ಅಭಿಮಾನಿಗೆ ಮರೆಯಾಲಗದ ಗಿಫ್ಟ್ ಕೊಟ್ಟ MS ಧೋನಿ: ಇದಕ್ಕೆಲ್ಲ ಅದೃಷ್ಟವಿರಬೇಕು ಎಂದು ಫ್ಯಾನ್ಸ್!

ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕೆಲವರಲ್ಲಿ ಎಂಎಸ್ ಧೋನಿ ಕೂಡ ಒಬ್ಬರು, ಕೇವಲ ಕ್ರಿಕೆಟ್ ಮಾತ್ರವಲ್ಲದೆ ಮೋಟಾರ್‌ಸೈಕಲ್‌ಗಳೆಂದರೆ ಧೋನಿಗೆ ಎಲ್ಲಿಲ್ಲದ ಉತ್ಸಾಹ. ತಮ್ಮ ಮನೆಯಲ್ಲಿ ಬೈಕ್‌ಗಳಿಗಾಗಿಯೇ ಬಹುದೊಡ್ಡ ಗ್ಯಾರೇಜ್ ಹೊಂದಿದ್ದಾರೆ. ಇದಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರು ಅಚ್ಚರಿಗೊಂಡಿರುವ ಉದಾಹರಣೆಗಳಿವೆ. ಏಕೆಂದರೆ ಇದು ಗ್ಯಾರೇಜ್‌ನಂತೆ ಕಾಣುವುದಿಲ್ಲ, ಬದಲಾಗಿ ಬಹುದೊಡ್ಡ ಶೋರೂಂನಂತೆ ಕಾಣುತ್ತದೆ. ಇಷ್ಟು ಮೋಟೊ ಕ್ರೇಜ್ ಹೊಂದಿರುವ ಧೋನಿ, ತಮ್ಮ ಅಭಿಮಾನಿಗಳು ಹೊಸ ಬೈಕ್‌ಗಳೊಂದಿಗೆ ತಮ್ಮ ಬಳಿ ಬಂದರೆ ನಿರಾಸೆಗೊಳಿಸುವುದಿಲ್ಲ. ಅಂತಹದೇ ವಿಡಿಯೋವೊಂದು ಈಗ ವೈರಲ್ ಆಗಿದೆ.

ಎಂಎಸ್‌ ಧೋನಿ ಅವರು ಮೋಟಾರ್‌ಸೈಕಲ್‌ಗಳು ಮತ್ತು ಕಾರುಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ರಾಂಚಿಯ ತಮ್ಮ ತೋಟದ ಮನೆಯಲ್ಲಿ ಬೈಕ್ ಹಾಗೂ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಅವರ ಅಭಿಮಾನಿಗಳು ಆಗಾಗ್ಗೆ ತಮ್ಮ ವಾಹನಗಳನ್ನು ಅವರ ಬಳಿಗೆ ಕೊಂಡೊಯ್ದು ಆಟೋಗ್ರಾಫ್ ಪಡೆಯುತ್ತಾರೆ. ಅಂತೆಯೇ ಈಗಲೂ ಅಭಿಮಾನಿಯೊಬ್ಬರು ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಸಹಿ ಹಾಕಿಸಿಕೊಂಡು, ಇದೇ ನನಗೆ ಮರೆಯಲಾಗದ ಗಿಫ್ಟ್ ಎಂದು ಖುಷಿ ಹಂಚಿಕೊಂಡಿದ್ದಾರೆ.

ms-dhoni-autograph-on-fans-bike-viral-video

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೃಷ್ಣಕಾಂತ್ ಗುಪ್ತಾ ಎಂಬವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಧೋನಿಯವರು ಹೊರಬರುತ್ತಿದ್ದಂತೆ, ಅವರ ಅಭಿಮಾನಿಗಳು ಮತ್ತು ಭದ್ರತಾ ಸಿಬ್ಬಂದಿ ಕಟ್ಟಡದ ಹೊರಗೆ ಕಾಯುತ್ತಿದ್ದರು. ಧೋನಿ ನಗುವಿನೊಂದಿಗೆ ಬೈಕ್ ಕಡೆಗೆ ನಡೆಯುತ್ತಾ ಅಭಿಮಾನಿಯನ್ನು ಭೇಟಿಯಾದ್ರು, ಈ ಹಬ್ಬದ ಸೀಸನ್‌ನಲ್ಲಿ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ್ದೇನೆ, ನಿಮ್ಮ ಆಟೋಗ್ರಾಫ್ ಬೇಕೆಂದು ಕೇಳಿದ್ದಾನೆ.

