ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ ಕುಟುಂಬವು ಕಳೆದ ಒಂದು ತಿಂಗಳಲ್ಲಿ ಈಗಾಗಲೇ ಅನೇಕ ಐಷಾರಾಮಿ ವಾಹನಗಳನ್ನು ಖರೀದಿಸಿದೆ. ಇದೀಗ ಅವರು ಮತ್ತೊಂದು ಐಷಾರಾಮಿ ಫೆರಾರಿ ಎಸ್‌ಎಫ್90 ಸ್ಟ್ರಾಡೇಲ್ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಹೊಸ ಫೆರಾರಿ ಎಸ್‌ಎಫ್90 ಸ್ಟ್ರಾಡೇಲ್ ಸೂಪರ್ ಕಾರನ್ನು ಅವರ ಗ್ಯಾರೇಜ್ ನಲ್ಲಿ ಇಡಲಾಗಿದೆ. ಇವರು ಕಾರುಗಳ ಗ್ಯಾರೇಜ್ ಅನ್ನು ಜಿಯೋ ಗ್ಯಾರೇಜ್ ಎಂದು ಕರೆಯಲಾಗುತ್ತದೆ. ಹೊಸ ಫೆರಾರಿ ಎಸ್‌ಎಫ್ 90 ಸ್ಟ್ರಾಡೇಲ್ ಸೂಪರ್ ಸ್ಪೋರ್ಟ್ಸ್ ಕಾರು ಫೆರಾರಿ ರೊಸ್ಸೊ ಕೊರ್ಸಾ ಅಥವಾ ರೇಸಿಂಗ್ ರೆಡ್ ಬಣ್ಣದಿಂದ ಕೂಡಿದೆ. ಇದು ಫೆರಾರಿಯ ಐತಿಹಾಸಿಕ ಬಣ್ಣವಾಗಿದೆ. ಈ ಕಾರು ಜಿಯೋ ಗ್ಯಾರೇಜ್ ಪ್ರವೇಶಿಸುವಾಗ ಕಾಣಿಸಿಕೊಂಡಿದೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಹೊಸ ಸೂಪರ್ ಸ್ಪೋರ್ಟ್ಸ್ ಕಾರಿನ ಚಿತ್ರಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅತ್ಯಾಧುನಿಕ ತಂತ್ರಜ್ಙಾನಗಳನ್ನು ಈ ಫೆರಾರಿ ಎಸ್‌ಎಫ್90 ಸ್ಟ್ರಾಡೇಲ್ ಕಾರು ಒಳಗೊಂಡಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಹೊಸ ಫೆರಾರಿ ಎಸ್‌ಎಫ್ 90 ಸ್ಟ್ರಾಡೇಲ್ ಕಾರಿನಲ್ಲಿ ಟ್ವಿನ್-ಟರ್ಬೋಚಾರ್ಜ್ಡ್, 4.0-ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 780 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 220 ಬಿಹೆಚ್‍ಪಿ ಉತ್ಪಾದಿಸುವ ಮೂರು ಎಲೆಕ್ಟ್ರಿಕ್ ಮೋಟರ್‌ಗಳನ್ನು ಜೋಡಿಸಲಾಗಿದೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಎಲ್ಲಾ ಸೇರಿ ಒಟ್ಟು1000 ಬಿಹೆಚ್‍ಪಿ ಪವರ್ ಆಗಿದೆ. ಫೆರಾರಿ ಎಸ್‌ಎಫ್ 90 ಸ್ಟ್ರಾಡೇಲ್ ಪವರ್ ಫುಲ್ ಸೂಪರ್ ಸ್ಪೋರ್ಟ್ಸ್ ಕಾರು ಆಗಿದೆ. ಈ ಸೂಪರ್ ಸ್ಪೋರ್ಟ್ಸ್ ಕಾರು ಕೇವಲ 2.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಇನ್ನು ಕೇವಲ 6.7 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ.ಫೆರಾರಿ ಎಸ್‌ಎಫ್ 90 ಸ್ಟ್ರಾಡೇಲ್ ಕಾರು 340 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಕಾರಿನ ಎಂಜಿನ್ ಅನ್ನು 8-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಸೂಪರ್ ಸ್ಪೋರ್ಟ್ಸ್ ಕಾರಿನಲ್ಲಿ ರಿವರ್ಸ್ ಗೇರ್ ಹೊಂದಿಲ್ಲ. ಬದಲಾಗ ಮುಂಭಾಗದ ಎರಡು ಚಕ್ರಗಳು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ನಿಯಂತ್ರಿಸಲ್ಪಡುತ್ತವೆ, ಅದು ರಿವರ್ಸ್ ಗೇರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಟಾರ್ಕ್ ವೆಕ್ಟರಿಂಗ್ ಅನ್ನು ಸಹ ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಫೆರಾರಿಯಿಂದ ಬಂದ ಮೊದಲ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ (ಪಿಎಚ್‌ಇವಿ) ಎಸ್‌ಎಫ್90 ಆಗಿದೆ ಈ ಕಾರಣದಿಂದಾಗಿ, ಸೂಪರ್ ಕಾರ್ ಎಲೆಕ್ಟ್ರಿಕ್ ಪವರ್ ನಲ್ಲಿ ಮಾತ್ರ ಚಲಿಸಲ್ಲ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಕಾರಿನಲ್ಲಿ ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 26 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಎಲೆಕ್ಟ್ರಿಕ್ ಮೋಟರ್‌ಗಳು 209 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಎಸ್‌ಎಫ್90 ಹಿಂದಿನ ಚಕ್ರ ಚಾಲನೆಯ ಕಾರು. ಆದರೆ ಮುಂಭಾಗದ ಮೋಟರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿರುವುದರಿಂದ ಮತ್ತು ಹಿಂಭಾಗದ ಆಕ್ಸಲ್‌ನಲ್ಲಿರುವ ಮೂರನೇ ಮೋಟರ್‌ಗೆ ಪವರ್ ಅನ್ನು ವರ್ಗಾಯಿಸುವುದರಿಂದ 1000 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಹೊಸ ಫೆರಾರಿ ಎಸ್‌ಎಫ್90 ಸ್ಟ್ರಾಡೇಲ್ ಸೂಪರ್ ಕಾರಿನಲ್ಲಿ 4 ಡ್ರೈವಿಂಗ್ ಮೋಡ್‌ಗಳನ್ನು ನೀಡಿದ್ದಾರೆ. ಭಾರತದಲ್ಲಿ ಫೆರಾರಿ ಎಸ್‌ಎಫ್90 ಸ್ಟ್ರಾಡೇಲ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.50 ಕೋಟಿಯಾಗಿದೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ರೋಲ್ಸ್ ರಾಯ್ಸ್ ಫ್ಯಾಂಟಮ್ ಎಕ್ಸ್ಟಡ್ ವೀಲ್‌ಬೇಸ್ ಅನ್ನು ಹೊಂದಿದ್ದಾರೆ. ಇದರ ಬೆಲೆಯು ರೂ.13.5 ಕೋಟಿಯಾಗಿದೆ. ಇನ್ನು ಅಂಬಾನಿ ಕುಟುಂಬವು ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆ ಅಥವಾ ಡಿಎಚ್‌ಸಿಯನ್ನು ಸಹ ಹೊಂದಿದೆ, ಇದು ವಿಶ್ವದ ಅತ್ಯಂತ ದುಬಾರಿ ಕನ್ವರ್ಟಿಬಲ್ ಕಾರುಗಳಲ್ಲಿ ಒಂದಾಗಿದೆ.

ಐಷಾರಾಮಿ ಫೆರಾರಿ ಸೂಪರ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ ಜಿಯೋ ಗ್ಯಾರೇಜ್ ನಲ್ಲಿ ಬ್ರಿಟಿಷ್ ಐಷಾರಾಮಿ ಕಾರು ತಯಾರಕರಾದ ರೋಲ್ಸ್ ರಾಯ್ಸ್ ಅವರ ಮೂರು ಕುಲ್ಲಿನಾನ್ ಎಸ್‌ಯುವಿಗಳನ್ನು ಹೊರತುಪಡಿಸಿ, ಅಂಬಾನಿ ಕುಟುಂಬವು ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಅನ್ನು ಸಹ ಹೊಂದಿದೆ.

Most Read Articles

Kannada
English summary
Mukesh Ambani Family Adds New Ferrari SF90 Stradale Supercar. Read In Kananda,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X