ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲು

ಭಾರತದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳ ಮೂಲಕ ಸ್ಟಂಟ್ ಮಾಡುವುದನ್ನು ನಿಷೇಧಿಸಲಾಗಿದೆ. ಯಾರಾದರೂ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳ ಮೂಲಕ ಸ್ಟಂಟ್ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅವರ ವಾಹನಗಳನ್ನು ವಶಕ್ಕೆ ಪಡೆಯುವುದರ ಜೊತೆಗೆ ಅಂತಹವರಿಗೆ ಭಾರೀ ಪ್ರಮಾಣದ ದಂಡವನ್ನು ಸಹ ವಿಧಿಸಲಾಗುತ್ತದೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಆದರೂ ಕೆಲವು ಕಿಡಿ ಗೇಡಿಗಳು ಆಗಾಗ್ಗೆ ಸಾರ್ವಜನಿಕ ರಸ್ತೆಗಳಲಿ ತಮ್ಮ ದ್ವಿ ಚಕ್ರ ವಾಹನಗಳಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಲೇ ಇರುತ್ತಾರೆ. ಕೆಲವರು ಸ್ಟಂಟ್ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಅವರು ಸ್ಟಂಟ್ ಮಾಡುವ ಘಟನೆಯನ್ನು ಯಾರಾದರೂ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಪೊಲೀಸರ ಗಮನಕ್ಕೆ ಬಂದ ನಂತರ ಸಿಕ್ಕಿ ಬೀಳುತ್ತಾರೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಇಂತಹುದೇ ಘಟನೆ ಈಗ ಮುಂಬೈನಲ್ಲಿ ನಡೆದಿದೆ. ಬೈಕ್ ಸವಾರನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊದಿಂದಾಗಿ ಸಿಕ್ಕಿ ಬಿದ್ದಿದ್ದಾನೆ. ಮುಂಬೈ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ವೈರಲ್ ಆದ ವೀಡಿಯೊದಲ್ಲಿರುವ ಇಬ್ಬರ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮುಂಬೈ ಪೊಲೀಸರು ತಮ್ಮ ಟ್ವಿಟರ್ ಖಾತೆಯ ಮೂಲಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಬಾರ್ಬಿ ಹುಡುಗಿ, ಜೀವನ ಪ್ಲಾಸ್ಟಿಕ್ ಅಲ್ಲ- ಭದ್ರತೆಯ ಅದ್ಭುತ ಜಗತ್ತು! ಇದನ್ನು ಪೊಲೀಸ್ ಇಲಾಖೆ ನಿಮಗೆ ನೆನಪಿಸುತ್ತದೆ ಎಂದು ಹೇಳಲಾಗಿದೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಮುಂಬೈನ ರಸ್ತೆಯಲ್ಲಿ ಕೆಟಿಎಂ ಬೈಕ್ ಮೂಲಕ ಸ್ಟಂಟ್ ಮಾಡಿದ ಇಬ್ಬರೂ ಆರೋಪಿಗಳ ವಿರುದ್ಧ ಪೊಲೀಸರು ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಯುವಕರು ಸ್ಟಂಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ಆಗಸ್ಟ್ 12 ರಂದು ಪೋಸ್ಟ್ ಮಾಡಲಾದ ಈ ವೀಡಿಯೊವನ್ನು ಇದುವರೆಗೂ 20,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಈ ಯುವಕರು ತಾವು ಸ್ಟಂಟ್ ಮಾಡಿದ ಕೆಟಿಎಂ ಬೈಕ್ ಅನ್ನು ವಿಶ್ವವಿಖ್ಯಾತ ಬಾರ್ಬಿ ಗರ್ಲ್ ಕಾರ್ಟೂನ್ ಸ್ಟಿಕರ್‌ನೊಂದಿಗೆ ಮಾಡಿಫೈ ಮಾಡಿದ್ದರು. ಈ ಕಾರಣಕ್ಕೆ ಮುಂಬೈ ಪೊಲೀಸರು ಈ ಸ್ಟಂಟ್‌ ಮೆನ್‌ಗಳನ್ನು ಬಾರ್ಬಿ ಗರ್ಲ್ ಎಂದು ಕರೆದಿದ್ದಾರೆ. ಈ ವೀಡಿಯೊದಲ್ಲಿ ಕೆಟಿಎಂ ಬೈಕ್ ಗುಲಾಬಿ ಬಣ್ಣದಲ್ಲಿರುವುದನ್ನು ಕಾಣ ಬಹುದು.