ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಸಾಕಷ್ಟು ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದಾರೆ. ಅವರ ಕಾರುಗಳ ಸಂಗ್ರಹವನ್ನು ಈಗ ಜಿಯೋ ಗ್ಯಾರೇಜ್ ಎಂದು ಕರೆಯಲಾಗುತ್ತದೆ. ಗ್ಯಾರೇಜ್ ಈಗಾಗಲೇ ಅನೇಕ ಐಷಾರಾಮಿ ಮತ್ತು ಜನಪ್ರಿಯ ಎಸ್‍ಯುವಿಗಳನ್ನು ಒಳಗೊಂಡಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ ತಮ್ಮ ಕಾರುಗಳ ಸಂಗ್ರಹಕ್ಕೆ ರೂ.13.14 ಕೋಟಿಗಳಷ್ಟು ದುಬಾರಿ ಬೆಲೆಯ ಅಲ್ಟ್ರಾ ಪ್ರೀಮಿಯಂ ರೋಲ್ಸ್ ರಾಯ್ಸ್ ಕಲ್ಲಿನಾನ್ ಅನ್ನು ಖರೀದಿಸಿದ್ದಾರೆ. ಜನವರಿ 31 ರಂದು ದಕ್ಷಿಣ ಮುಂಬೈನ ತಾರ್ಡಿಯೊ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪೆಟ್ರೋಲ್ ರೂಪಾಂತರದಲ್ಲಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಅನ್ನು RIL ನೋಂದಾಯಿಸಿದೆ. 2018 ರಲ್ಲಿ ಬಿಡುಗಡೆಯಾದ ಐಷಾರಾಮಿ ಎಸ್‍ಯುವಿಯ ಬೆಲೆಯ ರೂ.6.75 ಕೋಟಿಯಾಗಿದೆ, ಆದರೂ ವೈಯಕ್ತಿಕ ಗ್ರಾಹಕೀಕರಣವು ಬೆಲೆಯನ್ನು ಹೆಚ್ಚಿಸಿರಬಹುದು ಎಂದು ಊಹಿಸಲಾಗಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಪಿಟಿಐ ವರದಿಯ ಪ್ರಕಾರ, ಅಂಬಾನಿ 564 ಬಿಹೆಚ್‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವಿರುವ V12 ಎಂಜಿನ್ ಸ್ಪೋರ್ಟಿಂಗ್ ಟಸ್ಕನ್ ಸನ್ ಕಲರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾರಿಗೆ ರೂ.12 ಲಕ್ಷ ಮೌಲ್ಯದ ವಿಶೇಷ ನಂಬರ್ ಪ್ಲೇಟ್ ಕೂಡ ಪಡೆಯಲಾಗಿದೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಕಾರ್ ಪ್ಲೇಟ್‌ನಲ್ಲಿರುವ ಸಂಖ್ಯೆಯು '0001' ನೊಂದಿಗೆ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ ಸಾರಿಗೆ ಆಯುಕ್ತರಿಂದ ಲಿಖಿತ ಅನುಮತಿಯೊಂದಿಗೆ, RTO ಕಚೇರಿಗಳು ನೋಂದಣಿ ಮಾರ್ಕ್ 0001 ಅನ್ನು ನಿಯೋಜಿಸಲು ಹೊಸ ಸರಣಿಯನ್ನು ಪ್ರಾರಂಭಿಸಬಹುದು, ಇದಕ್ಕಾಗಿ ಅರ್ಜಿದಾರರು ಸಾಮಾನ್ಯ ಸಂಖ್ಯೆಗೆ ನಿರ್ದಿಷ್ಟಪಡಿಸಿದ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಜನವರಿ 30, 2037 ರವರೆಗೆ ನೋಂದಣಿ ಮಾನ್ಯವಾಗಿರುವ ಐಷಾರಾಮಿ ಎಸ್‍ಯುವಿಗಾಗಿ RIL ನಿಂದ ರೂ.20 ಲಕ್ಷದ ಒಂದು ಬಾರಿ ತೆರಿಗೆಯನ್ನು ಪಾವತಿಸಲಾಗಿದೆ ಮತ್ತು ರಸ್ತೆ ಸುರಕ್ಷತೆ ತೆರಿಗೆಗೆ ರೂ.40,000 ಮೊತ್ತವನ್ನು ಪಾವತಿಸಲಾಗಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬಗ್ಗೆ ಹೇಳುವುದಾದರೆ, ಇದು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲಿನಿಯನ್ ಕಾರು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲ್ಲಿನಾನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿದ್ದು, ಇದು ಈ ಹಿಂದೆ 1930ರಲ್ಲಿ ನಿರ್ಮಾಣವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಕಲ್ಲಿನಾನ್ ಕಾರು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571 ಬಿಎಚ್‌ಪಿ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ. ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನಿಯನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡಿದ್ದು, ಆಪ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಜೊತೆಗೆ ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯ ಇದಲ್ಲಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಕಲಿನಿಯನ್ ಕಾರು ಮಾದರಿಯನ್ನು ರೋಲ್ಸ್ ರಾಯ್ಸ್ ಕಂಪನಿಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ನಮೂದಿಸಿದ್ದು, ಇದಕ್ಕೆ ಕಾರಣ ಈ ಕಾರಿನಲ್ಲಿ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳನ್ನು ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್‌ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೆಯೇ ಬೂಟ್‌ ಸ್ಪೆಸ್ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ. ಹಾಗೆಯೇ ಎಸ್‌ಯುವಿ ಹೆಸರಿಗೆ ತಕ್ಕಂತೆ ಅತಿ ಎತ್ತರದ ಬಾಡಿ ಕಿಟ್ ಹೊಂದಿರುವ ಕಲಿನಿಯನ್ ಕಾರು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರದೊಂದಿಗೆ 3,295ಎಂಎಂ ವೀಲ್ಹ್ ಬೆಸ್ ಸೌಲಭ್ಯ ಹೊಂದಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಜಿಯೋ ಗ್ಯಾರೇಜ್‌ನಲ್ಲಿ ಇನ್ನೂ ಕೆಲವು ಎಸ್‌ಯುವಿಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್, ಲ್ಯಾಂಡ್ ರೋವರ್ ರೇಂಜ್ ರೋವರ್, ಲಂಬೋರ್ಗಿನಿ ಉರುಸ್, ಮರ್ಸಿಡಿಸ್ ಬೆಂಝ್ ಎಎಂಜಿ G63, ಲ್ಯಾಂಡ್ ರೋವರ್ ಡಿಸ್ಕವರಿ ಮತ್ತು ಇನ್ನೂ ಹೆಚ್ಚಿನವುಗಳಿವೆ. ಮುಖೇಶ್ ಅಂಬಾನಿ ಕುಟುಂಬದ ಬಳಿ ಇರುವ ರೋಲ್ಸ್ ರಾಯ್ಸ್ ಕಲಿನನ್, ಲ್ಯಾಂಬೊರ್ಗಿನಿ ಉರುಸ್ ಹಾಗೂ ಟೆಸ್ಲಾ ಮಾಡೆಲ್ ಎಸ್ ಕಾರುಗಳನ್ನು ಈ ಕಂಪನಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗಿದೆ.

ರೂ.13 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಇನ್ನು ಭಾರತದಲ್ಲಿ ಮೆಕ್‌ಲಾರೆನ್ 520 ಎಸ್ ಸ್ಪೈಡರ್ ಕಾರುಗಳನ್ನು ಹೊಂದಿರುವವರಲ್ಲಿ ಅಂಬಾನಿ ಕುಟುಂಬವು ಸಹ ಸೇರಿದೆ. ಅಂಬಾನಿ ಕುಟುಂಬವು ಈ ಕಾರನ್ನು ಖರೀದಿಸಿದ ನಂತರ ದೀರ್ಘಕಾಲದವರೆಗೆ ಬಳಸದೇ ಇರುವುದು ವರದಿಯಾಗಿದೆ. ಈ ಕಾರಿನಲ್ಲಿ ಅಂಬಾನಿ ಕುಟುಂಬದವರು ಅಪರೂಪಕ್ಕೆ ಓಡಾಡುತ್ತಾರೆ.

Article Published On: Monday, February 7, 2022, 20:23 [IST]
English summary
Mukesh ambani buys rs 13 crore worthable rolls royce cullinan to his garage details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+