ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಮಾಜಿ ಕಾರ್ ರೇಸರ್ ಹಾಗೂ ಬಹು ಮುಖ ಪ್ರತಿಭೆಯ ನಟ ಇಜ್ಜಿ ಉಮಾಮಹೇಶ್ ಅಕ್ಟೋಬರ್ 16ರಂದು ಚೆನ್ನೈನಲ್ಲಿ ನಿಧನರಾದರು. ಅವರ ನಿಧನವು ಮೋಟಾರು ರೇಸಿಂಗ್ ಜಗತ್ತಿಗೆ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಗಣ್ಯರಿಗೂ ಆಘಾತವನ್ನುಂಟು ಮಾಡಿದೆ.

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಅವರು ತಮ್ಮ ಸಾವಿಗೂ ಮುನ್ನ ಸ್ವತಃ ಸಂತಾಪ ಪತ್ರವೊಂದನ್ನು ಬರೆದಿದ್ದರು. ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಮಾಮಹೇಶ್ ಹಲವಾರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಜೊತೆಗೆ ಬುಧ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಫಾರ್ಮುಲಾ ಒನ್ ರೇಸಿಂಗ್ ಅಸೋಸಿಯೇಶನ್‌ನ ಅಂಡರ್-ಸೆಕ್ರೆಟರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ತಮಿಳುನಾಡಿನ ಮೋಟಾರು ರೇಸಿಂಗ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದ ಉಮಾಮಹೇಶ್ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದರು. ಇದು ಮಾತ್ರವಲ್ಲದೇ ನಾಟಕ ಹಾಗೂ ಸಿನೆಮಾಗಳಲ್ಲಿ ನಟರಾಗಿಯೂ ಹೆಸರು ಮಾಡಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಉಮಾ ಮಹೇಶ್ ರವರನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬದುಕುಳಿಯುವ ಸಾಧ್ಯತೆ ಕೇವಲ 10%ನಷ್ಟು ಮಾತ್ರ ಎಂದು ವೈದ್ಯರು ತಿಳಿಸಿದ್ದರು. ತಾವು ಸಾವಿಗೆ ಸಮೀಪವಿರುವುದನ್ನು ಅರಿತ ಉಮಾಮಹೇಶ್ ಶಸ್ತ್ರಚಿಕಿತ್ಸೆಗೂ ಮುನ್ನ ಸ್ವತಃ ಎರಡು ಸಂತಾಪ ಪತ್ರಗಳನ್ನು ಬರೆದರು.

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಈ ಸಂತಾಪ ಪತ್ರಗಳನ್ನು ತಾವು ಸತ್ತ ನಂತರ ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಅವರು ತಮ್ಮ ಕುಟುಂಬಕ್ಕೆ ಮನವಿ ಮಾಡಿಕೊಂಡರು. ಉಮಾ ಮಹೇಶ್ ಚಿಕಿತ್ಸೆಗೂ ಮುನ್ನವೇ ಸಾವನ್ನಪಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ದುರಂತವೆಂದರೆ ಅವರು ತಮ್ಮ ಹುಟ್ಟು ಹಬ್ಬಕ್ಕೆ ಒಂದು ದಿನ ಮುಂಚಿತರಾಗಿ ನಿಧನರಾದರು. ಅವರ ಕೋರಿಕೆಯಂತೆ ಅವರ ಕುಟುಂಬವು ಅವರು ಬರೆದ ಸಂತಾಪ ಪತ್ರವನ್ನು ಅವರ ಸಾಮಾಜಿಕ ಜಾಲತಾಣಗಳ ಪೇಜ್ ಗಳಲ್ಲಿ ಪೋಸ್ಟ್ ಮಾಡಿದೆ.

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಈ ಪತ್ರಗಳಲ್ಲಿ ಅವರು ತಮ್ಮ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. ನನ್ನ ಕೆಲಸವು ವೃತ್ತಿಪರ ವಿವರಗಳ ಜೊತೆಗೆ ಮುಗಿದಿದೆ. ನನ್ನ ಜೊತೆಗಿರುವವರಿಗೆ ಯಾವುದೇ ಹ್ಯಾಂಗೊವರ್ ಇರುವುದಿಲ್ಲವೆಂದು ಭಾವಿಸುತ್ತೇನೆ. ಚೆನ್ನಾಗಿ ಬದುಕಿ. ಜೀವನವನ್ನು ಆನಂದಿಸಿ ಎಂದು ಹೇಳಿದ್ದಾರೆ. ಉಮಾಮಹೇಶ್ ತಮ್ಮ ದೇಹದ ಭಾಗಗಳನ್ನು ದಾನ ಮಾಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಅವರ ಫೇಸ್‌ಬುಕ್ ಪೇಜ್ ನಲ್ಲಿ ಅವರು ಬರೆದ ಸಂತಾಪದ ಪತ್ರಗಳನ್ನು ಪ್ರಕಟಿಸಲಾಗಿದೆ. ಅದರಲ್ಲಿ ಅವರು ಕಾರುಗಳನ್ನು ಎಷ್ಟು ಪ್ರೀತಿಸುತ್ತಾರೆಂದು ಬರೆದಿದ್ದಾರೆ. ತಮ್ಮ ಜೀವನವನ್ನು ವಿಂಟೇಜ್ ಕಾರಿಗೆ ಹೊಲಿಸಿಕೊಂಡಿರುವ ಅವರು ನನ್ನ ವಿಂಟೇಜ್ ವಾಹನದ ನವೀಕರಣ ಕಾರ್ಯ ನಡೆಯಿತು. ಭಾರತದ ಅತ್ಯುತ್ತಮ ಯಂತ್ರಗಳು, ಆಧುನಿಕ ಪರಿಕರಗಳು ಹಾಗೂ ಪರಿಣತರು ಈ ವಾಹನವನ್ನು ರಿಸ್ಟೋರ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಸಾವಿಗೂ ಮುನ್ನ ಸಂತಾಪ ಪತ್ರ ಬರೆದ ಬಹುಮುಖ ಪ್ರತಿಭೆಯ ರೇಸರ್

ಈ ವಾಹನವು 72 ವರ್ಷಗಳಿಂದ ನಡೆಯುತ್ತಿದೆ. ಅತಿಯಾದ ಉಷ್ಣತೆ, ಶೀತ ಸೇರಿದಂತೆ ಎಲ್ಲಾ ಸಂದರ್ಭಗಳಲ್ಲಿಯೂ ಚೆನ್ನಾಗಿ ಕೆಲಸ ಮಾಡಿದೆ. ಇವುಗಳು ಖಂಡಿತವಾಗಿಯೂ ನೆನಪಿನಲ್ಲಿ ಉಳಿಯುತ್ತವೆ ಎಂದು ಅವರು ಸಂತಾಪ ಪತ್ರದಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ಗಳಿಗೆ ಅವರ ಸ್ನೇಹಿತರು, ಸಹೋದ್ಯೋಗಿಗಳು, ಮೋಟಾರು ಕ್ರೀಡಾ ಉದ್ಯಮದ ಸದಸ್ಯರು ಸೇರಿದಂತೆ ಹಲವರು ಕಾಮೆಂಟ್ ಮಾಡಿದ್ದಾರೆ.

ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Multi Talented racer Ejji Umamahesh writes obituary letter before death. Read in Kannada.
Story first published: Monday, October 19, 2020, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X