ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ದಿಲೀಪ್ ಛಾಬ್ರಿಯಾ ಪ್ರಕರಣವನ್ನು ಭೇದಿಸಿದ ನಂತರ ಮುಂಬೈ ಅಪರಾಧ ವಿಭಾಗದ ಪೊಲೀಸರು ಮತ್ತೊಂದು ದೊಡ್ಡ ಹಗರಣವನ್ನು ಬಯಲಿಗೆಳೆದಿದ್ದಾರೆ. ಈ ಬಾರಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಕಾರು ಸಾಲ ವಂಚನೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿರುವ ಪೊಲೀಸರು ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಮಿನಿ ಸೇರಿದಂತೆ 19 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಕಾರುಗಳ ಬೆಲೆ ಸುಮಾರು ರೂ.7 ಕೋಟಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದೂರು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್ ಮೌರ್ಯ ಎಂಬಾತನನ್ನು ಬಂಧಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಪ್ರದೀಪ್ ಮೌರ್ಯ ಹೆಚ್‌ಡಿಎಫ್‌ಸಿ ಬ್ಯಾಂಕಿನ ನೌಕರನಾಗಿದ್ದು, ವಾಹನ ಸಾಲಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳ ಬಗ್ಗೆ ಚೆನ್ನಾಗಿ ತಿಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರದೀಪ್ ಮೌರ್ಯ ಬ್ಯಾಂಕುಗಳಿಂದ ವಾಹನ ಸಾಲ ಪಡೆಯುತ್ತಿದ್ದ.

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಬ್ಯಾಂಕುಗಳಿಂದ ವಾಹನ ಸಾಲ ಪಡೆಯುವ ಸಲುವಾಗಿ ಆತ ನಕಲಿ ಆಧಾರ್ ಕಾರ್ಡ್, ನಕಲಿ ಪ್ಯಾನ್ ಕಾರ್ಡ್, ನಕಲಿ ಬ್ಯಾಂಕ್ ಸ್ಟೇಟ್ ಮೆಂಟ್, ಆದಾಯ ತೆರಿಗೆ ಇಲಾಖೆಯ ನಕಲಿ ಸ್ಟೇಟ್ ಮೆಂಟ್'ಗಳನ್ನು ಬಳಸುತ್ತಿದ್ದ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಬ್ಯಾಂಕುಗಳಲ್ಲಿ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ ಒಳ್ಳೆಯ ಮನೆಯೊಂದನ್ನು ಬಾಡಿಗೆಗೆ ಪಡೆಯುತ್ತಿದ್ದ. ಬ್ಯಾಂಕಿನಿಂದ ಪರಿಶೀಲನೆಗಾಗಿ ಬರುವವರನ್ನು ನಂಬಿಸುವ ಸಲುವಾಗಿ ಆ ಮನೆಯಲ್ಲಿಯೇ ಸುಮಾರು ಎರಡು ತಿಂಗಳು ವಾಸಿಸುತ್ತಿದ್ದ.

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಸಾಲ ಮಂಜೂರಾದ ನಂತರ ಮನೆ ಖಾಲಿ ಮಾಡಿ, ಹೊಸ ಸ್ಥಳದಲ್ಲಿ ಮನೆ ಬಾಡಿಗೆಗೆ ಪಡೆದು ಮತ್ತೊಂದು ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುತ್ತಿದ್ದ. ಸಾಲ ಮಂಜೂರಾದ ನಂತರ ಈ ಗ್ಯಾಂಗ್'ನ ಸದಸ್ಯರು ಡೀಲರ್'ಗಳಿಂದ ಕಾರು ಖರೀದಿಸಿ, ಆ ಕಾರನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಆ ಕಾರುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಾರನ್ನು ಮಾರಾಟ ಮಾಡುವ ವೇಳೆಯಲ್ಲಿ ಹಣದ ಕೊರತೆಯಿಂದಾಗಿ ಅಥವಾ ಸಹೋದರಿಯ ಮದುವೆಯ ಸಲುವಾಗಿ ಕಾರನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಿದ್ದರು.

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಕಾರನ್ನು ಮಾರಾಟ ಮಾಡಿದ ನಂತರ ಬ್ಯಾಂಕುಗಳಿಗೆ ಇಎಂಐ ಪಾವತಿಸುವುದನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದ ಎಚ್ಚೆತ್ತ ಬ್ಯಾಂಕುಗಳಿಗೆ ಆತ ಗ್ರಾಹಕನಲ್ಲ ಬದಲಿಗೆ ವಂಚಕ ಎಂದು ತಿಳಿಯಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ದೂರು ದಾಖಲಿಸಿದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುರ್ಲಾ ಪೊಲೀಸರು ಜನವರಿ 15ರಂದು ಎಫ್‌ಐಆರ್ ದಾಖಲಿಸಿದರು. ವಂಚನೆ ಹಾಗೂ ಸಾಲವನ್ನು ತಪ್ಪಾಗಿ ಮಂಜೂರು ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ನಕಲಿ ದಾಖಲೆಗಳ ಮೇಲೆ ಸಾಲ ಮಂಜೂರು ಮಾಡುವಲ್ಲಿ ಬ್ಯಾಂಕ್ ಅಧಿಕಾರಿಗಳ ಕೈವಾಡ ಸಹ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕಾರು ಸಾಲ ಪಡೆದು ಬ್ಯಾಂಕುಗಳಿಗೆ ಭಾರಿ ನಷ್ಟವನ್ನುಂಟು ಮಾಡಿದ ಅನೇಕ ಪ್ರಕರಣಗಳು ವರದಿಯಾಗಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬ್ಯಾಂಕುಗಳಿಗೆ ವಂಚಿಸಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಖದೀಮರು ಕೊನೆಗೂ ಅಂದರ್

ಜೊತೆಗೆ ನಕಲಿ ಕಾರು ಕಳ್ಳತನದ ಪ್ರಕರಣವನ್ನು ದಾಖಲಿಸಿ ವಿಮಾ ಕಂಪನಿಗಳಿಂದ ಹಣ ಪಡೆದಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಯಾರೇ ಆಗಲಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಮುನ್ನ ಅಂತಹ ಕಾರುಗಳ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸುವುದು ಒಳ್ಳೆಯದು. ಇಲ್ಲದಿದ್ದರೇ ಅಪಾಯ ಖಚಿತ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mumbai crime branch police busts car loan scam, seizes luxury cars. Read in Kannada.
Story first published: Thursday, January 28, 2021, 18:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X