ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಸಾಕಷ್ಟು ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದಾರೆ. ಅಂಬಾನಿ ಅವರ ಕಾರುಗಳ ಸಂಗ್ರಹವನ್ನು ಈಗ ಜಿಯೋ ಗ್ಯಾರೇಜ್ ಎಂದು ಕರೆಯಲಾಗುತ್ತದೆ. ಗ್ಯಾರೇಜ್ ಈಗಾಗಲೇ ಅನೇಕ ಐಷಾರಾಮಿ ಮತ್ತು ಜನಪ್ರಿಯ ಎಸ್‍ಯುವಿಗಳನ್ನು ಒಳಗೊಂಡಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಲ್ಯಾಂಡ್ ರೋವರ್ ರೇಂಜ್ ರೋವರ್‌ನಂತಹ ಉನ್ನತ-ಮಟ್ಟ ಎಸ್‍ಯುವಿಗಳನ್ನು ಹೊಂದಿರುವ ಜನಪ್ರಿಯ ಬೆಂಗಾವಲು ಪಡೆಯಲ್ಲಿ ಇತ್ತೀಚೆಗೆ ಬೆಂಟ್ಲಿ ಬೆಂಟಾಯ್ಗಾ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಗುರುತಿಸಲ್ಪಟ್ಟಿದೆ. CS12 Vlogs ಮುಂಬೈನಲ್ಲಿ ಹೊಸ ಬಿಳಿ ಬಣ್ಣದ ಬೆಂಟ್ಲಿ ಬೆಂಟಾಯ್ಗಾವನ್ನು ಗುರುತಿಸಿದೆ. ಅಂಬಾನಿ ಫ್ಯಾಮಿಲಿಗೆ ಬಿಳಿ ಬಣ್ಣದ ಐಷಾರಾಮಿ ಎಸ್‍ಯುವಿಗಳು ನೆಚ್ಚಿನದಾಗಿದೆ. ಅಂಬಾನಿ ಕುಟುಂಬವು ಇತ್ತೀಚೆಗೆ ಮೂರನೇ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯನ್ನು ಸ್ವೀಕರಿಸಿದೆ ಮತ್ತು ಇದು ರೋಲ್ಸ್ ರಾಯ್ಸ್ ಕುಲ್ಲಿನನ್‌ನಂತೆಯೇ ಬಿಳಿ ಬಣ್ಣವನ್ನು ಹೊಂದಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