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಸ್ಟಂಟ್ ಮಾಡುವ ಸಂದರ್ಭದಲ್ಲಿ ಈ ಇಬ್ಬರೂ ಯುವಕರು ಹೆಲ್ಮೆಟ್ ಧರಿಸಿರಲಿಲ್ಲ. ಇದರಿಂದ ಈ ಸ್ಟಂಟ್ ಮೆನ್ ಗಳನ್ನು ಗುರುತಿಸುವುದು ಪೊಲೀಸರಿಗೆ ಸುಲಭವಾಗಿದೆ. ಆದರೆ ಪೊಲೀಸರು ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ಈ ಇಬ್ಬರು ಯುವಕರ ಮುಖವನ್ನು ಮುಚ್ಚಲಾಗಿದೆ. ಬೇರೆಯವರಿಗೆ ಇವರ ಗುರುತು ಸಿಗದಿರಲಿ ಎಂಬ ಕಾರಣಕ್ಕೆ ಅವರಿಬ್ಬರ ಮುಖವನ್ನು ಮುಚ್ಚಲಾಗಿದೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಇವರಿಬ್ಬರು ಬೈಕ್ ನಲ್ಲಿ ಹಾಡುತ್ತಾ ಚಲಿಸುತ್ತಾರೆ. ವೀಡಿಯೊ ಕೊನೆಯಲ್ಲಿ ಹಿಂಬದಿಯ ಸವಾರ ಬೈಕಿನಿಂದ ಹೊರ ಹೋದರೆ, ಬೈಕ್ ಸವಾರ ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗೆ ಇನ್ನೇನು ಗುದಿಯುವುದರಲ್ಲಿದ್ದ. ಆದರೆ ಕೊನೆಗೆ ಹೇಗೋ ನಿರ್ವಹಿಸಿ ಬೈಕ್ ಅನ್ನು ನಿಲ್ಲಿಸಿದ್ದಾನೆ. ಒಂದು ವೇಳೆ ಬೈಕ್ ಸವಾರ ಪಾದಚಾರಿಗೆ ಗುದ್ದಿದ್ದರೆ ಘಟನೆಯು ಇನ್ನಷ್ಟು ಭೀಕರವಾಗುತ್ತಿತ್ತು.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಈ ಸ್ಟಂಟ್ ಮೆನ್ ಗಳ ವಿರುದ್ದ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿದ ಆರೋಪದ ಜೊತೆಗೆ ಹೆಲ್ಮೆಟ್ ಧರಿಸದೇ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿದ ಆರೋಪವನ್ನೂ ಸಹ ಹೊರಿಸಲಾಗಿದೆ. ಹೆಲ್ಮೆಟ್ ಇಲ್ಲದೇ ದ್ವಿ ಚಕ್ರ ವಾಹನ ಚಾಲನೆ ಮಾಡುವುದೇ ತಪ್ಪು, ಅಂತಹುದರಲ್ಲಿ ಈ ಇಬ್ಬರು ಹೆಲ್ಮೆಟ್ ಧರಿಸದೇ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಹುಂಬತನ ತೋರಿದ್ದಾರೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಮೋಟಾರ್ ಸೈಕಲ್ ಸ್ಟಂಟ್ ಗಳು ಯಾವಾಗಲೂ ಅಪಾಯಕಾರಿಯಾಗಿರುತ್ತವೆ. ಇದರಿಂದ ಸ್ಟಂಟ್ ಮಾಡುವವರಿಗೆ ಮಾತ್ರವಲ್ಲದೇ ಆ ಸಮಯದಲ್ಲಿ ರಸ್ತೆಯಲ್ಲಿ ಸಾಗುವ ಇತರ ವಾಹನ ಸವಾರರಿಗೂ ಹಾಗೂ ಪಾದಚಾರಿಗಳಿಗೂ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಸದ ಜನರೇ ಇಲ್ಲವೆನ್ನ ಬಹುದು. ಈ ಹಿನ್ನೆಲೆಯಲ್ಲಿ ಇಂತಹ ಸ್ಟಂಟ್ ಗಳನ್ನು ಮಾಡಿ ತಪ್ಪಿಸಿಕೊಳ್ಳುವುದು ನಿಜಕ್ಕೂ ಕಷ್ಟ. ಇದರ ಜೊತೆಗೆ ಸಂಚಾರಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುವುದಕ್ಕಾಗಿ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ. ಈ ಕ್ಯಾಮೆರಾಗಳು ಕಾನೂನು, ಸುವ್ಯವಸ್ಥೆ ಕಾಪಾಡಲು ಮಾತ್ರವಲ್ಲದೇ ಅಪರಾಧಿಗಳನ್ನು ಪತ್ತೆ ಹಚ್ಚಲು ಸಹ ನೆರವಾಗುತ್ತವೆ.

ಕೆಟಿಎಂ ಬೈಕಿನಲ್ಲಿ ಬಾರ್ಬಿ ಗರ್ಲ್ ಸ್ಟಿಕ್ಕರ್ ಅಳವಡಿಸಿ ಸ್ಟಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಭಾರತದಲ್ಲಿ ವಾಹನ ಮಾಡಿಫೈ ಮಾಡುವುದನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಕೇಂದ್ರ ಮೋಟಾರು ವಾಹನ ಕಾಯ್ದೆಯ ಅನ್ವಯ ಯಾವುದೇ ವಾಹನಗಳನ್ನು ಖರೀದಿಸಿದ ನಂತರ ಆ ವಾಹನಗಳಲ್ಲಿ ಸೈಲೆನ್ಸರ್ ಬದಲಿಸುವುದು ಸೇರಿದಂತೆ ಯಾವುದೇ ರೀತಿಯ ಮಾಡಿಫೈ ಮಾಡುವುದನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಅಕ್ರಮವಾಗಿ ಮಾಡಿಫೈ ಮಾಡಲಾಗುವ ವಾಹನಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆಯಬಹುದು.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mumbai police books case against ktm rider for doing stunt on public roads video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X