ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಸಂಚಾರಿ ನಿಯಮಗಳ ಉಲ್ಲಂಘನೆಯು ದೇಶಾದ್ಯಂತ ಮಾರಣಾಂತಿಕ ವೈರಸ್‍‍ನಂತೆ ಹರಡುತ್ತಿದೆ. ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಂಚಾರಿ ನಿಯಮಗಳ ಉಲ್ಲಂಘನೆಯು ಶಾಶ್ವತವಾಗಿ ಕೊನೆಯಾಗುತ್ತಿಲ್ಲ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಈ ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಸಾವನ್ನಪ್ಪುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಪೊಲೀಸರಿಗೆ ತಲೆನೋವು ತಂದಿದೆ. ಈ ಕಾರಣಕ್ಕೆ ಪೊಲೀಸರು ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಿರುತ್ತಾರೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಇದರ ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಕಡಿಮೆಗೊಳಿಸುವ ಕಾರಣಕ್ಕೆ ಕೇಂದ್ರ ಸರ್ಕಾರವು ದಂಡದ ಪ್ರಮಾಣವನ್ನು ಹೆಚ್ಚಿಸಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಕಳೆದ ವರ್ಷದ ಸೆಪ್ಟೆಂಬರ್ 1ರಿಂದ ಜಾರಿಗೆ ತಂದಿದೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಆದರೂ ಸಹ ಕೆಲವರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಈಗ ಇಂತಹುದೇ ಘಟನೆಯೊಂದರಲ್ಲಿ ತ್ರಿಪಲ್ ರೈಡಿಂಗ್ ಮಾಡುತ್ತಿದ್ದ ಯುವಕರು ಕರ್ತವ್ಯನಿರತ ಪೇದೆಯೊಬ್ಬರಿಗೆ ಗುದ್ದಿದ್ದಾರೆ. ಈ ಘಟನೆಯು ಮುಂಬೈ ನಗರದಲ್ಲಿ ನಡೆದಿದೆ. ಈ ಘಟನೆಯು, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಸಿಸಿಟಿವಿಯ ದೃಶ್ಯಗಳು ಸೋರಿಕೆಯಾಗಿದ್ದು, ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿವೆ. ಈ ದೃಶ್ಯದಲ್ಲಿ ಪೊಲೀಸ್ ಒಬ್ಬರು ರಸ್ತೆ ಮಧ್ಯದಲ್ಲಿ ನಿಂತು ಟ್ರಿಪಲ್ ರೈಡಿಂಗ್‍‍ನಲ್ಲಿ ಬರುತ್ತಿದ್ದವರನ್ನು ತಡೆಯಲು ಮುಂದಾಗಿದ್ದಾರೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಬೈಕ್ ಅನ್ನು ಆ ಕಡೆಯಿಂದ ಈ ಕಡೆಗೆ ಅಲುಗಾಡಿಸಿದ್ದಾರೆ. ನಂತರ ಬೈಕಿನ ನಿಯಂತ್ರಣ ಸಿಗದೇ ತಡೆಯಲು ಬಂದ ಪೊಲೀಸ್‍‍ಗೆ ಗುದ್ದಿದ್ದಾರೆ. ಈ ಘಟನೆಯಲ್ಲಿ ಆ ಪೊಲೀಸ್ ಹಾಗೂ ಬೈಕಿನಲ್ಲಿದ್ದ ಯುವಕರು ಗಾಯಗೊಂಡಿದ್ದಾರೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಪೊಲೀಸ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ವಾಹನಗಳನ್ನು ತಡೆಯಲು ಪೊಲೀಸರು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್‍‍ಗಳನ್ನು ಬಳಸುವಂತೆ ಸೂಚಿಸಲಾಗಿದೆ. ಆದರೆ ಬಹುತೇಕ ಪೊಲೀಸರು ಈ ನಿಯಮಗಳನ್ನು ಪಾಲಿಸುವುದಿಲ್ಲ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಕಂಡು ಬಂದ ತಕ್ಷಣವೇ ರಸ್ತೆ ಮಧ್ಯೆ ನಿಲ್ಲುತ್ತಾರೆ. ನಿಯಮಗಳನ್ನು ಉಲ್ಲಂಘಿಸುವವರಿಗಾಗಿಯೇ ಇ-ಚಲನ್ ವ್ಯವಸ್ಥೆಯನ್ನು ಸಹ ಜಾರಿಗೆ ತರಲಾಗಿದೆ. ಇದರಿಂದಾಗಿ ಅಪಘಾತಗಳನ್ನು ತಪ್ಪಿಸಬಹುದು.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ವಾಹನ ಚಾಲಕರು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಗುದಿಯುವುದು ತಪ್ಪುತ್ತದೆ. ಈ ಘಟನೆಯಲ್ಲಿ ರಸ್ತೆ ಮಧ್ಯೆದಲ್ಲಿರುವ ಪೊಲೀಸ್, ರಸ್ತೆಯಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಅನ್ನು ಸರಿಪಡಿಸಲು ನಿಂತಿರುವಂತೆ ಕಾಣುತ್ತದೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಟ್ರಪಲ್ ರೈಡಿಂಗ್ ಮಾಡುತ್ತಿದ್ದವರನ್ನು ಕಂಡ ತಕ್ಷಣ ಪೊಲೀಸ್ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಬೈಕಿನ ನಿಯಂತ್ರಣ ಸಿಗದೇ ಬೈಕ್ ಸವಾರನು ಪೊಲೀಸ್‍‍ಗೆ ಗುದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಪೊಲೀಸ್ ಅನ್ನು ಮುಂಬೈನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸುವವರನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿಯುವಂತಿಲ್ಲವೆಂಬ ನಿಯಮವಿದೆ. ಇದರಿಂದಾಗಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡುವವರಿಗೆ ಮಾತ್ರವಲ್ಲದೇ ಸ್ಥಳದಲ್ಲಿರುವ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ.

ಟ್ರಿಪಲ್ ರೈಡಿಂಗ್‍‍‍ನಲ್ಲಿ ಬಂದು ಪೊಲೀಸಪ್ಪನಿಗೆ ಗುದ್ದಿದ ಯುವಕರು

ಪೊಲೀಸರಾಗಲಿ, ಸಾರ್ವಜನಿಕರಾಗಲಿ ನಿಯಮಗಳನ್ನು ಪರಿಗಣಿಸುತ್ತಿಲ್ಲ. ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಸಹ ವಾಹನ ಸವಾರರು ಪೊಲೀಸರಿಗೆ ಗುದ್ದಿದ್ದ ಹಲವಾರು ಘಟನೆಗಳು ವರದಿಯಾಗಿವೆ.

Article Published On: Wednesday, January 15, 2020, 12:52 [IST]
English summary
Mumbai cop injured by triple riders. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+