2020 ರಲ್ಲಿ ಬ್ರಿಟಿಷ್ ತಯಾರಕರು ಅನಾವರಣಗೊಳಿಸಿದ 2021ರ ಬೆಂಟ್ಲಿ ಬೆಂಟಾಯ್ಗಾ ಇದಾಗಿದೆ. ಅಂಬಾನಿ ಫ್ಯಾಮಿಲಿ ಈಗಾಗಲೇ ಹೊಂದಿರುವ ಬೆಂಟ್ಲಿ ಬೆಂಟಾಯ್ಗಾ ರೇಸಿಂಗ್ ಗ್ರೀನ್‌ನಲ್ಲಿ ಒಂದನ್ನು ಮತ್ತು ಇನ್ನೊಂದು ಕಂದು ಬಣ್ಣದಲ್ಲಿದೆ. ಅವುಗಳಲ್ಲಿ ಒಂದು ಡಬ್ಲ್ಯು12 ಎಂಜಿನ್ ಮತ್ತು ಇನ್ನೊಂದು ವಿ8 ಎಂಜಿನ್‌ನಿಂದ ಚಾಲಿತವಾಗಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಬೆಂಟ್ಲಿ ಕಳೆದ ವರ್ಷ ಪೆಟ್ರೋಲ್ ಡಬ್ಲ್ಯು12 ಮತ್ತು ಪೆಟ್ರೋಲ್ ವಿ8 ಅನ್ನು ಇರಿಸಿ ವಿ8 ಡೀಸೆಲ್ ಅನ್ನು ತೆಗೆದುಹಾಕಿತು. ಭಾರತದಲ್ಲಿ ಆದರೂ, ಬೆಂಟ್ಲೆ ಅಧಿಕೃತವಾಗಿ ವಿ8 ರೂಪಾಂತರವನ್ನು ಮಾತ್ರ ನೀಡುತ್ತದೆ. ಅಂಬಾನಿ ಕುಟುಂಬದ ಅಧಿಕೃತ ನಿವಾಸವಾಗಿರುವ ಆಂಟಿಲಿಯಾದಲ್ಲಿ ಕಳೆದ ವರ್ಷ ಇದೇ ರೀತಿಯ ಅಥವಾ ಅದೇ ವಾಹನವನ್ನು ಗುರುತಿಸಲಾಗಿತ್ತು.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಆದರೆ, ಆ ಸಮಯದಲ್ಲಿ ಕಾರಿಗೆ ಯಾವುದೇ ನೋಂದಣಿ ಸಂಖ್ಯೆ ಇರಲಿಲ್ಲ. ಬೆಂಟಾಯ್ಗಾ ವಿ8 ಪೆಟ್ರೋಲ್ ರೂಪಾಂತರದ ಬೆಲೆ ಎಕ್ಸ್ ಶೋ ರೂಂ ಪ್ರಕಾರ ರೂ.4.10 ಕೋಟಿಯಾಗಿದೆ. ಬೆಂಟ್ಲಿ ಬೆಂಟಾಯ್ಗಾ ವಿ8 ಫಸ್ಟ್‌ ಎಡಿಷನ್ ಈ ಮಾದರಿಯಲ್ಲಿ ಅತ್ಯಂತ ಹೊಸ ಎಕ್ಸ್‌ಕ್ಲ್ಯೂಸಿವ್ ಮಾಡೆಲ್ ಆಗಿದೆ. ಇಂಗ್ಲೆಂಡ್‍ನ ಬೆಂಟ್ಲಿ ಮೋಟರ್ಸ್‌ನ ಕಾರುಗಳು ವಿಶ್ವಾದ್ಯಂತ ರಾಜ ಮನೆತನದವರು, ಬೃಹತ್ ಉದ್ಯಮಪತಿಗಳು, ಪ್ರಭಾವಿ ಹುದ್ದೆಗಳಲ್ಲಿರುವ ರಾಜಕಾರಣಿಗಳು ಹೆಚ್ಚಾಗಿ ಬಳಸುತ್ತಾರೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಬೆಂಟ್ಲಿ ಕಂಪನಿಯು ಹೊಸ ಬೆಂಟಾಯ್ಗಾ ಎಸ್‍ಯುವಿಯನ್ನು ಜಾಗಾತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿದ ಒಂದು ವರ್ಷದೊಳಗೆ ಭಾರತದಲ್ಲಿಯು ಬಿಡುಗಡೆಗೊಳಿಸಲಾಯಿತು. ಬೆಂಟಾಯ್ಗಾ ಎಸ್‍ಯುವಿಯು ಬೆಂಟ್ಲಿ ಕಂಪನಿಯು ಒಂದು ಪ್ರಮುಖ ಮಾದರಿಯಾಗಿದೆಪ್ರಸ್ತುತ ಖರೀದಿದಾರರು ಸೆಡಾನ್‌ಗಳಿಗಿಂತ ಎಸ್‌ಯುವಿಗಳನ್ನು ಆಯ್ಕೆ ಮಾಡುತ್ತಾರೆ. ಬೆಂಟಾಯ್ಗಾ ಎಸ್‍ಯುವಿಯು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ ಮಾದರಿಯಾಗಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಬೆಂಟ್ಲಿ ಬೆಂಟಾಯ್ಗಾ ಹೊರಭಾಗದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಪಡೆದಿದೆ. ಬೆಂಟಾಯ್ಗಾ ಹೊಸ ವಿನ್ಯಾಸ ಬದಲಾವಣೆಗಳು ಬ್ರ್ಯಾಂಡ್‌ನ ಸರಣಿಯಲ್ಲಿರುವ ಪ್ರಸ್ತುತ ಕಾಂಟಿನೆಂಟಲ್ ಜಿಟಿ ಮತ್ತು ಫ್ಲೈಯಿಂಗ್ ಸ್ಪರ್ ಮಾದರಿಗಳಿಗೆ ಅನುಗುಣವಾವೆ. ಎಸ್‍ಯುವಿ ಮಾದರಿಯ ಮುಂಭಾಗದಲ್ಲಿ ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಹೊಸ ಗ್ರಿಲ್ ವಿನ್ಯಾಸ ಮತ್ತು ಹೊಸ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಫೇಸ್‌ಲಿಫ್ಟ್ ಮಾದರಿಗೆ ಹೋಲಿಸಿದರೆ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ಗಳ ಸ್ಥಾನವನ್ನು ಈಗ 30 ಎಂಎಂ ಎತ್ತರದಲ್ಲಿ ಇರಿಸಲಾಗಿದೆ.ಹಿಂಭಾಗದಲ್ಲಿ ಈ ಹೊಸ ಎಸ್‍ಯುವಿ ಕಾಂಟಿನೆಂಟಲ್ ಜಿಟಿಯಲ್ಲಿರುವಂತೆಯೇ ಅನಿಮೇಟೆಡ್ ಎಲ್ಇಡಿಗಳೊಂದಿಗೆ ಹೊಸ 3ಡಿ ಎಲಿಪ್ಟಿಕಲ್ ಟೈಲ್-ಲೈಟ್ಗಳನ್ನು ಹೊಂದಿದೆ. ಎರಡೂ ತುದಿಗಳಲ್ಲಿನ ಬಂಪರ್‌ಗಳನ್ನು ಪರಿಷ್ಕರಿಸಲಾಗಿದೆ ಮತ್ತು ಹೊಸ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಲುಕ್ ಹೊಂದಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಹೊಸ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯ ಒಟ್ಟಾರೆ ಸಿಲೂಯೆಟ್ ಸೈಡ್ ಪ್ರೊಫೈಲ್‌ನಲ್ಲಿ ಮಾಡಿದ ಕೆಲವು ಬದಲಾವಣೆಗಳೊಂದಿಗೆ ಒಂದೇ ಆಗಿರುತ್ತದೆ. ಇದು ಹೊಸ 22 ಇಂಚಿನ ವ್ಹೀಲ್ ವಿನ್ಯಾಸವನ್ನು ಪಡೆಯುತ್ತದೆ, ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯ ಒಳಭಾಗವು ಐಷಾರಾಮಿಯಾಗಿದೆ. ಇದರಲ್ಲಿ ವಿಂಟಿಲೆಟಡ್ ಸೀಟುಗಳನ್ನು ಒಳಗೊಂಡಿವೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಇನ್ನು ಈ ಎಸ್‍ಯುವಿಯಲ್ಲಿ 5.0-ಇಂಚಿನ ಟಚ್‌ಸ್ಕ್ರೀನ್ ಟ್ಯಾಬ್ಲೆಟ್ ಅನ್ನು ಹೊಂದಿದೆ. ಎಸ್‍ಯುವಿ ಅನೇಕ ಸೀಟ್ ಗಳ ಸಂರಚನೆಗಳಲ್ಲಿ ಲಭ್ಯವಾಗುತ್ತಿದೆ.ಇದರ ಕ್ಯಾಬಿನ್‌ನ ಮುಂಭಾಗದಲ್ಲಿ, ನವೀಕರಿಸಿದ ಹೈ-ರೆಸಲ್ಯೂಶನ್ 10.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಇನ್ನು ಇದರಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಯುಎಸ್‌ಬಿ-ಸಿ ಪೋರ್ಟ್‌ಗಳು, ಏರ್ ಅಯಾನೈಸರ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ ಮತ್ತು 12-ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಂ ಅನ್ನು ಹೊಂದಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

