್ ಮಾಡಿದ್ದಾರೆ.

ಇನ್ನು ಮಿಸ್ಟರ್ ಕ್ರೇಜಿ ಬೈಕ್ ರೈಡರ್ ಯಮಹಾ R15 V3 ಬೈಕ್ ಅನ್ನು ಹೊಂದಿದ್ದಾರೆ. ಈ ಬೈಕ್ ಅನ್ನು ಅವರು ವಿಭಿನ್ನವಾಗಿ ಮಾಡಿಫೈಗೊಳಿಸಿದ್ದಾರೆ. ಈ ಯಮಹಾ R15 V3 ಬೈಕಿಗೆ ಆಕರ್ಷಕ ಬಣ್ಣಗಳನ್ನು ನೀಡಲಾಗಿದ್ದು, ಕೆಲವು ಗ್ರಾಫಿಕ್ಸ್ ಅಂಶಗಳನ್ನು ಸೇರಿಸಲಾಗಿದೆ. ಯಮಹಾ ವೈಜೆಡ್ಎಫ್-ಆರ್15 ವಿ3 ಮಾದರಿಯು 155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಜಿನ್ ಅನ್ನು ಹೊಂದಿದೆ.

ಪ್ಪರ್ ಅಸಿಸ್ಟೆಡ್ ಕ್ಲಚ್‌ನೊಂದಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ ಈ ಬೈಕ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಯಮಹಾ ಆರ್15 ವಿ3 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್-ಲ್ಯಾಂಪ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪೂರ್ಣ ಪ್ರಮಾಣದ ಡಿಜಿಟಲ್ ಎಲ್‌ಸಿಡಿ, ಮತ್ತು ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟ್ ಜೋಡಿಸಲಾಗಿದೆ.

ಈ ಬೈಕ್ ಮಾದರಿಯಲ್ಲಿ ರೇಡಿಯಲ್ ಟಯರ್, ಡ್ಯುಯಲ್-ಹಾರ್ನ್ ಮತ್ತು ಸೈಡ್-ಸ್ಟ್ಯಾಂಡ್ ಆಕ್ಟಿವೇಟೆಡ್ ಎಂಜಿನ್ ಕಟ್-ಆಫ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸ್ಟ್ರೀಟ್ ಫೈಟರ್ ಮಾದರಿಗಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದ್ದು, ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 282 ಎಂಎಂ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, August 10, 2023, 17:41 [IST]
English summary
Mr crazy bike rider arrested by bengaluru police details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+