ನೋ ಪಾರ್ಕಿಂಗ್‌ನಲ್ಲಿ ಕಾರು ನಿಲುಗಡೆ ಮಾಡಿದ ಮೇಯರ್‌ಗೆ ಬಿತ್ತು 10 ಸಾವಿರ ದಂಡ..!
ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸಲು ದೇಶಾದ್ಯಂತ ಹಲವು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗುತ್ತಿದ್ದು, ನೋ ಪಾರ್ಕಿಂಗ್‌ನಲ್ಲಿ ಕಾರು ನಿಲುಗಡೆ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದ ಮೇಯರ್ ಒಬ್ಬರ ಅಧಿಕೃತ ಕಾರಿಗೆ ಬರೋಬ್ಬರಿ ರೂ. 10 ಸಾವಿರ ದಂಡ ವಿಧಿಸಲಾಗಿದೆ.

ಹೌದು, ಇತ್ತೀಚೆಗೆ ಮುಂಬೈನಲ್ಲಿ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಯನ್ನು ತಪ್ಪಿಸಲು ಕಠಿಣ ಕಾನೂನು ಕ್ರಮವೊಂದನ್ನು ಕೈಗೊಳ್ಳಲಾಗಿದ್ದು, ಹೊಸ ಕ್ರಮವನ್ನು ಜಾರಿಗೆ ತರಲು ಆದೇಶ ಮಾಡಿದ್ದ ಮೇಯರ್‌ಯಿಂದಲೇ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ಕಾನೂನು ಪ್ರಕಾರ ಮೇಯರ್ ಕಾರಿಗೆ ರೂ.10 ಸಾವಿರ ದಂಡ ವಿಧಿಸಲಾಗಿದ್ದು, ಹೊಸ ನಿಯಮಕ್ಕೆ ಆದೇಶಿಸಿದ್ದ ಮೇಯರ್ ವಿಶ್ವನಾಥ್ ಪಿ ಮಹಾದೇಶ್ವರ್‌ಗೆ ಹೊಸ ನಿಯಮವು ಬಿಸಿಮುಟ್ಟಿಸಿದೆ.

ಮುಂಬೈ ಮಹಾನಗರ ಪಾಲಿಕೆ ಮೇಯರ್ ಆಗಿರುವ ಶಿವಸೇನೆಯ ಹಿರಿಯ ನಾಯಕ ವಿಶ್ವನಾಥ್ ಪಿ ಮಹಾದೇಶ್ವರ್ ಅವರು ಕಳೆದ ಎರಡು ದಿನಗಳ ಹಿಂದೆ ಜೂಹೂ ಬಳಿಯಿರುವ ವಿಲೆ ಪಾರ್ಲೆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿದ್ದ ಮೀನೂಟಕ್ಕಾಗಿ ಸಿ ರಾಕ್ ಹೋಟೆಲ್ ಒಂದಕ್ಕೆ ತೆರಳು ಸಲುವಾಗಿ ಹೋಟೆಲ್ ಮುಂದೆಯೇ ಕಾರ್ ಪಾರ್ಕಿಂಗ್ ಮಾಡಿದ್ದರು.

ಆದ್ರೆ ವಾಹನ ದಟ್ಟಣೆಯಿಂದ ಕೂಡಿರುವ ವಿಲೆ ಪಾರ್ಲೆ ರಸ್ತೆಯಲ್ಲಿ ಈ ಹಿಂದೆಯೇ ಮುಂಬೈ ಪೊಲೀಸರು ನೋ ಪಾರ್ಕಿಂಗ್ ವಲಯ ಎಂದು ಘೋಷಣೆ ಮಾಡಿದ್ದು, ನೋ ಪಾರ್ಕಿಂಗ್ ಬೋರ್ಡ್ ಮುಂದೆಯೇ ಮೇಯರ್ ಅವರ ಅಧಿಕೃತ ಕಾರು ಟೊಯೊಟಾ ಇನೋವಾ ಕ್ರಿಸ್ಟಾ ಪಾರ್ಕ್ ಮಾಡಿರುವುದು ಕಂಡುಬಂದಿದೆ.