2021ರ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯಲ್ಲಿ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 542 ಬಿಹೆಚ್‍ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 6.0-ಲೀಟರ್ ಡಬ್ಲ್ಯು 12 ಮೋಟಾರ್ ಆಯ್ಕೆಯನ್ನು ಹೊಂದಿದೆ,

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಈ ಎಂಜಿನ್ 626 ಬಿಹೆಚ್‍ಪಿ ಪವರ್ ಮತ್ತು 900 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ ಮತ್ತು ಇದರಲ್ಲಿ ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್ಗಳನ್ನು ಸಹ ಒಳಗೊಂಡಿದೆ.

ಮತ್ತೊಂದು ಬಹುಕೋಟಿ ಬೆಲೆಯ ಬೆಂಟ್ಲಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

2021ರ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯ ಹಲವಾರು ಫೀಚರ್ ಗಳು ಮತ್ತು ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇನ್ನು ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್, ಲಂಬ್ಯೂರ್ಗಿನಿ ಉರುಸ್ ಮತ್ತು ರೋಲ್ಸ್ ರಾಯ್ಸ್ ಕುಲ್ಲಿನಾನ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಬೆಂಟ್ಲಿ ಬೆಂಟಾಯ್ಗಾ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಅಂಬಾನಿ ಕುಟುಂಬ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಐಷಾರಾಮಿ ಕಾರನ್ನು ಹೊಂದಿದ್ದಾರೆ. ವಾಸ್ತವವಾಗಿ, ಅಂಬಾನಿ ಕುಟುಂಬವು ಮೂರು ಬೆಂಟಾಯ್ಗಾ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Mukesh ambani buys new bentley bentayga facelift suv engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X