Just In
- 28 min ago
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
- 12 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 12 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 12 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
Don't Miss!
- News
ಚಿನ್ನ ಕಳ್ಳಸಾಗಣೆ: 28 ಕೋಟಿ ರೂಪಾಯಿ ಮೌಲ್ಯದ 55.61 ಕೆಜಿ ಚಿನ್ನ ವಶಪಡಿಸಿಕೊಂಡ DRI
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್
ದೇಶಾದ್ಯಂತ ರಸ್ತೆ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಇದೀಗ ಎಕ್ಸ್‌ಪ್ರೆಸ್‌ವೇ ಹೆಚ್ಚುತ್ತಿರುವ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಮತ್ತಷ್ಟು ಹೊಸ ಸಂಚಾರಿ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

ಮಹಾರಾಷ್ಟ್ರ ಹೈವೇ ಪೊಲೀಸರು ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಅಗಸ್ಟ್ 1ರಿಂದ ಹೊಸ ಸಂಚಾರಿ ಜಾರಿಗೆ ಮುಂದಾಗಿದ್ದು, ನಿಗದಿತ ಪ್ರದೇಶಗಳಲ್ಲಿ ಅಧಿಕ ವೇಗದಲ್ಲಿ ಚಲಿಸುವ ವಾಹನಗಳಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಘಾಟಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಹೊಸ ಕ್ರಮ ಜಾರಿಗೆ ತರಲಾಗುತ್ತಿದ್ದು, ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ರೂ. 1 ಸಾವಿರ ದಂಡವನ್ನು ನಿಗದಿಪಡಿಸಲಾಗಿದೆ.

ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇ ನಲ್ಲಿ ಸಂಚರಿಸುವ ಬಹುತೇಕ ವಾಹನಗಳು ಕನಿಷ್ಠ 80ರಿಂದ 120ಕಿ.ಮೀ ವೇಗದಲ್ಲಿ ಸಂಚಲಿಸುತ್ತಿದ್ದು, ಅತಿ ಹೆಚ್ಚು ಅಪಘಾತ ಪ್ರಕರಣಗಳಿಗೆ ಕಾರಣವಾಗಿರುವ ಉರ್ಸೆ ಮತ್ತು ಖಲಾಪುರ ನಡುವಿನ ಮಾರ್ಗದಲ್ಲಿ ಹೊಸ ಸಂಚಾರಿ ನಿಯಮವನ್ನು ಜಾರಿಗೆ ತರಲಾಗಿದೆ.

ಉರ್ಸೆ ಮತ್ತು ಖಲಾಪುರ ನಡುವಿನ ಅಂತರ 50ಕಿ.ಮೀ ಗಳಾಗಿದ್ದು, ಈ ವಲಯದಲ್ಲಿ ಅತಿ ಹೆಚ್ಚು ಅಪಘಾತವಾಗುತ್ತಿರುವ ಹಿನ್ನಲೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಹೊಸ ಸಂಚಾರಿ ನಿಯಮಗಳನ್ನು ಜಾರಿಗೆ ತರಲಾಗಿದೆ.

50 ಕಿ.ಮೀ ಅಂತರದ ಉರ್ಸೆ ಮತ್ತು ಖಲಾಪುರ ನಡುವಿನ ಮಾರ್ಗದಲ್ಲಿ 15 ಕಿ.ಮೀ ಘಾಟಿ ಪ್ರದೇಶವು ಹೆಚ್ಚು ಅಪಘಾತ ಸಂಭಿಸುವ ಪ್ರದೇಶವಾಗಿದ್ದು, ಘಾಟಿ ಪ್ರದೇಶವಿರುವ 15 ಕಿ.ಮೀ ಅಂತರದಲ್ಲಿ ಪ್ರತಿ ವಾಹನಗಳಿಗೂ ಗರಿಷ್ಠ 50 ಕಿ.ಮೀ ವೇಗವನ್ನು ನಿಗದಿ ಪಡಿಸಲಾಗಿದೆ.
MOST READ: ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಇನ್ನುಳಿದ 35 ಕಿ.ಮೀ ವ್ಯಾಪ್ತಿಯನ್ನು ಸಂಚರಿಸಲು ವಾಹನ ಸವಾರರು ಗರಿಷ್ಠ 100 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಘಾಟಿ ಪ್ರದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಕಣ್ಣೀಡಲು ರಡಾರ್ ಸ್ಪೀಡ್ ಸೈನ್ ಬೋರ್ಡ್‍ಗಳನ್ನು ಅಳವಡಿಸಲಾಗಿದೆ.

ಯಾವುದೇ ಸಮಯದಲ್ಲಾದರೂ ಓವರ್ ಸ್ಪೀಡ್ ಕಂಡುಬಂದಲ್ಲಿ ಇ-ಚಲನ್ ಮೂಲಕ ದಂಡ ವಿಧಿಸಲಿದ್ದು, ಅಗಸ್ಟ್ 1ರಿಂದಲೇ ಹೊಸ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದೆ.
MOST READ: ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಇನ್ನು ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇ ಬರೋಬ್ಬರಿ 95ಕಿ.ಮೀ ಅಂತರವಿದ್ದು, ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಚಲಿಸುತ್ತವೆ. ಆರು ಪಥಗಳ ಈ ಎಕ್ಸ್‌ಪ್ರೆಸ್ ವೇನಲ್ಲಿ ಸುಮಾರು 50 ಕಿ.ಮೀ ನಷ್ಟು ಅಪಘಾತ ವಲಯವಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲು ಇದೀಗ ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.