ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಮಹೀಂದ್ರಾ ಸ್ಕಾರ್ಪಿಯೋ ಭಾರತೀಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಸ್ಕಾರ್ಪಿಯೋ ಅಡ್ವೆಂಚರ್ ಪ್ರಯಾಣ ಪ್ರಿಯರ ನೆಚ್ಚಿನ ವಾಹನವಾಗಿದೆ. ಮುಂಬೈ ನಗರ ಪೊಲೀಸರು ಸ್ಕಾರ್ಪಿಯೋ ಕಾರ್ ಅನ್ನು ವಶಪಡಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಮುಂಬೈ ಪೊಲೀಸರು ಯಾವ ಕಾರಣಕ್ಕೆ ಸ್ಕಾರ್ಪಿಯೋ ಕಾರ್ ಅನ್ನು ವಶ ಪಡಿಸಿಕೊಂಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ವಾಸ್ತವವಾಗಿ ಮುಂಬೈ ಪೊಲೀಸರು ವಶ ಪಡಿಸಿಕೊಂಡಿರುವ ಸ್ಕಾರ್ಪಿಯೋ ಕಾರು ಮಿಲಿಟರಿ ಕಾರಿನಂತೆ ಕಾಣುತ್ತದೆ. ಈ ಕಾರಣಕ್ಕಾಗಿಯೇ ಪೊಲೀಸರು ಮಹೀಂದ್ರಾ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಮಹೀಂದ್ರಾ ಸ್ಕಾರ್ಪಿಯೋವನ್ನು ಮಿಲಿಟರಿ ವಾಹನದಂತೆ ಮಾಡಿಫೈ ಮಾಡಲಾಗಿದೆ. ಮಿಲಿಟರಿ ವಾಹನದಂತೆ ಮಾಡಿಫೈ ಗೊಂಡಿರುವ ಕಾರಣಕ್ಕೆ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಮುಂಬೈ ಪೊಲೀಸರ ವಶದಲ್ಲಿರುವ ಸ್ಕಾರ್ಪಿಯೋ ಕಾರು ಮಿಲಿಟರಿ ವಾಹನದಂತೆ ಕಾಣುವ ವೈಯಕ್ತಿಕ ವಾಹನವಾಗಿದೆ. ಈ ವಿನ್ಯಾಸವನ್ನು ಮಿಲಿಟರಿ ವಾಹನಗಳಲ್ಲಿ ಮಾತ್ರ ಬಳಸಬೇಕೆಂಬ ನಿಯಮವಿದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಮಿಲಿಟರಿ ಬಣ್ಣ ಹಾಗೂ ವಿನ್ಯಾಸವನ್ನು ಭಾರತೀಯ ಸೇನೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕಂಪನಿಯಾಗಲಿ ಅಥವಾ ವ್ಯಕ್ತಿಯಾಗಲಿ ಬಳಸುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿ ಮಹೀಂದ್ರಾ ಸ್ಕಾರ್ಪಿಯೋ ಕಾರ್ ಅನ್ನು ಮಿಲಿಟರಿ ವಾಹನದಂತೆಯೇ ವಿನ್ಯಾಸಗೊಳಿಸಲಾಗಿದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಮುಂಬೈ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕೆಲವು ಯುವಕರು ಮಿಲಿಟರಿ ನೋಟವನ್ನು ಹೊಂದಿರುವ ಸ್ಕಾರ್ಪಿಯೋ ಕಾರ್ ಅನ್ನು ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಸ್ಕಾರ್ಪಿಯೋ ಕಾರಿನಲ್ಲಿದ್ದ ಒಬ್ಬರೂ ಸಹ ಮಿಲಿಟರಿ ಸಮವಸ್ತ್ರವನ್ನು ಧರಿಸಿರಲಿಲ್ಲ. ಅನುಮಾನಗೊಂಡ ಪೊಲೀಸರು ಇದರ ಬಗ್ಗೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಈ ಕಾರು ಮಿಲಿಟರಿ ನೋಟವನ್ನು ಹೊಂದಿರುವ ವೈಯಕ್ತಿಕ ವಾಹನವೆಂದು ತಿಳಿದುಬಂದಿದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಅನುಮತಿ ಪಡೆಯದೇ ವೈಯಕ್ತಿಕ ವಾಹನದಲ್ಲಿ ಮಿಲಿಟರಿ ಬಣ್ಣವನ್ನು ಬಳಸಿದ ಕಾರಣಕ್ಕೆ ಸ್ಕಾರ್ಪಿಯೋ ಕಾರ್ ಆನ್ನು ವಶಕ್ಕೆ ಪಡೆಯಲಾಗಿದೆ. ಆಲಿವ್ ಗ್ರೀನ್ ಬಣ್ಣವನ್ನು ಭಾರತದಲ್ಲಿ ಮಿಲಿಟರಿ ವಾಹನಗಳಲ್ಲಿ ಮಾತ್ರ ಬಳಸಲಾಗುತ್ತದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಈ ಬಣ್ಣವನ್ನು ಪ್ರತ್ಯೇಕವಾಗಿ ದೇಶದ ಭದ್ರತಾ ಪಡೆಗಳಿಗಾಗಿಯೇ ಮೀಸಲಿಡಲಾಗಿದೆ. ಮೊದಲೇ ಹೇಳಿದಂತೆ ಸಾರ್ವಜನಿಕರು ಹಾಗೂ ಇತರ ಸಂಸ್ಥೆಗಳು ಈ ಬಣ್ಣವನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಶೇಷ ಮಿಲಿಟರಿ ಬಣ್ಣಗಳೊಂದಿಗೆ ರಫ್ತು ಮಾಡಲಾದ ವಾಹನಗಳು

ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಕೆಲವು ದ್ವಿಚಕ್ರ ವಾಹನಗಳನ್ನು ಬ್ಯಾಟಲ್ ಗ್ರೀನ್‌ ಬಣ್ಣದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ. ಈ ವಾಹನಗಳನ್ನು ಭಾರತದಲ್ಲಿ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಈ ವಾಹನಗಳು ಭಾರತದಲ್ಲಿ ಮಾರಾಟವಾಗುವುದಿಲ್ಲ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಭಾರತದಲ್ಲಿ ಮಹೀಂದ್ರಾಾ ಅಂಡ್ ಮಹೀಂದ್ರಾಾ, ಜಾವಾ ಹಾಗೂ ಜೀಪ್ ಕಂಪನಿಗಳು ಸರ್ಕಾರದ ಅನುಮತಿಯೊಂದಿಗೆ ಆಲಿವ್ ಗ್ರೀನ್ ಬಣ್ಣದ ವಾಹನಗಳನ್ನು ಮಾರಾಟ ಮಾಡುತ್ತವೆ. ಗಮನಿಸಬೇಕಾದ ಸಂಗತಿಯೆಂದರೆ ಈ ವಾಹನಗಳು ಸೇನಾ ವಾಹನಕ್ಕಿಂತ ಸ್ವಲ್ಪ ವಿಭಿನ್ನ ನೋಟವನ್ನು ಹೊಂದಿವೆ.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಈ ಕಾರಣಕ್ಕೆ ಸರಿಯಾದ ಅನುಮತಿಯನ್ನು ಪಡೆದಿದ್ದರೆ ಮಾತ್ರ ಮಿಲಿಟರಿ ವಾಹನದಂತೆ ಕಾಣುವ ಕಾರು ಅಥವಾ ಬೈಕ್ ಗಳನ್ನು ಬಳಸಬಹುದು. ಸರಿಯಾದ ಪರವಾನಗಿ ಅಥವಾ ದಾಖಲೆಗಳಿಲ್ಲದಿದ್ದರೆ ಅಂತಹ ವಾಹನಗಳನ್ನು ಪೊಲೀಸರು ವಶ ಪಡಿಸಿಕೊಳ್ಳಬಹುದು.

ಮಿಲಿಟರಿ ವಾಹನದಂತೆ ಮಾಡಿಫೈಗೊಂಡಿದ್ದ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದ ಪೊಲೀಸರು

ಭಾರತದಲ್ಲಿ ಮಾಡಿಫೈ ಗೊಂಡ ವಾಹನಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಈಗ ಮುಂಬೈ ಪೊಲೀಸರ ವಶದಲ್ಲಿರುವ ಸ್ಕಾರ್ಪಿಯೋ ಕಾರು ಮಾಲೀಕರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Mumbai cops seizes scorpio car which was modified like military vehicle details
Story first published: Wednesday, August 4, 2021, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X