ಲಾಕ್‌ಡೌನ್ ಎಫೆಕ್ಟ್: ಹೊಸ ವಾಹನದಲ್ಲಿ ಕಾಣಿಸಿಕೊಂಡ ಎಂಎಸ್ ಧೋನಿ
ಎಂಎಸ್ ಧೋನಿ ಕಾರು ಹಾಗೂ ಬೈಕುಗಳ ವಿಪರೀತ ಕ್ರೇಜ್ ಹೊಂದಿರುವುದು ಹಾಗೂ ತಮ್ಮ ಗ್ಯಾರೇಜ್‌ನಲ್ಲಿ ಸಾಕಷ್ಟು ಕಾರು, ಬೈಕ್‌ಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಧೋನಿ ಈಗ ಹೊಸ ವಾಹನದ ಬಗ್ಗೆ ಆಸಕ್ತರಾಗಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಎಂಎಸ್ ಧೋನಿರವರು ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಎಂಎಸ್ ಧೋನಿ ಲಾಕ್‌ಡೌನ್‌ನಲ್ಲಿ ಹೊಸ ಟ್ರಾಕ್ಟರ್ ಖರೀದಿಸಿ, ತಮ್ಮ ತೋಟದ ಮನೆಯಲ್ಲಿ ಚಾಲನೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಈ ವೀಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಎಂಎಸ್ ಧೋನಿರವರು ತಮ್ಮ ಹೊಸ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವುದನ್ನು ಕಾಣಬಹುದು.

ಧೋನಿರವರು ಹೊಸ ಬೈಕ್ ಹಾಗೂ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೇ ಮೊದಲ ಬಾರಿಗೆ ಅವರು ಟ್ರಾಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿರವರು ಹಲವು ಐಷಾರಾಮಿ ಬೈಕ್‌ಗಳನ್ನು ಹೊಂದಿದ್ದಾರೆ. ಇದರ ಹಲವು ಚಿತ್ರಗಳು ಹಾಗೂ ವೀಡಿಯೊಗಳು ಹೊರಬಂದಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ವೀಡಿಯೊ ಮೂಲಕ ಧೋನಿರವರು ಲಾಕ್‌ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬುದನ್ನು ಹೇಳಲಾಗಿದೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಲಾಕ್‌ಡೌನ್ ಕಾರಣದಿಂದಾಗಿ ಬಹುತೇಕ ಜನರು ಮನೆಯಲ್ಲಿಯೇ ಇರುವಂತಾಗಿದೆ. ಧೋನಿರವರು ಸಹ ತಮ್ಮ ಸಮಯವನ್ನು ಕಳೆಯಲು ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಧೋನಿರವರು ಬೈಕ್ ಸವಾರಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಚೆನ್ನೈ ಸೂಪರ್ ಕಿಂಗ್ಸ್ ಶೇರ್ ಮಾಡಿದ್ದ ವೀಡಿಯೊದಲ್ಲಿ ಅವರು ತಮ್ಮ ಮಗಳು ಝೀವಾ ಜೊತೆಗೆ ಬೈಕ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಈ ವೀಡಿಯೊಗೆ ಕ್ರೇಜಿ ಲೈಟಿಂಗ್ ಹಾಗೂ ಹ್ಯಾಪಿನೆಸ್ ಎಂದು ಟ್ಯಾಗ್ ನೀಡಲಾಗಿತ್ತು.

ಕಳೆದ ತಿಂಗಳು ಝೀವಾ ಜೊತೆಗೆ ಬೈಕ್ ಸವಾರಿ ಮಾಡುತ್ತಿರುವ ಮತ್ತೊಂದು ವೀಡಿಯೊ ಹೊರಬಂದಿತ್ತು. ಧೋನಿರವರು ಲಾಕ್‌ಡೌನ್ ಅವಧಿಯಲ್ಲಿ ಹೊಸ ಹೊಸ ವಾಹನಗಳ ಜೊತೆಗೆ ಕಾಣಿಸಿಕೊಳ್ಳುವುದರೊಂದಿಗೆ ಸಮಯ ಕಳೆಯುತ್ತಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಭಾರತದಲ್ಲಿ ಲಾಕ್‌ಡೌನ್ ನಡುವೆಯೂ ಟ್ರಾಕ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಎಂಎಸ್ ಧೋನಿರವರು ಸಹ ಟ್ರ್ಯಾಕ್ಟರ್ ಖರೀದಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಧೋನಿಯವಾರ ಗ್ಯಾರೇಜ್‌ನಲ್ಲಿ ಎರಡು ಹಂತದ ಪಾರ್ಕಿಂಗ್‌ಗಳಿದ್ದು, ಬೈಕ್ ಹಾಗೂ ಕಾರುಗಳನ್ನು ಈ ಎರಡೂ ಹಂತಗಳಲ್ಲಿ ಪಾರ್ಕ್ ಮಾಡಲಾಗಿದೆ.


Click it and Unblock the Notifications