RCB ವಿರುದ್ಧ ಹೊಸ ತಂಡವನ್ನು ಖರೀದಿಸಲು ಸಜ್ಜಾದರೇ ಧೋನಿ? ಇಡೀ ಭಾರತ ಈ ಬಗ್ಗೆ ಮಾತನಾಡುತ್ತಿದೆ!

ಅಭಿಮಾನಿಗಳಿಂದ ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುವ ಎಂ.ಎಸ್.ಧೋನಿ (MS Dhoni), ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಗಲಿ IPL ಆಗಲಿ ಅಭಿಮಾನಿಗಳನ್ನು ರಂಜಿಸುವಲ್ಲಿ ಅವರು ವಿಫಲವಾಗಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಧೋನಿ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಈ ಬಾರಿಯ IPL ಕೂಡ ಧೋನಿಗೆ ಕೊನೆಯ ಸೀಸನ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಹಾಗಾಗಿ ಈ ಸಲ ಕಪ್ ಪಕ್ಕಾ CSK ಬಾಚಿಕೊಳ್ಳಲಿದೆ ಎಂದು ಧೋನಿ ಅಭಿಮಾನಿಗಳು ಗಟ್ಟಿಯಾಗಿ ನಂಬಿದ್ದರು. ಆದ್ರೆ ಪ್ಲೇ ಆಫ್‌ನಲ್ಲಿ ಆರ್‌ಸಿಬಿ ಜೊತೆಗೆ ಸೆಣಸಾಡಿ ಸೋತು, ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದಿದೆ. ಈಗ ಧೋನಿಯ ಐಪಿಎಲ್ ಭವಿಷ್ಯ ಪ್ರಶ್ನಾರ್ಹವಾಗಿದೆ.

ms-dhoni-facebook-post-about-starting-own-team-with-citroen-goes-viral

ಧೋನಿಗೆ ಈಗ 42 ವರ್ಷವಾಗಿರುವುದರಿಂದ ಅವರು ಮುಂದಿನ ಐಪಿಎಲ್ ಆಡುವ ಬಗ್ಗೆ ಅನುಮಾನಗಳಿವೆ. ಜೊತೆಗೆ ಅವರು ಸಾಕಷ್ಟು ಗಾಯಗಳಿಂದ ಬಳಲುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೂ 2025ರ ಐಪಿಎಲ್‌ನಲ್ಲಿ ಧೋನಿ ಆಡುತ್ತಾರಾ? ಇದು ಅನುಮಾನಾಸ್ಪದವಾಗಿದೆ. ಹೀಗಿದ್ದಾಗ ಧೋನಿ ಅವರ ಫೇಸ್‌ಬುಕ್ ಪೋಸ್ಟ್ ಈಗ ಅಭಿಮಾನಿಗಳಲ್ಲಿ ದೊಡ್ಡ ಗೊಂದಲ ಸೃಷ್ಟಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಎಂ.ಎಸ್.ಧೋನಿ ಫೇಸ್‌ಬುಕ್‌ನಲ್ಲಿ ನಿಯಮಿತವಾಗಿ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಈಗಲೂ ಧೋನಿ ಮಾಡಿರುವ ಪೋಸ್ಟ್ ಹೊಸ ಸಂಚಲನ ಸೃಷ್ಟಿಸಿದೆ. ಮೇ 22 ರಂದು ಮಧ್ಯಾಹ್ನ ಪೋಸ್ಟ್ ಮಾಡಲಾದ ಪೋಸ್ಟ್‌ನಲ್ಲಿ "ಜಿಗಿಯುವ ಸಮಯ ಬಂದಿದೆ. ಯಾವುದು ಮುಖ್ಯವೋ ಅದನ್ನು ಮಾಡುವ ಸಮಯ ಬಂದಿದೆ. ನಾನು ನನ್ನ ಸ್ವಂತ ತಂಡವನ್ನು ನಿರ್ಮಿಸಲಿದ್ದೇನೆ ಎಂದು ಬಾಂಬ್ ಸಿಡಿಸಿದ್ದಾರೆ.