ಎಂಎಸ್ ಧೋನಿ ಯಾವುದೇ ಹಿಂಜರಿಕೆಯಿಲ್ಲದೆ ಮಾರ್ಕರ್ ಕೇಳಿ, ಅಭಿಮಾನಿಯ ಬೈಕ್ ಫ್ಯೂಲ್ ಟ್ಯಾಂಕ್ ಒರೆಸಿ ಅದರ ಮೇಲೆ ಆಟೋಗ್ರಾಫ್ ನೀಡಿದ್ದಾರೆ. ಅಭಿಮಾನಿಯನ್ನು ಸಂತಸಗೊಳಿಸಿದ್ದಲ್ಲದೇ, ಧೋನಿ ಅವರ ಮುಖದ ಮೇಲೂ ನಗು ಮಾಸಲಿಲ್ಲ. ಕುತೂಹಲಕಾರಿ ವಿಷಯವೇನೆಂದರೆ ಅಭಿಮಾನಿಯನ್ನು ಹಿಂದೆ ಕೂರಿಸಿಕೊಂಡು ಬೈಕ್ ಓಡಿಸಿರುವುದು. ಧೋನಿ ತಮ್ಮ ಆವರಣದಲ್ಲಿ ಬೈಕ್ ಸವಾರಿ ಮಾಡಿರುವ ಕಾರಣ ಹೆಲ್ಮೆಟ್ ಧರಿಸಿಲ್ಲ ಎಂಬುದನ್ನು ಗಮನಿಸಬೇಕು.

ಧೋನಿ ತಮ್ಮ ಅಭಿಮಾನಿಗಳ ವಾಹನಗಳ ಮೇಲೆ ಆಟೋಗ್ರಾಫ್ ಹಾಕಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಮೋಟಾರ್ ಸೈಕಲ್‌ಗಳು ಮತ್ತು ಕಾರುಗಳಿಗೆ ಸಹಿ ಹಾಕಿದ್ದಾರೆ. ಬಿಎಂಡಬ್ಲ್ಯು 7-ಸೀರಿಸ್ ಐಷಾರಾಮಿ ಸೆಡಾನ್, ಯಮಹಾ ಆರ್‌ಡಿ 350ಎಸ್, ಟ್ರಯಂಫ್ ರಾಕೆಟ್ 3 ಆರ್ ನಂತಹ ದುಬಾರಿ ಬೈಕುಗಳಿಗೂ ಆಟೋಗ್ರಾಫ್ ನೀಡಿ ಅವುಗಳಲ್ಲಿ ರೌಂಡ್ ಹೋಗಿಬಂದ ಹಲವು ಉದಾಹರಣೆಗಳಿವೆ.

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ವಿಶೇಷತೆಗಳು: ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1,79,782ಗಳಾದರೆ, ಡ್ಯುಯಲ್ ಚಾನೆಲ್ ಎಬಿಎಸ್ ಬೈಕಿನ ಬೆಲೆಯು ರೂ.1,88,531ಗಳಾಗಿದೆ. ಕ್ಲಾಸಿಕ್ 350 ಬೈಕಿನಲ್ಲಿ ಬಿಎಸ್-6, 346 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 19.3 ಪಿಎಸ್ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ನೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಗಾಗಿ 153 ಎಂಎಂ ಹಿಂಭಾಗದ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಸದ್ಯ ಭಾರತದಲ್ಲಿ 350ಸಿಸಿ ವಿಭಾಗದಲ್ಲಿ ಅತಿಹೆಚ್ಚು ಮಾರಾಟ ಕಾಣುವ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಟಾಪ್‌ನಲ್ಲಿ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 4, 2024, 18:37 [IST]
English summary
Ms dhoni autograph on fans bike viral video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+