ಇದು ರಸ್ತೆ ಮೇಲಿನ ಐರಾವತ: ಹೊಸ ರೇಂಜ್ ರೋವರ್ ಕಾರು ಖರೀದಿಸಿದ ಎಂಎಸ್ ಧೋನಿ.. ಬೆಲೆ ಕೇಳಿದ್ರೆ ಬಿಚ್ಚಿ ಬೀಳ್ತಿರಾ?

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ (MS Dhoni), ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ, ಅವರ ವಯಸ್ಸು 43 ಆಗಿದ್ದು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಆರಂಭದಲ್ಲಿ ತಮ್ಮ ಅಬ್ಬರದ ಆಟದಿಂದ ಗುರುತಿಸಿಕೊಂಡಿದ್ದ ಅವರು, ಆ ಬಳಿಕ 'ಕ್ಯಾಪ್ಟನ್ ಕೂಲ್' ಎಂದೇ ಜನಪ್ರಿಯರಾದರು. ಧೋನಿ ಅವರಿಗೆ ಕ್ರಿಕೆಟ್‌ನಂತೆಯೇ ಕಾರು ಹಾಗೂ ಬೈಕ್‌ಗಳ ಮೇಲೆಯೂ ವಿಶೇಷವಾದ ಪ್ರೀತಿಯಿದೆ.

ಇತ್ತೀಚೆಗೆ ಎಂಎಸ್ ಧೋನಿ ಅವರು, ಹೊಚ್ಚ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ (Range Rover Autobiography) ಕಾರನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡೊಯೋವೊಂದು ಭಾರೀ ವೈರಲ್ ಆಗುತ್ತಿದೆ. ಅದರಲ್ಲಿ ರಾಂಚಿಯಲ್ಲಿರುವ ಧೋನಿ ಅವರ ಫಾರ್ಮ್‌ಹೌಸ್‌ ಎದುರಿಗೆ ಟ್ರಕ್‌ವೊಂದರಲ್ಲಿ ನೂತನ ಕಾರು ನಿಂತಿರುವುದನ್ನು ಕಾಣಬಹುದು.

MS Dhoni Buys New Range Rover Autobiography Suv Details

ಈ ಕಾರಿನ ಡೈಮಂಡ್ ಟರ್ನ್ಡ್ ವಿತ್ ಗ್ಲೋಸ್ ಬ್ಲ್ಯಾಕ್ ಕಾಂಟ್ರಾಸ್ಟ್ ವೀಲ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು 'ರೇಂಜ್ ರೋವರ್ ಆಟೋಬಯೋಗ್ರಫಿ' ಎಸ್‌ಯುವಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ನೂತನ ಆಟೋಬಯೋಗ್ರಫಿ ಕಾರು, ಎಸ್‌ಡಬ್ಲ್ಯೂಡಿ (ಸ್ಟ್ಯಾಂಡರ್ಡ್ ವೀಲ್‌ಬೇಸ್) ಮತ್ತು ಎಲ್‌ಡಬ್ಲ್ಯೂಡಿ (ಲಾಂಗ್ ವೀಲ್‌ಬೇಸ್) ವಿಧದಲ್ಲಿ ಖರೀದಿಗೆ ದೊರೆಯಲಿದ್ದು, ರೂ.2.70 ಕೋಟಿ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಒಳಗೊಂಡಿದೆ.

ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‌ಯುವಿ, 2996 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 394 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 550 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 8-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 242 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ.

ನೂತನ ಕಾರು ಹೆಚ್ಚಿನ ಆಸನ ಆಯ್ಕೆ ವ್ಯವಸ್ಥೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಅಲಾಯ್ ವೀಲ್‌ಗಳು, ಫ್ರಂಟ್ & ರೇರ್ ಪವರ್ ವಿಂಡೋಸ್ ಆಯ್ಕೆಯನ್ನು ಹೊಂದಿದೆ.

ಎಂಎಸ್ ಧೋನಿ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಆಡಿ ಕ್ಯೂ7 (Audi Q7) ಕಾರು ಸಹ ಇದ್ದು, ರೂ.88.70 ಲಕ್ಷದಿಂದ ರೂ.97.85 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಈ ಕಾರು 3-ಲೀಟರ್ ವಿ6 ಟರ್ಬೊ ಪೆಟ್ರೋಲ್ ಹಾಗೂ 8-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಇದು ಮಾತ್ರವಲ್ಲದೆ, ಎಂಎಸ್ ಧೋನಿ ಅವರು ನಿಸ್ಸಾನ್ ಜೊಂಗಾ, ಮಹೀಂದ್ರಾ ಸ್ಕಾರ್ಪಿಯೋ, ಮಿತ್ಸುಬಿಷಿ ಪಜೆರೊ, ಹಮ್ಮರ್ ಹೆಚ್2, ಮರ್ಸಿಡಿಸ್ ಬೆಂಜ್ ಜಿಎಲ್ಇ, ಜೀಪ್ ಗ್ರ್ಯಾಂಡ್ ಚೆರೋಕೀ ಕಾರುಗಳ ಒಡೆಯರೂ ಆಗಿದ್ದಾರೆ. ಜೊತೆಗೆ ಹತ್ತಾರು ಬೈಕ್‌ಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ಇಟ್ಟುಕೊಂಡಿದ್ದು, ಕೆಲವು ವಾಹನ ಮಾರಾಟ ಕಂಪನಿಗಳ ರಾಯಭಾರಿಯೂ ಆಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 5, 2025, 8:25 [IST]
English summary
Ms dhoni buys new range rover autobiography suv details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+