ms-dhoni-facebook-post-about-starting-own-team-with-citroen-goes-viral

ಆದರೆ ಇಲ್ಲೊಂದು ಗಿಮಿಕ್ ಇದೆ, ಧೋನಿ ಈ ಪೋಸ್ಟ್ ಅನ್ನು ಫ್ರೆಂಚ್ ವಾಹನ ತಯರಾಕ ಬ್ರಾಂಡ್ ಆಗಿರುವ ಸಿಟ್ರನ್ ಅಧಿಕೃತ ಪುಟದೊಂದಿಗೆ ಸಂಯೋಜಿಸಿದ್ದಾರೆ. ಧೋನಿಯನ್ನು ಸಿಟ್ರನ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಈ ಬಗ್ಗೆ ಒಂದು ತಿಂಗಳ ಹಿಂದೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಆದ್ದರಿಂದ ಧೋನಿ ಭವಿಷ್ಯದಲ್ಲಿ ಸಿಟ್ರನ್‌ನೊಂದಿಗೆ ಏನಾದರೂ ಮಾಡುವ ಸುಳಿವು ನೀಡುತ್ತಿದ್ದಾರೆಯೇ?

ಇತ್ತ ಅಭಿಮಾನಿಗಳು ಐಪಿಎಲ್‌ನಲ್ಲಿ ಧೋನಿ ಹೊಸ ತಂಡವನ್ನು ಖರೀದಿಸುತ್ತಾರೆಯೇ? ಅವರು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ವಿರುದ್ಧ ಆಡುತ್ತಾರೆಯೇ? ಎಂದು ಅಭಿಮಾನಿಗಳು ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಆದರೆ ಇದು ನಿಜವಾಗುವ ಸಾಧ್ಯತೆ ತೀರಾ ಕಡಿಮೆ. ಮೊದಲೇ ಹೇಳಿದಂತೆ ಪೋಸ್ಟ್ ಮಾಡುವಾಗ ಸಿಟ್ರನ್ ಅನ್ನು ಸಂಯೋಜಿರುವ ಕಾರಣ, ಇದು ಬಹುಶಃ ಜಾಹೀರಾತು ಪೋಸ್ಟ್ ಆಗಿರಬಹುದು.

ms-dhoni-facebook-post-about-starting-own-team-goes-viral

ಸಿಟ್ರನ್ ಕಂಪನಿಯು ಭಾರತದಲ್ಲಿ ಸಿ3, ಸಿ3 ಏರ್ ಕ್ರಾಸ್, ಸಿ5 ಏರ್ ಕ್ರಾಸ್, ಇಸಿ3 (ಎಲೆಕ್ಟ್ರಿಕ್ ಕಾರು) ಕಾರುಗಳನ್ನು ಮಾರಾಟ ಮಾಡುತ್ತಿದೆ. ಸಿಟ್ರನ್ ಬಸಾಲ್ಟ್ ಎಂಬ ಹೊಸ ಕಾರನ್ನು ಕೆಲವೇ ತಿಂಗಳುಗಳಲ್ಲಿ ಕಂಪನಿಯು ಬಿಡುಗಡೆ ಮಾಲಿರುವ ಕಾರಣ ಇದು ಪ್ರಚಾರದ ಪೋಸ್ಟ್ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಅವರು ನಿರೀಕ್ಷಿಸಿದಂತೆ, ಈ ಪೋಸ್ಟ್ ಎಲ್ಲರ ಗಮನ ಸೆಳೆದಿದ್ದು ದೇಶವೆಲ್ಲಾ ಮಾತನಾಡುವಂತಾಗಿದೆ.

ನೀವು ಗಮನಿಸಿದರೆ ಧೋನಿಯ ಫೇಸ್‌ಬುಕ್ ಪುಟವು ಜಾಹೀರಾತುಗಳಿಂದ ತುಂಬಿರುತ್ತದೆ. ಅಭಿಮಾನಿಗಳಲ್ಲಿ ಆಸಕ್ತಿಯನ್ನು ಕೆರಳಿಸಲು ಇಂತಹ ಪದಗಳನ್ನು ಬಳಸಿರಬಹುದು. ಒಂದು ವೇಳೆ ಅವರು ಹೊಸ ಟೀಮ್ ಕಟ್ಟುವುದು ನಿಜವೇ ಆಗಿದ್ದರೇ ಆ ಬಗ್ಗೆ ಶೀಘ್ರದಲ್ಲೇ ಮಾಹತಿ ಹೊರಬೀಳಲಿದೆ. ಧೋನಿಯವರ ಈ ಪೋಸ್ಟ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Thursday, May 23, 2024, 12:29 [IST]
English summary
Ms dhoni facebook post about starting own team with citroen goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+