ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ರಸ್ತೆ ಮೇಲೆ ಪಲ್ಟಿಯಾಗಿ ಬಿದ್ದಿರುವ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಲು ಸಾರ್ವಜನಿಕರು ನೆರವಾಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿರುವ ಘಟನೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ನಡೆದಿದೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಶನಿವಾರ ಬೆಳಿಗ್ಗೆ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿ ಪಲ್ಟಿಯಾಗಿ ಬಿದ್ದಿದೆ. ಈ ಎಸ್‌ಯುವಿ ರಸ್ತೆಯ ಮಧ್ಯದಲ್ಲಿ ಬಿದ್ದಿರುವುದನ್ನು ವೀಡಿಯೊದಲ್ಲಿ ಗಮನಿಸಬಹುದು. ಈ ವೀಡಿಯೊದಲ್ಲಿ ಪೊಲೀಸ್ ಪೇದೆಯೊಬ್ಬರು ರಸ್ತೆಯಲ್ಲಿ ನಡೆಯುವ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಇದೇ ವೇಳೆ ಸಾರ್ವಜನಿಕರು ಪಲ್ಟಿಯಾಗಿ ಬಿದ್ದಿರುವ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕೆ ಈ ಎಸ್‌ಯುವಿ ಪಲ್ಟಿ ಹೊಡೆದಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

10-15 ಜನರು ಈ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸತತ ಪ್ರಯತ್ನದ ನಂತರ ಪಲ್ಟಿಯಾಗಿದ್ದ ಇಕೋಸ್ಪೋರ್ಟ್ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಲಾಗುತ್ತದೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಪಲ್ಟಿಯಾಗಿ ಬಿದ್ದಿದ್ದ ಕಾರಣ ಈ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ವಿಂಡ್‌ಸ್ಕ್ರೀನ್‌ನಲ್ಲಿ ಹಲವು ಸ್ಕ್ರಾಚ್'ಗಳು ಉಂಟಾಗಿದ್ದರೆ ಮುಂಭಾಗವು ಸ್ವಲ್ಪ ಬಾಗಿದೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿರುವ ಬಗ್ಗೆ ಅಥವಾ ಯಾವುದೇ ಸಾವು ನೋವುಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಈ ವೀಡಿಯೊ ವೀಕ್ಷಿಸಿದವರು ಇಕೋಸ್ಪೋರ್ಟ್ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಜನರನ್ನು ಶ್ಲಾಘಿಸುತ್ತಿದ್ದಾರೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಕೆಲವರು ಫೋರ್ಡ್ ಇಕೋಸ್ಪೋರ್ಟ್‌ನ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಪಲ್ಟಿ ಹೊಡೆದ ನಂತರವೂ ಎಸ್‌ಯುವಿ ಉತ್ತಮ ಸ್ಥಿತಿಯಲ್ಲಿದೆ ಎಂದು ಕೆಲವರು ಹೇಳಿದ್ದಾರೆ. ಇಕೋಸ್ಪೋರ್ಟ್‌ ಬದಲು ಬೇರೆ ವಾಹನವಾಗಿದ್ದರೆ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಆಂಬಿಯೆಂಟ್, ಟ್ರೆಂಡ್, ಟಿಟಾನಿಯಂ, ಟಿಟಾನಿಯಂ ಪ್ಲಸ್ ಹಾಗೂ ಸ್ಪೋರ್ಟ್ ಎಂಬ ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಈ ಎಸ್‌ಯುವಿಯ ಟಾಪ್ ಎಂಡ್ ಮಾದರಿಯ ಬೆಲೆ ರೂ.11.49 ಲಕ್ಷಗಳಾಗಿದೆ. ಹೊಸ ಫೋರ್ಡ್ ಇಕೋಸ್ಪೋರ್ಟ್ ಬಿಎಸ್ 6 ಮಾದರಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್'ಗಳೊಂದಿಗೆ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಇಕೋಸ್ಪೋರ್ಟ್ ಎಸ್‌ಯುವಿಯಲ್ಲಿ 1.5-ಲೀಟರ್, 3-ಸಿಲಿಂಡರ್ ಟಿವಿಸಿಟಿ ಪೆಟ್ರೋಲ್ ಹಾಗೂ 1.5-ಲೀಟರ್ ಟಿಡಿಸಿಐ ​​ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್ 122 ಬಿಹೆಚ್‌ಪಿ ಪವರ್ ಹಾಗೂ 149 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಪಲ್ಟಿ ಹೊಡೆದಿದ್ದ ಎಸ್‌ಯುವಿಯನ್ನು ನೇರವಾಗಿ ನಿಲ್ಲಿಸಿದ ಸಾರ್ವಜನಿಕರು

ಇನ್ನು ಡೀಸೆಲ್ ಎಂಜಿನ್ 100 ಬಿಹೆಚ್‌ಪಿ ಪವರ್ ಹಾಗೂ 215 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಸುರಕ್ಷತೆಗಾಗಿ ಈ ಎಸ್‌ಯುವಿಯು ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ (ಜಿಎನ್‌ಸಿಎಪಿ) 4 ಸ್ಟಾರ್ ರೇಟಿಂಗ್ ಪಡೆದಿದೆ.

Most Read Articles

Kannada
English summary
Mumbai people lifts Ford Ecosport which rolled upside down. Read in Kannada.
Story first published: Monday, June 21, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X