ಈ ವೇಳೆ ಕೆಲವು ಸ್ಥಳೀಯರು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನ ಚಿತ್ರಗಳನ್ನು ಮುಂಬೈ ಟ್ರಾಫಿಕ್ ಪೊಲೀಸರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರು ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಇ-ಚಲನ್ ಮೂಲಕ ದಂಡ ಹಾಕಿರುವುದಾಗಿ ದೃಡಪಡಿಸಿದೆ. ಆದ್ರೆ ದಂಡಕಟ್ಟಬೇಕಿದ್ದ ಮೇಯರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಆದರೆ ಕುರಿತು ಮಧ್ಯಮಗಳಿಗೆ ಉತ್ತರಿಸಲು ನಿರಾಕರಿಸಿರುವ ಮುಂಬೈ ಮೇಯರ್ ಅವರು ಪಾರ್ಕಿಂಗ್ ಜಾಗವಿಲ್ಲ ಕಾರಣಕ್ಕೆ ತಮ್ಮ ಚಾಲಕ ನಿಲ್ಲಿಸಿರಬಹುದು ಎಂಬ ಉಡಾಫೆ ಉತ್ತರ ನೀಡಿದ್ದಾರೆ.

ಇನ್ನು ಮುಂಬೈನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ನೋ ಪಾರ್ಕಿಂಗ್ ಸ್ಥಳಗಳಲ್ಲಿ ಅಕ್ರಮವಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದು ಪ್ರಮುಖ ಕಾರಣವಾಗಿದ್ದು, ಈ ಹಿನ್ನಲೆ ಮುಂಬೈ ಮಾಹಾನಗರ ಪಾಲಿಕೆ ಮತ್ತು ಟ್ರಾಫಿಕ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನೋ ಪಾರ್ಕಿಂಗ್‌ನಲ್ಲಿರುವ ವಾಹನಗಳಲ್ಲಿ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲಾಗುತ್ತಿದೆ.

ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಮಾಲೀಕರಿಗೆ ರೂ.1 ಸಾವಿರದಿಂದ ರೂ.10 ಸಾವಿರ ತನಕ ದಂಡ ವಿಧಿಸುವ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ನೋ ಪಾರ್ಕಿಂಗ್ ಜಾಗಗಳಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ ಈಗಾಗಲೇ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನೋ ಪಾರ್ಕಿಂಗ್ ಪ್ರದೇಶ ಮತ್ತು ವಾಹನ ಮಾದರಿಗಳಿಗೆ ಅನುಗುಣವಾಗಿ ದಂಡದ ಮೊತ್ತವನ್ನು ವಿಧಿಸಲಾಗುತ್ತಿದ್ದು, ಮುಂಬೈ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ಭಾರೀ ಪ್ರಮಾಣದ ದಂಡಕ್ಕೆ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ.

ಹಾಗೆಯೇ ಮುಂಬೈ ಮಹಾನಗರ ಪಾಲಿಕೆಯು ನಗರದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಹನಗಳನ್ನು ನಿಲುಗಡೆ ಮಾಡಿದ್ದಲ್ಲಿ ಅಂತಹ ವಾಹನ ಮಾಲೀಕರಿಗೆ ಅಧಿಕ ಮೊತ್ತದ ದಂಡ ವಿಧಿಸಲು ಸೂಚನೆ ನೀಡಲಾಗಿದೆ.

ಜೊತೆಗೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರೇ ಜಪ್ತಿ ಮಾಡುತ್ತಿದ್ದು, ಹೊಸ ರೂಲ್ಸ್ ಜಾರಿಗೆ ಬಂದು ಒಂದೇ ವಾರದಲ್ಲಿ ಸಾವಿರ ವಾಹನ ಮಾಲೀಕರ ವಿರುದ್ಧ ಇ-ಚಲನ್ ಮೂಲಕ ದಂಡ ಹಾಕಲಾಗಿದೆ. ಇದರಿಂದಾಗಿ ಮುಂಬೈ ಪ್ರಮುಖ ರಸ್ತೆಗಳಲ್ಲಿ ಅಕ್ರಮವಾಗಿ ಪಾರ್ಕಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ವಾಹನಗಳನ್ನು ಪಾರ್ಕ್ ಮಾಡುವ ಮುನ್ನ ಪಾರ್ಕ್ ಮಾಡಬಹುದೇ ಎಂಬುವುದು ಖಚಿತಪಡಿಸಿಕೊಂಡು ಪಾರ್ಕ್ ಮಾಡುತ್ತಿದ್ದಾರೆ.
Image Courtesy: Cartoq


Click it and Unblock the Notifications








