ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ತುರ್ತು ವಾಹನಗಳಿಗಾಗಿ ಇತ್ತೀಚಿಗೆ ಮುಂಬೈನಲ್ಲಿ ಕಲರ್ ಕೋಡೆಡ್ ಸ್ಟಿಕ್ಕರ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಈಗ ಈ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಕರ್ಫ್ಯೂ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಮತ್ತೆ ಇ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಮುಂಬೈಗೆ ಪ್ರತ್ಯೇಕ ವ್ಯವಸ್ಥೆ, ರಾಜ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುವುದರಿಂದ ಸಮಸ್ಯೆ ಉಂಟಾಗಿದೆ.

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಮಹಾರಾಷ್ಟ್ರದಲ್ಲಿ ರಾಜ್ಯದ ಒಳಗೆ ಹಾಗೂ ಹೊರಗೆ ಪ್ರಯಾಣಿಸಲು ಇ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ಮುಂಬೈ ನಗರದೊಳಗೆ ಹಾಗೂ ಹೊರಗೆ ಪ್ರತ್ಯೇಕ ನಿಯಮವನ್ನು ಜಾರಿಗೆ ತರಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಈ ಹಿನ್ನೆಲೆಯಲ್ಲಿ ಕಲರ್ ಕೋಡೆಡ್ ಸ್ಟಿಕ್ಕರ್ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಶುಕ್ರವಾರ ಮುಂಬೈನಲ್ಲಿ ಕಲರ್ ಕೋಡೆಡ್ ಸ್ಟಿಕ್ಕರ್ ವ್ಯವಸ್ಥೆಯನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಕಲರ್ ಕೋಡೆಡ್ ಸ್ಟಿಕ್ಕರ್ ವ್ಯವಸ್ಥೆಯನ್ನು ಕಳೆದ ವಾರವಷ್ಟೇ ಪರಿಚಯಿಸಲಾಗಿತ್ತು. ಕೆಂಪು ಬಣ್ಣದ ಸ್ಟಿಕ್ಕರ್'ಗಳನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸಲಕರಣೆ ಪೂರೈಕೆದಾರರು ಪ್ರಯಾಣಿಸುವ ವಾಹನಗಳಿಗೆ ನೀಡಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಇನ್ನು ಹಸಿರು ಸ್ಟಿಕ್ಕರ್'ಗಳನ್ನು ಅಗತ್ಯ ವಸ್ತು, ತರಕಾರಿ, ಬೇಕರಿ ಹಾಗೂ ಆಹಾರ ಪದಾರ್ಥಗಳನ್ನು ಹೊಂದಿರುವ ವಾಹನಗಳಿಗೆ ನೀಡಲಾಗಿತ್ತು. ನಾಗರಿಕ ಸಿಬ್ಬಂದಿ, ವಿದ್ಯುತ್, ದೂರವಾಣಿ, ಪ್ರೆಸ್ ಮುಂತಾದ ಅಗತ್ಯ ಸೇವೆ ವಾಹನಗಳಿಗೆ ಹಳದಿ ಸ್ಟಿಕ್ಕರ್ ನೀಡಲಾಗಿತ್ತು.

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಅನಗತ್ಯವಾಗಿ ಪ್ರಯಾಣಿಸುವವರನ್ನು ತಡೆಯುವುದು ಈ ಸ್ಟಿಕ್ಕರ್ ನೀಡುವುದರ ಹಿಂದಿನ ಉದ್ದೇಶವಾಗಿತ್ತು. ಕಲರ್ ಕೋಡೆಡ್ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ನಿರ್ಧಾರದ ಬಗ್ಗೆ ಮುಂಬೈನ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಮಹಾರಾಷ್ಟ್ರದಲ್ಲಿ ಹೊಸ ಕೋವಿಡ್ 19 ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರವು ಇಡೀ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಈಗಾಗಲೇ ದೆಹಲಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್ ಡೌನ್ ಏಪ್ರಿಲ್ 26ರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಮೆಟ್ರೋ ಸಂಚಾರ ಇರುತ್ತದೆಯಾದರೂ ಕೇವಲ 50%ನಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಲರ್ ಕೋಡೆಡ್ ಸ್ಟಿಕ್ಕರ್ ಬಳಕೆಯನ್ನು ನಿಲ್ಲಿಸಿದ ಮುಂಬೈ ಪೊಲೀಸರು

ಸಾರ್ವಜನಿಕ ಬಸ್, ಆಟೋ, ಇ ರಿಕ್ಷಾಗಳಿಗೆ 50%ನಷ್ಟು ಪ್ರಯಾಣಿಕರೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ದೆಹಲಿಯಲ್ಲಿ ಕ್ಯಾಬ್, ಟ್ಯಾಕ್ಸಿ, ಗ್ರಾಮೀಣ ಸೇವೆಗಳು ಕಾರ್ಯನಿರ್ವಹಿಸಲಿದ್ದು, ಎರಡು ಸವಾರಿಗಳಿಗೆ ಅವಕಾಶ ನೀಡಲಾಗಿದೆ.

ಚಿತ್ರ ಕೃಪೆ: ಮುಂಬೈ ಪೊಲೀಸ್

Most Read Articles

Kannada
English summary
Mumbai police stops color coded sticker use in Mumbai. Read in Kannada.
Story first published: Saturday, April 24, 2021, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X