ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ದೇಶಾದ್ಯಂತ ಕರೋನಾ ವೈರಸ್ ಎರಡನೇ ಅಲೆ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್'ನಿಂದ ಕರೋನಾ ವೈರಸ್ ಸೋಂಕಿನ ಸರಪಳಿಯನ್ನು ಮುರಿಯಬಹುದು.

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ವಿನಾಕಾರಣ ಮನೆಗಳಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ಮನೆಯಿಂದಹೊರಬರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಭಾರೀ ಪ್ರಮಾಣದ ದಂಡ ವಿಧಿಸುವಂತೆ ರಾಜ್ಯ ಸರ್ಕಾರಗಳು ಪೊಲೀಸ್ ಇಲಾಖೆಗೆ ಸೂಚನೆ ನೀಡಿವೆ.

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಈಗ ಬಾಲಿವುಡ್‌ನ ಜನಪ್ರಿಯ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಟಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರಿಬ್ಬರು ಸರಿಯಾದ ಕಾರಣವಿಲ್ಲದೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಇವರಿಬ್ಬರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಇವರಿಬ್ಬರು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್ ಪ್ರೋಮೆಂಡಾದಲ್ಲಿ ತಿರುಗಾಡುತ್ತಿದ್ದರು ಎಂದು ವರದಿಯಾಗಿದೆ.

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಮಹಾರಾಷ್ಟ್ರ ಸರ್ಕಾರವು ಜೂನ್ 15ರವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಂಬೈ ಪೊಲೀಸರಿಗೆ ನಟ ಟೈಗರ್ ಶ್ರಾಫ್ ಬ್ಯಾಂಡ್‌ಸ್ಟ್ಯಾಂಡ್'ನಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಟೈಗರ್ ಶ್ರಾಫ್'ರವರಿಗೆ ವಿಚಾರಣೆ ವೇಳೆ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರ ಬಂದ ಬಗ್ಗೆ ಪೊಲೀಸರಿಗೆ ಸರಿಯಾದ ಕಾರಣಗಳನ್ನು ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಸ್ವತಃ ಮುಂಬೈ ಪೊಲೀಸರೇ ಈ ಇಬ್ಬರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದಾರೆ. ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬಾಂದ್ರಾದ ರಸ್ತೆಗಾಲ್ಲಿ ತಿರುಗಾಡಿದ ಈ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 188, 34 ಅಡಿಯಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಕೋವಿಡ್ 19 ವಿರುದ್ಧ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಅನಗತ್ಯ ಹೀರೋಪಂತಿಯನ್ನು ತಪ್ಪಿಸುವಂತೆ ನಾವು ಎಲ್ಲಾ ಮುಂಬೈ ನಿವಾಸಿಗಳನ್ನು ಕೇಳಿ ಕೊಳ್ಳುತ್ತೇವೆ ಎಂದು ಮುಂಬೈ ಪೊಲೀಸರು ಪೋಸ್ಟ್ ಮಾಡಿದ್ದಾರೆ.

ಸರಿಯಾದ ಕಾರಣವಿಲ್ಲದೇ ಮನೆಯಿಂದ ಹೊರಬಂದ ನಟ, ನಟಿ ವಿರುದ್ಧ ದಾಖಲಾಯ್ತು ಎಫ್‌ಐ‌ಆರ್

ಮುಂಬೈ ಪೊಲೀಸರು ತಪಾಸಣೆಗಾಗಿ ತಡೆದಾಗ ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಕಾರಿನಲ್ಲಿ ಓಡಾಡುತ್ತಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Most Read Articles

Kannada
English summary
Mumbai police registers FIR against bollywood actors for violating lockdown norms. Read in Kannada.
Story first published: Thursday, June 3, 2021, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X