ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ವಾಹನಗಳು ಜನರ ಅಗತ್ಯ ವಸ್ತುಗಳಾಗಿ ಮಾರ್ಪಟ್ಟಿವೆ. ಪ್ರತಿದಿನ ಕಾರು, ಬೈಕ್ ಹಾಗೂ ಸ್ಕೂಟರ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಓಡಾಟಕ್ಕೆ ಜನರು ವಾಹನಗಳನ್ನೇ ನೆಚ್ಚಿಕೊಂಡಿರುತ್ತಾರೆ. ಒಂದೊಮ್ಮೆ ಆ ವಾಹನಗಳ ಕಳ್ಳತನವಾದರೆ ಅದರಿಂದಾಗುವ ನಷ್ಟ ಅಷ್ಟಿಷ್ಟಲ್ಲ.

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ವಾಹನ ಕಳುವು ಹಣಕಾಸಿನ ನಷ್ಟಕ್ಕೆ ಕಾರಣವಾಗುವುದರ ಜೊತೆಗೆ ಆ ವಾಹನಗಳ ಮಾಲೀಕರು ಪೊಲೀಸ್ ಠಾಣೆ, ಎಫ್‌ಐಆರ್ ಎಂದು ಕೋರ್ಟು, ಕಚೇರಿ ಅಲೆಯಬೇಕಾಗುತ್ತದೆ. ಜೊತೆಗೆ ಪೊಲೀಸರು ಸಹ ವಾಹನಗಳ್ಳರ ಪತ್ತೆ ಹಚ್ಚಲು ಹರಸಾಹಸ ಪಡಬೇಕಾಗುತ್ತದೆ. ವಾಹನ ಕಳೆದುಕೊಂಡವರು ಕಳೆದು ಕೊಂಡ ವಾಹನವನ್ನು ಹುಡುಕುವಷ್ಟರಲ್ಲಿ ಅಥವಾ ಹೊಸ ವಾಹನವನ್ನು ಖರೀದಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ.

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಕಳುವಾದ ವಾಹನಗಳು ಸರಿಯಾದ ಸಮಯಕ್ಕೆ ಪತ್ತೆಯಾದರೆ ಅದರಿಂದಾಗುವ ಖುಷಿ ಹೇಳ ತೀರದು. ಆದರೆ ಬಹುತೇಕ ವಾಹನ ಕಳ್ಳತನದ ಪ್ರಕರಣಗಳಲ್ಲಿ ವಾಹನಗಳು ಪತ್ತೆಯಾಗುವುದೇ ಇಲ್ಲ. ಒಂದು ವೇಳೆ ಪತ್ತೆಯಾಗಿ ಅವುಗಳನ್ನು ವಾಪಸ್ ಪಡೆದರೆ, ಪಡೆದವರು ನಿಜಕ್ಕೂ ಅದೃಷ್ಟವಂತರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಇತ್ತೀಚೆಗೆ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕೆಟಿಎಂ ಬೈಕಿನ ಮಾಲೀಕರು ತಮ್ಮ ಕಳುವಾದ ಬೈಕ್ ಅನ್ನು ಕೇವಲ 30 ಗಂಟೆಗಳಲ್ಲಿ ಮರಳಿ ಪಡೆದಿದ್ದಾರೆ. ಈ ಬೈಕಿನ ಮಾಲೀಕರು ಬೈಕಿನ ಕೀಯನ್ನು ಯಾವುದೋ ಸ್ಥಳದಲ್ಲಿ ಬಿಟ್ಟಿದ್ದರು.

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಇದರಿಂದ ಕಳ್ಳರಿಗೆ ಬೈಕ್ ಕದಿಯುವುದು ಸುಲಭವಾಯಿತು. ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಈ ಅಪರಾಧಿಗಳನ್ನು ಹಿಡಿದಿಲ್ಲ. ಇದರಿಂದಾಗಿ ಬೈಕ್ ಕದ್ದವರು ಬೈಕ್ ಅನ್ನು ಯಾವ ಕಾರಣಕ್ಕೆ ಕದ್ದರು ಎಂಬುದು ತಿಳಿದು ಬಂದಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಈ ಬೈಕ್ ಅನ್ನು ಮೋಜಿಗಾಗಿ ಕದ್ದಿರುವ ಸಾಧ್ಯತೆಗಳಿವೆ. ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಪ್ರೀಮಿಯಂ ಬೈಕುಗಳನ್ನು ಕದ್ದಿದ್ದ ಯುವಕರು ಅವುಗಳನ್ನು ಚಾಲನೆ ಮಾಡಿ ಬಿಟ್ಟು ಹೋದ ಬಗ್ಗೆ ವರದಿಗಳಾಗಿದ್ದವು. ಬೈಕ್‌ಗಳಲ್ಲಿರುವ ಪೆಟ್ರೋಲ್ ಖಾಲಿಯಾದ ನಂತರ ಅವರು ಆ ಬೈಕುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ.

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಆದರೆ ವೃತ್ತಿಪರ ವಾಹನಗಳ್ಳರು ಹಣ ಗಳಿಸುವ ಸಲುವಾಗಿ ಬೈಕುಗಳನ್ನು ಕದ್ದು, ಅವುಗಳನ್ನು ದೂರದ ಊರುಗಳಲ್ಲಿ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಆ ಬೈಕುಗಳ ಬಿಡಿಭಾಗಗಳನ್ನು ಬ್ಲಾಕ್ ಮಾರ್ಕೆಟ್'ನಲ್ಲಿ ಮಾರಾಟ ಮಾಡುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಆದರೆ 30 ಗಂಟೆಗಳ ಒಳಗೆ ಪತ್ತೆಯಾದ ಬೈಕ್ ಅನ್ನು ಮೋಜಿನ ಚಾಲನೆಗಾಗಿ ಕದ್ದು, ಚಾಲನೆ ಮಾಡಿದ ನಂತರ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ.ಪೊಲೀಸರು ಬೈಕ್ ಪತ್ತೆಯಾದ ಜಾಗದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಖದೀಮರು ಸೆರೆ ಸಿಕ್ಕ ನಂತರ ಅವರ ಉದ್ದೇಶವೇನು ಎಂಬುದು ತಿಳಿಯಲಿದೆ.

ಕಳುವಾದ 30 ಗಂಟೆಗಳಲ್ಲಿ ಪತ್ತೆಯಾಯ್ತು ಕೆಟಿಎಂ ಬೈಕ್

ಕಳುವಾದ ತಮ್ಮ ಬೈಕ್ ಅನ್ನು ತ್ವರಿತವಾಗಿ ಪತ್ತೆ ಹಚ್ಕಿದ ಮುಂಬೈನ ಜುಹು ಠಾಣೆಯ ಪೊಲೀಸರಿಗೆ ಬೈಕ್ ಮಾಲೀಕರು ಧನ್ಯವಾದ ಸಲ್ಲಿಸಿದ್ದಾರೆ. ಕಳುವಾದ ಬೈಕ್ ಅನ್ನು ಪತ್ತೆಹಚ್ಚಲು ಪೊಲೀಸರು ತಮ್ಮ ಮಾಹಿತಿದಾರರ ಜಾಲವನ್ನು ಬಳಸಿದ್ದಾರೆ. ಈ ಚಿತ್ರಗಳನ್ನು ಸುಜಯ್ ಶಿವಂ ವಾರಿಯರ್ ರವರಿಂದ ಪಡೆಯಲಾಗಿದೆ.

Most Read Articles

Kannada
English summary
Mumbai cops recover stolen KTM bike within 30 hours. Read in Kannada.
Story first published: Thursday, February 18, 2021, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X